Tuesday, October 14, 2025

Janaspandhan News

HomeGeneral NewsParlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!
spot_img
spot_img
spot_img

Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!

- Advertisement -

ಜನಸ್ಪಂದನ ನ್ಯೂಸ್‌, ಕೊಡಗು : ವೀರಾಜಪೇಟೆ ಪಟ್ಟಣದಲ್ಲಿ ಬ್ಯೂಟಿ ಪಾರ್ಲರ್ (Beauty Parlour) ಪರವಾನಗಿಯ ಹೆಸರಿನಲ್ಲಿ ಅಕ್ರಮವಾಗಿ ಸ್ಪಾ ಮತ್ತು ಮಸಾಜ್ ಸೆಂಟರ್ ನಡೆಸುತ್ತಿದ್ದ ನಾಲ್ವರ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಾಹಿತಿಯ ಪ್ರಕಾರ, ಕೇರಳ ಮೂಲದ ವ್ಯಕ್ತಿ ಖಾಸಗಿ ಕಟ್ಟಡವನ್ನು ಬಾಡಿಗೆಗೆ ಪಡೆದು, ಬ್ಯೂಟಿ ಪಾರ್ಲರ್ (Beauty Parlour) ಪ್ರಾರಂಭಿಸಿದ್ದರು. ಆದರೆ, ವಾಸ್ತವದಲ್ಲಿ ಅವರು ಪರವಾನಗಿ ನಿಯಮ ಉಲ್ಲಂಘಿಸಿ ಅಕ್ರಮ ಸ್ಪಾ ಸೆಂಟರ್ ನಡೆಸುತ್ತಿದ್ದಾರೆ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.‌

“Wife on Rent” ; ಇಲ್ಲಿ ಸುಂದರ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ.!
ಪಾರ್ಲರ್ (Beauty Parlour) ಮೇಲೆ ದಾಳಿ ; ಬಯಲಾದ ಮಾಹಿತಿ :

ಸ್ಥಳೀಯ ನಿವಾಸಿಗಳು ಕಳೆದ ಆರು ತಿಂಗಳಿಂದ ಆ ಕಟ್ಟಡದಲ್ಲಿ ಸಂಶಯಾಸ್ಪದ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದಾಗ, ಪಾರ್ಲರ್ (Beauty Parlour) ಹೆಸರಿನಲ್ಲಿ ಸ್ಪಾ, ಮಸಾಜ್ ಸೆಂಟರ್ ಹಾಗೂ ಅನುಮಾನಾಸ್ಪದ ಚಟುವಟಿಕೆಗಳು (ವೇಶ್ಯಾವಾಟಿಕೆ) ನಡೆಯುತ್ತಿರುವುದು ಪತ್ತೆಯಾಯಿತು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಯುವತಿ ಸೇರಿದಂತೆ ಮಂಗಳೂರು ಮತ್ತು ತಮಿಳುನಾಡು ಮೂಲದ ಮಹಿಳೆಯರನ್ನು ಪೊಲೀಸರು ರಕ್ಷಣೆ ಮಾಡಿದರು.

Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.
ಆರೋಪಿಗಳ ಬಂಧನ :

ಬಂಧಿತರು ಕೇರಳದ ಕಣ್ಣೂರು ಮೂಲದ ಪ್ರದೀಪನ್.ಪಿ.ಪಿ (48), ಕಲೇಶ್ ಕುಮಾರ್ (45), ಶಾಜಿ (38) ಹಾಗೂ ವೀರಾಜಪೇಟೆ ತಾಲೂಕಿನ ಅಮ್ಮತ್ತಿ ನಿವಾಸಿ ಎ. ಪೊನ್ನಣ್ಣ (48) ಎಂದು ಪೊಲೀಸರು ತಿಳಿಸಿದ್ದಾರೆ.

