Tuesday, October 14, 2025

Janaspandhan News

HomeGeneral News"Love Breakup" : ಗೆಳತಿಗೆ ಬೈಕ್ ಡಿಕ್ಕಿ ಹೊಡೆದ ಯುವಕ ; ಸಿಸಿಟಿವಿ ದೃಶ್ಯ ವೈರಲ್.!
spot_img
spot_img
spot_img

“Love Breakup” : ಗೆಳತಿಗೆ ಬೈಕ್ ಡಿಕ್ಕಿ ಹೊಡೆದ ಯುವಕ ; ಸಿಸಿಟಿವಿ ದೃಶ್ಯ ವೈರಲ್.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇಂದಿನ ದಿನಗಳಲ್ಲಿ ಪ್ರೀತಿ, ಬ್ರೇಕ್‌ಅಪ್ (love breakup) ಮತ್ತು ಮದುವೆಯ ನಂತರ ಉಂಟಾಗುವ ಅನಿರೀಕ್ಷಿತ ಘಟನೆಗಳು ಹೆಚ್ಚಾಗುತ್ತಿವೆ. ಪರಸ್ಪರ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದರೆ ಕೋಪ, ಹಿಂಸೆ ಮತ್ತು ಅನೇಕ ದುರ್ಘಟನೆಗಳಿಗೆ ಕಾರಣವಾಗುತ್ತಿರುವುದು ಕಂಡುಬರುತ್ತಿದೆ. ಇಂತಹದ್ದೇ ಒಂದು ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಡೆದಿದೆ.

ಕಲ್ಪನಾ ನಗರ ಪ್ರದೇಶದಲ್ಲಿ, ಯುವಕನೊಬ್ಬ ತನ್ನ ಗೆಳತಿಯೊಂದಿಗೆ ನಡೆದ ಜಗಳದ ಬಳಿಕ (love breakup) ಬೈಕ್‌ನಿಂದ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿರುವುದು ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು Constable ಹುದ್ದೆಗಳಿಗೆ ನೇಮಕಾತಿ ; ಸಚಿವ ಡಾ.ಪರಮೇಶ್ವರ.!

ಮಾಹಿತಿ ಪ್ರಕಾರ, ಆರೋಪಿಯ ಹೆಸರು ರಾಜೇಂದ್ರ. ಆತ ಹಲವು ವರ್ಷಗಳಿಂದ ಆ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ಘಟನೆ ನಡೆದ ದಿನ ಇಬ್ಬರ ನಡುವೆ ಸಣ್ಣಪುಟ್ಟ ಜಗಳ ನಡೆದಿದ್ದು, ಯುವತಿ ಕೋಪದಲ್ಲಿ ಕಲ್ಲು ಎಸೆದಿದ್ದಳು.

ಇದರಿಂದ ಕೋಪಗೊಂಡ ರಾಜೇಂದ್ರ ಅತಿವೇಗದಲ್ಲಿ ಬೈಕ್ ಚಲಾಯಿಸಿಕೊಂಡು ಬಂದು ಯುವತಿಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ. ಘಟನೆಯ ನಂತರ ಯುವತಿ ರಸ್ತೆ ಮೇಲೆ ಬಿದ್ದು ತೀವ್ರ ಗಾಯಗೊಂಡಿದ್ದಾಳೆ. ತಕ್ಷಣ ಸ್ಥಳೀಯರು ಓಡಿಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!

ಪ್ರಸ್ತುತ ಆಕೆ ಚಿಕಿತ್ಸೆ ಪಡೆಯುತ್ತಿದ್ದು, ತಲೆಗೆ ಗಂಭೀರ ಗಾಯಗಳಾಗಿರುವುದು ವೈದ್ಯಕೀಯ ಮೂಲಗಳಿಂದ ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಈಗಾಗಲೇ ವೈರಲ್ ಆಗಿದ್ದು, ಯುವಕನ ಉದ್ದೇಶಪೂರ್ವಕ ಕೃತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

👉 ಈ ಘಟನೆ, ಪ್ರೇಮ ಸಂಬಂಧಗಳ (love breakup) ಅಸಮಜ್ಜಿ ಹಾಗೂ ಬ್ರೇಕಪ್ (breakup) ನಂತರ ಉಂಟಾಗುವ ಹಿಂಸೆ ಹೇಗೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ.

ಕತ್ತೆಕಿರುಬವ ತಪ್ಪಿಸಲು ಹೋಗಿ ಪಲ್ಟಿಯಾದ ಪೊಲೀಸ್ ಜೀಪ್ ; ASI ಸಾವು.!
 ಲವ್‌ ಬೇಕಫ್‌ (love breakup) ಹಿನ್ನಲೆ ಬೈಕ್‌ ಗುದ್ದಿಸಿದ ಯುವಕನ ವಿಡಿಯೋ :


“Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!

Post Office

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಭಾರತೀಯ ಅಂಚೆ ಇಲಾಖೆಯ ಅಡಿಯಲ್ಲಿ ಲಭ್ಯವಿರುವ ಹಲವು ಸೇವಿಂಗ್ಸ್ ಸ್ಕೀಮ್‌ಗಳಲ್ಲಿ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office MIS) ಒಂದು ಪ್ರಮುಖ ಯೋಜನೆ.

ಮಾರುಕಟ್ಟೆಯ ಏರಿಳಿತ ಅಥವಾ ರಿಸ್ಕ್ ಇಲ್ಲದೆ, ನಿಗದಿತ ಪ್ರತಿಮಾಸ ಆದಾಯವನ್ನು ಬಯಸುವವರಿಗೆ ಇದು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತೀ ತಿಂಗಳು ಬಡ್ಡಿ ರೂಪದಲ್ಲಿ ಖಚಿತ ಆದಾಯ ಲಭ್ಯವಾಗುತ್ತದೆ.

ಗರ್ಭಪಾತ Pill ಸೇವಿಸಿದ ನಂತರ ಅಪ್ರಾಪ್ತೆಯ ಸಾವು ; ಟ್ಯೂಷನ್ ಶಿಕ್ಷಕನ ಬಂಧನ.!
ಹೂಡಿಕೆ ಮಿತಿಗಳು :
  • ಸಿಂಗಲ್ ಅಕೌಂಟ್ : ಕನಿಷ್ಠ ರೂ.1,000ರಿಂದ ಗರಿಷ್ಠ ರೂ.9 ಲಕ್ಷವರೆಗೆ ಹೂಡಿಕೆ ಮಾಡಬಹುದು.
  • ಜಂಟಿ ಅಕೌಂಟ್ : ಇಬ್ಬರು ಅಥವಾ ಮೂವರು ಸೇರಿ ತೆರೆಯಬಹುದಾದ ಖಾತೆಯಲ್ಲಿ ರೂ.15 ಲಕ್ಷವರೆಗೆ ಹೂಡಿಕೆ ಸಾಧ್ಯ.
  • ಹೂಡಿಕೆಯ ಅವಧಿ 5 ವರ್ಷಗಳ ಲಾಕಿನ್ ಪೀರಿಯಡ್ ಆಗಿರುತ್ತದೆ. ಈ ಅವಧಿಯವರೆಗೆ ಪ್ರತಿ ತಿಂಗಳು ಬಡ್ಡಿ ಆದಾಯ ದೊರೆಯುತ್ತದೆ.
ಬಡ್ಡಿ ದರ :

ಪೋಸ್ಟ್ ಆಫೀಸ್ (Post Office) ಮಾಸಿಕ ಆದಾಯ ಯೋಜನೆಯಲ್ಲಿ ಪ್ರಸ್ತುತ 7.40% ವಾರ್ಷಿಕ ಬಡ್ಡಿ ನೀಡಲಾಗುತ್ತಿದೆ.

Student : ರಸ್ತೆ ಮಧ್ಯೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ದುಷ್ಕರ್ಮಿ ; ಸಿಸಿಟಿವಿ ದೃಶ್ಯ ವೈರಲ್.!
ಮಾಸಿಕ ಆದಾಯ ಎಷ್ಟು ಸಿಗುತ್ತದೆ?
  • ಸಿಂಗಲ್ ಅಕೌಂಟ್ : ರೂ.9 ಲಕ್ಷ ಹೂಡಿಕೆ ಮಾಡಿದರೆ, ತಿಂಗಳಿಗೆ ಸುಮಾರು ರೂ.5,550 ಬಡ್ಡಿ ರೂಪದಲ್ಲಿ ಸಿಗುತ್ತದೆ.
  • ಜಂಟಿ ಅಕೌಂಟ್ : ರೂ.15 ಲಕ್ಷ ಹೂಡಿಕೆ ಮಾಡಿದರೆ, ತಿಂಗಳಿಗೆ ಸುಮಾರು ರೂ.9,250 ಆದಾಯ ದೊರೆಯುತ್ತದೆ.
ಇನ್ನಷ್ಟು ಪ್ರಮುಖ ಅಂಶಗಳು :
  • ಒಬ್ಬ ವ್ಯಕ್ತಿ ಬೇರೆ ಬೇರೆ ಪೋಸ್ಟ್ ಆಫೀಸ್‌ (Post Office) ಗಳಲ್ಲಿ ಹಲವು ಎಂಐಎಸ್ ಖಾತೆಗಳನ್ನು ತೆರೆಯಬಹುದಾದರೂ, ಒಟ್ಟು ಹೂಡಿಕೆ ಮೊತ್ತವು ಸಿಂಗಲ್ ಅಕೌಂಟ್‌ಗೆ ರೂ.9 ಲಕ್ಷ ಅಥವಾ ಜಂಟಿ ಅಕೌಂಟ್‌ಗೆ ರೂ.15 ಲಕ್ಷ ಮೀರಬಾರದು.
  • ಈ ಯೋಜನೆ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಮಾರುಕಟ್ಟೆ ಅಪಾಯ ಇರುವುದಿಲ್ಲ.
  • ಹೂಡಿಕೆಯ ಅವಧಿ ಪೂರ್ಣಗೊಂಡ ನಂತರ, ಠೇವಣಿ ಹಣವನ್ನು ವಾಪಸ್ ಪಡೆಯಬಹುದು ಅಥವಾ ಮತ್ತೊಂದು ಸ್ಕೀಮ್‌ಗೆ ಮರುಹೂಡಿಕೆ ಮಾಡಬಹುದು.
15 ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಆರೋಪ : Swamiji ವಿರುದ್ಧ FIR ದಾಖಲು.!

ಸಾರಾಂಶ : ಪೋಸ್ಟ್ ಆಫೀಸ್ (Post Office) ಮಾಸಿಕ ಆದಾಯ ಯೋಜನೆ ಕಡಿಮೆ ಅಪಾಯದೊಂದಿಗೆ ಖಚಿತ ಆದಾಯ ಬಯಸುವವರಿಗೆ ಉತ್ತಮ ಹೂಡಿಕೆ ಮಾರ್ಗವಾಗಿದೆ. ಸಿಂಗಲ್ ಅಥವಾ ಜಂಟಿ ಅಕೌಂಟ್ ಮೂಲಕ ಹೂಡಿಕೆ ಮಾಡಿದರೆ ಪ್ರತೀ ತಿಂಗಳು ನಿಗದಿತ ಬಡ್ಡಿ ಆದಾಯ ಸಿಗುತ್ತದೆ.

ನಿವೃತ್ತಿ ಹೊಂದಿದವರು ಅಥವಾ ಸ್ಥಿರ ಆದಾಯ ಬಯಸುವವರು ಈ Post Office montly income ಯೋಜನೆಗೆ ಸೇರಿಕೊಳ್ಳಬಹುದು.

Disclaimer : ಇಲ್ಲಿ ನೀಡಿರುವ ಮಾಹಿತಿ ಸಾಮಾನ್ಯ ಹಣಕಾಸು ವಿವರಗಳಾಗಿದ್ದು, ಹೂಡಿಕೆ ಮಾಡುವ ಮೊದಲು ಅಧಿಕೃತ ಪೋಸ್ಟ್ ಆಫೀಸ್ (Post Office) ಅಥವಾ ಹಣಕಾಸು ತಜ್ಞರ ಸಲಹೆ ಪಡೆಯುವುದು ಸೂಕ್ತ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments