ಜನಸ್ಪಂದನ ನ್ಯೂಸ್, ಡೆಸ್ಕ್ : ಸನ್ನಿಲಿಯೋನ್ ಎಂಬ ಹೆಸರಿಗೆ ಸಮ್ಮೋಹಕವಾದೊಂದು ಸೆಳೆತವಿದೆ. ಇವತ್ತು ಸನ್ನಿ ಲಿಯೋನ್ ಬಾಲಿವುಡ್‌ನಲ್ಲಿ ಅಷ್ಟೇ ಅಲ್ಲದೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೂಡ ತಮ್ಮ ಅಸ್ತಿತ್ವವನ್ನ ಕಂಡುಕೊಂಡಿದ್ದಾರೆ.
ಇದನ್ನು ಓದಿ : ಯೂಟ್ಯೂಬ್ Video ನೋಡಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ; ಮುಂದೆನಾಯ್ತು ಗೊತ್ತಾ.?
ಈ ಹಿಂದೆ ಡಿ.ಕೆ. ಸಿನಿಮಾದಲ್ಲಿ ಜೋಗಿ ಪ್ರೇಮ್‌ರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದ ಬಾಲಿವುಡ್‌ನ ಮಾದಕ ಬೆಡಗಿ ಸನ್ನಿಲಿಯೋನ್, ಬಳಿಕ ಇಂದ್ರಜಿತ್ ಲಂಕೇಶ್ ಜೊತೆಗೆ ಲವ್ ಯೂ ಆಲಿಯಾ ಚಿತ್ರದಲ್ಲಿ ತುಂಡುಡುಗೆ ತೊಟ್ಟು ಮಸ್ತ್ ಡ್ಯಾನ್ಸ್ ಮಾಡಿದ್ದರು.
ಸದ್ಯ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಯುಐ ಚಿತ್ರದಲ್ಲಿ ಭರ್ಜರಿ ಎಂಟ್ರಿ ಕೊಡುವ ಮೂಲಕ ಪಡ್ಡೆ ಹೈಕ್ಳ ನಿದ್ದೆ ಕದಿಯಲು ಸನ್ನಿಲಿಯೋನ್ ಸ್ಯಾಂಡಲ್‌ವುಡ್ ನತ್ತ ಮುಖ ಮಾಡಿದ್ದಾರೆ.
ಯುಐ ಚಿತ್ರತಂಡವು ಈಗಾಗಲೇ ಸನ್ನಿಲಿಯೋನ್ ಮಾದಕ ಪೋಟೋವನ್ನು ಪ್ರಕಟಿಸಿದ್ದು, ಈ ಸಿನಿಮಾದಲ್ಲಿ ಸನ್ನಿಲಿಯೋನ್ ಕೇವಲ ಹಾಡಿಗೆ ಸ್ಟೆಪ್ಸ್ ಹಾಕುತ್ತಾರರೋ ಅಥವಾ ಒಂದೆರಡು ದೃಶ್ಯಗಳಲ್ಲಿ ನಟಿಸಿ ಹರೆಯದ ಹುಡುಗರ ಎದೆಯಲ್ಲಿ ಚಿಟ್ಟೆ ಬಿಡುತ್ತಾರೋ ಎಂಬ ಮಾಹಿತಿ ಗೊತ್ತಾಗಿಲ್ಲ.
ಇದನ್ನು ಓದಿ : ರಾತ್ರಿ Light’s ಆನ್ ಮಾಡಿ ಮಲಗುತ್ತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ.!
ಯುಐ ಚಿತ್ರವು ಈಗಾಗಲೇ ಭಾರೀ ಸದ್ದು ಮಾಡುತ್ತಿದ್ದು, ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯರ ಜೊತೆಗೆ ಒಬ್ಬ ಹಾಟ್ ನಟಿ ಪ್ರವೇಶಿಸುತ್ತಾರೆ ಎಂಬ ಸುದ್ದಿಯನ್ನು ಹರಿಬಿಟ್ಟಿದ್ದಾರೆ. ಈಗ ಸನ್ನಿಲಿಯೋನ್ ಅವರಿರುವ ಪೋಟೋ ರಿವೀಲ್ ಆಗಿದೆ.
ಯುಐ ಸಿನಿಮಾಗೆ ಜಿ.ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದು ಉಪೇಂದ್ರ ಜೊತೆ ರೀಷ್ಮಾ ನಾಣಯ್ಯ ಹಾಗು ನಿಧಿ ಸುಭಯ್ಯ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದಾರೆ. ಸಿನಿಮಾಗೆ ಹೆಚ್.ಸಿ ವೇಣು ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ ಇದೆ.
ಯುಐನಲ್ಲಿ ಆರ್ಮುಗ ರವಿಶಂಕರ್, ಸಾಧು ಕೋಕಿಲ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಇದೆ. ಇದರ ಜೊತೆಗೆ ಇದೀಗ ಸನ್ನಿ ಲಿಯೋನ್ ಕೂಡ ಸೇರ್ಪಡೆ ಆಗಿದ್ದು ಪಡ್ಡೆ ಹುಡುಗರು ಯಾವಾಗಪ್ಪ ಸಿನಿಮಾ ರಿಲೀಸ್ ಆಗುತ್ತೆ ಅಂತ ಕಾಯ್ತಿದ್ದಾರೆ.