Parlour
Arrested
ಮುಂದುವರೆದ ತನಿಖೆ :

ಪಾರ್ಲರ್ (Beauty Parlour) ನಲ್ಲಿ ಅಕ್ರಮವಾಗಿ ಸ್ಪಾ ಸೆಂಟರ್ ನಡೆಸುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ. ಮುಂದಿನ ಹಂತದಲ್ಲಿ, ಈ ಪ್ರಕರಣದ ಹಿಂದೆ ಇನ್ನೂ ಯಾರು ಸೇರಿದ್ದಾರೆ, ಯಾವುದೇ ಪಿಂಪ್ ಅಥವಾ ಸಂಘಟಿತ ಜಾಲವಿದೆಯೇ ಎಂಬುದನ್ನು ಪತ್ತೆಹಚ್ಚಲು ಉನ್ನತ ಅಧಿಕಾರಿಗಳ ನಿರ್ದೇಶನದಲ್ಲಿ ತನಿಖೆ ನಡೆಯಲಿದೆ.

BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್
ಸಾರ್ವಜನಿಕರಲ್ಲಿ ಚರ್ಚೆ :

ಕಳೆದ ಆರು ತಿಂಗಳಿನಿಂದ ತಾಲೂಕು ಕಚೇರಿ ಹಾಗೂ ಪೊಲೀಸ್ ವಸತಿ ಗೃಹದ ಸಮೀಪದಲ್ಲೇ ಈ ಅಕ್ರಮ ಚಟುವಟಿಕೆ ನಡೆದಿದ್ದರೂ ಸಂಬಂಧಿಸಿದ ಇಲಾಖೆಯ ಗಮನಕ್ಕೆ ಬಾರದಿರುವುದು ಸ್ಥಳೀಯರಲ್ಲಿ ಪ್ರಶ್ನೆ ಮೂಡಿಸಿದೆ.

ವೀರಾಜಪೇಟೆಯ ಕೆಲ ಬಡಾವಣೆಯಲ್ಲಿ ಇಂತಹ ಹೈಟೆಕ್ ವೇಶ್ಯಾವಾಟಿಕೆ (High-tech prostitution) ನಡೆಯುತ್ತಿದೆ ಎಂಬುದಾಗಿ ಸಾರ್ವಜನಿಕ ವಲಯದಲ್ಲೂ ಚರ್ಚೆ ನಡೆಯುತ್ತಿದೆ. ಪೊಲೀಸರ ಸಮಗ್ರ ತನಿಖೆಯಿಂದ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.


 

Mosquito : “ಸಾಯಿಸಿದ ನಂತರ ಅಂಟಿಸಿ ನಂಬರ್ ಹಾಕುತ್ತಿರುವ ವ್ಯಕ್ತಿ ; ವಿಚಿತ್ರ ಹವ್ಯಾಸದ ವಿಡಿಯೋ ವೈರಲ್”.!

Mosquito

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜಗತ್ತಿನಲ್ಲಿ ಜನರ ಸ್ವಭಾವ ಮತ್ತು ಹವ್ಯಾಸಗಳು ವಿಭಿನ್ನವಾಗಿರುತ್ತವೆ. ಕೆಲವರಿಗೆ ಪುಸ್ತಕ ಓದುವುದು, ಸಿನಿಮಾ ನೋಡುವುದು, ಕ್ರಾಫ್ಟ್ ಮಾಡುವುದು ಇಷ್ಟವಾಗಿದೆಯಾದರೆ, ಕೆಲವರು ರೀಲ್ಸ್ ಮಾಡುವುದು ಅಥವಾ ಸಂಗೀತದಲ್ಲಿ ತಲ್ಲೀನರಾಗುವುದು ಇಷ್ಟಪಡುತ್ತಾರೆ.

ಆದರೆ ಇತ್ತೀಚೆಗೆ ಒಬ್ಬ ವ್ಯಕ್ತಿಯ ಹವ್ಯಾಸ ಎಲ್ಲರನ್ನೂ ಆಶ್ಚರ್ಯಕ್ಕೊಳಪಡಿಸಿದೆ. ಅವನ ಹವ್ಯಾಸವೇನೆಂದರೆ, ಸಾಯಿಸಿದ ಸೊಳ್ಳೆ (Mosquito) ಗಳನ್ನು ಸಂಗ್ರಹಿಸುವುದು.!

“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!
ಸೊಳ್ಳೆ (Mosquito) ಗಳನ್ನು ಸಾಯಿಸಿ ಸಂಗ್ರಹಿಸುವ ಹವ್ಯಾಸ :

ಫೇಸ್‌ಬುಕ್‌ನ Bright Life ಎಂಬ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬನು ತನ್ನನ್ನು ಕಚ್ಚಿದ ಸೊಳ್ಳೆ (Mosquito) ಗಳನ್ನು ಸಾಯಿಸಿ ಒಂದು ವಿಶೇಷ ರೀತಿಯಲ್ಲಿ ಸಂಗ್ರಹಿಸುತ್ತಿರುವುದು ಕಾಣಬಹುದು.

ಆತ ಸೊಳ್ಳೆ (Mosquito) ಯನ್ನು ಹಿಡಿದು ಡಬ್ಬಿಯೊಳಗೆ ಹಾಕಿ, ಶಾಕ್‌ ಟ್ರೀಟ್ಮೆಂಟ್ ನೀಡುವ ಮೂಲಕ ಸಾಯಿಸುತ್ತಾನೆ. ನಂತರ ಬಿಳಿ ಹಾಳೆಯ ಮೇಲೆ ಅಂಟಿಸಿ, ಅದರ ಸಾಯಿಸಿದ ದಿನಾಂಕ ಹಾಗೂ ಸಮಯವನ್ನು ಬರೆದು ಸಂಗ್ರಹಿಸುತ್ತಾನೆ.

“Wife on Rent” ; ಇಲ್ಲಿ ಸುಂದರ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ.!
ವೈರಲ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ :

ಈ ವಿಚಿತ್ರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವರು ವೀಕ್ಷಿಸಿ ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ.

  • ಒಬ್ಬ ಬಳಕೆದಾರ, “ಸೊಳ್ಳೆ (Mosquito) ಕೂಡ ದೇವರ ಸೃಷ್ಟಿಯೇ, ಅದು ತನ್ನ ಏಳು ದಿನಗಳ ಜೀವನದಲ್ಲಿ ಒಮ್ಮೆ ರಕ್ತ ಕುಡಿಯುವುದು ಸಹಜ. ಆದರೂ ನಾನು ದಿನಕ್ಕೆ ಕನಿಷ್ಠ 20 ಸೊಳ್ಳೆ ಹೊಡೆದು ಸಾಯಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ.
  • ಇನ್ನೊಬ್ಬರು ವ್ಯಂಗ್ಯವಾಗಿ, “ಈತನಿಗೆ ಬೇರೆ ಕೆಲಸವಿಲ್ಲವೇ? ಸೊಳ್ಳೆಗಳನ್ನು ಸಾಯಿಸಿ ಹಾಳೆಗೆ ಅಂಟಿಸಿ ಮರಣ ದಿನಾಂಕ ಬರೆಯೋದು ಒಂದು ವಿಭಿನ್ನ ಅಂತ್ಯಸಂಸ್ಕಾರದಂತೆ ಇದೆ” ಎಂದು ಬರೆದಿದ್ದಾರೆ.
  • ಮತ್ತೊಬ್ಬರು, “ಇವನೊಬ್ಬ ಮಾನಸಿಕ ಸಮಸ್ಯೆಗೊಳಗಾದವನಿರಬೇಕು” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ :

BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್
ನೆಟ್ಟಿಗರ ಚರ್ಚೆಗೆ ಕಾರಣ :

ಸಾಧಾರಣವಾಗಿ ಜನರು ಹವ್ಯಾಸಗಳ ಮೂಲಕ ಮನರಂಜನೆ ಪಡೆಯುತ್ತಾರೆ. ಆದರೆ ಈ ವ್ಯಕ್ತಿಯಂತಹ ವಿಚಿತ್ರ ಹವ್ಯಾಸಗಳು ಸಾಮಾಜಿಕ ಜಾಲತಾಣದಲ್ಲಿ ಸದಾ ಕುತೂಹಲ ಹುಟ್ಟಿಸುತ್ತವೆ. ಕೆಲವರಿಗೆ ಇದು ನಗುವಿಗೆ ಕಾರಣವಾದರೆ, ಕೆಲವರಿಗೆ ಆಕ್ರೋಶಕ್ಕೂ ಕಾರಣವಾಗಿದೆ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments