ಜನಸ್ಪಂದನ ನ್ಯೂಸ್, ಡೆಸ್ಕ್ : ಬಿಎಸ್ಎನ್ಎಲ್ (BSNL) ತನ್ನ ಗ್ರಾಹಕರಿಗಾಗಿ ಒಂದು ಗುಡ್ ನ್ಯೂಸ್ ನೀಡಿದೆ. ಅದೆನೆಂದರೆ, ಬರುವ ಮುಂದಿನ ತಿಂಗಳಿನಿಂದ ದೇಶಾಂತರ 4G ಸೇವೆಯನ್ನು ಆರಂಭಿಸಲಿದೆ ಎಂದು ಹೇಳಿದೆ. ಇದಕ್ಕಾಗಿ ದೇಶದ ಎಲ್ಲೆಡೆ 25,000 ದಷ್ಟು 4G ಟವರ್ ನಿರ್ಮಿಸಲಾಗುತ್ತಿದೆ. ದೇಶದ ಎಲ್ಲ ಗ್ರಾಹಕರಿಗೆ 4G ಸಿಮ್ ಹಂಚಿಕೆ ಕಾರ್ಯ ಸಹ ನಡೆಯುತ್ತಿದೆ. ಟಾಟಾ ಗ್ರೂಪ್ ನೇತೃತ್ವದಲ್ಲಿ ಬಿಎಸ್ಎನ್ಎಲ್ 4G ಟೆಲಿಕಾಂ ಕಂಪನಿಗೆ ಸಹಾಯಕವಾಗಲಿದೆ.
ಅಂದಾಜು ಅಕ್ಟೋಬರ್‌ನಿಂದ ದೇಶಾಂತರ ಬಿಎಸ್ಎನ್ಎಲ್ 4G ಸೇವೆಯನ್ನು ಭಾರತ ಸಂಚಾರಿ ನಿಗಮ ಆರಂಭಿಸಲಿದೆ ಎಂದು ಮಾಹಿತಿ ತಿಳಿಸಿದ್ದಾರೆ. ಇದಕ್ಕಾಗಿ ದೇಶದ ಎಲ್ಲೆಡೆ 4G ಗಾಗಿಯೇ 25,000 ಟವರ್‌ಗಳನ್ನು ಸ್ಥಾಪಿಸಿದ್ದಾರೆ. ಈಗಾಗಲೇ ಗ್ರಾಹಕರಿಗೂ ಸಹ 4G ಸಿಮ್‌ಗಳನ್ನು ವಿತರಿಸಲು ವ್ಯವಸ್ಥೆಯನ್ನು ನಡೆಸಲಾಗುತ್ತಿದೆ.
ಇದನ್ನು ಓದಿ : ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ SSLC ಪಾಸಾದವರಿಂದ ಅರ್ಜಿ ಆಹ್ವಾನ.!
ಎಲ್ಲ ನಗರ ಪ್ರದೇಶಗಳಲ್ಲಿ 4G ಸಂಬಂಧಿಸಿದ ಎಲ್ಲ ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದು ಯಶಸ್ವಿಯಾಗಿದೆ. ಆದ್ದರಿಂದಾಗಿ ಈಗ 4G ಸೇವೆಯನ್ನು ಪ್ರಾರಂಭಿಸಲು ಮುಹೂರ್ತ ಕಂಡು ಬಂದಿದೆ. ಸದ್ಯಕ್ಕೆ ಬಿಎಸ್ಎನ್ಎಲ್ 4G ಸೇವೆಯನ್ನು ಪ್ರಾರಂಭಿಸುವ ಮೊದಲು ಇನ್ನು ಕೆಲವು ಪರೀಕ್ಷೆಗಳನ್ನು ಮಾಡಬೇಕು ಎಂದಿದ್ದಾರೆ.
ಭಾರತದ ಖಾಸಗಿ ಟೆಲಿಕಾಂ ಕಂಪನಿಗಳು ತನ್ನ ಗ್ರಾಹಕರಿಗೆ 4G ಸೇವೆ ಆರಂಭಿಸಿದರೂ ಸಹ ಸರ್ಕಾರಿ ಟೆಲಿಕಾಂ (ಬಿಎಸ್ಎನ್ಎಲ್) ಕಂಪನಿಯು ತನ್ನ ಗ್ರಾಹಕರಿಗೆ 2G ಮತ್ತು 3G ಸೇವೆಯನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಕಳೆದ ವರ್ಷ ತನ್ನ 1.8 ಕೋಟಿ ಗ್ರಾಹಕರನ್ನು ಕಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : IBPS : 4,455 ಬ್ಯಾಂಕ್ ಪಿಒ, ಎಂಟಿ ಹುದ್ದೆಗಳ ಅರ್ಜಿಗೆ ಕೊನೆ ದಿನಾಂಕ ವಿಸ್ತರಣೆ ; ಇಲ್ಲಿದೆ ಮಾಹಿತಿ.!
ಟಾಟಾ ಕಂಪನಿಯೊಂದಿಗೆ BSNL 4G ಬೆಂಬಲ : ದೇಶದಲ್ಲಿ ಬಿಎಸ್ಎನ್ಎಲ್ ಟೆಲಿಕಾಂ ಕಂಪನಿ 4G ಜಾರಿಗೆ ತರಲು ಟಾಟಾ ಗ್ರೂಪ್ ನೇತೃತ್ವದ ಒಕ್ಕೂಟವೇ ಮೇ 2023ರಲ್ಲಿ ಬಿಎಸ್ಎನ್ಎಲ್ ಟೆಲಿಕಾಂ ಕಂಪನಿಯಿಂದ 15,000 ಕೋಟಿ ಮೊತ್ತದ ಟವರ್‌ಗಳನ್ನು ಸ್ಥಾಪಿಸಿದೆ. ತೇಜಸ್ ನೆಟ್‌ವರ್ಕ್ ಮತ್ತು ಕೇಂದ್ರ ಸರ್ಕಾರದ ಟೆಲಿಕಾಂ ಕಂಪನಿಯಾದ ಬಿಎಸ್ಎನ್ಎಲ್ ಸಿಮ್ ಅಗತ್ಯ ಉಪಕರಣಗಳನ್ನು ಮತ್ತು ತಂತ್ರಜ್ಞಾನವನ್ನು ಒದಗಿಸುತ್ತದೆ.
ಈಗಾಗಲೇ ಸರ್ಕಾರಿ ಟೆಲಿಕಾಂ ಕಂಪನಿಯಾದ ಬಿಎಸ್ಎನ್ಎಲ್ ಪಂಜಾಬಿ ನಲ್ಲಿರುವ ಟಾಟಾ ಕಂಪನಿಯ ಮತ್ತು ಡಿಓಟಿ ಒಕ್ಕೂಟದಿಂದ ಸಹಾಯದಿಂದ ಸ್ಥಳೀಯರ ಅನುಕೂಲಕ್ಕಾಗಿ ಬಿಎಸ್ಎನ್ಎಲ್ 4G ಸೇವೆಯನ್ನು ಆರಂಭಿಸಲು ಮುಂದಾಗಿದ್ದರಿಂದ 8 ಲಕ್ಷ ಹೊಸ ಚಂದದಾರರನ್ನು ಸಹ ಪಡೆದುಕೊಂಡಿದೆ. ಬಿಎಸ್ಎನ್ಎಲ್ 4G ಮತ್ತು 5G ಸೇವೆ ನೀಡಲು ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಟವರ್‌ಗಳನ್ನು ಸ್ಥಾಪಿಸುವ ನಿರೀಕ್ಷೆಯಲ್ಲಿದೆ.