“ಫಸ್ಟ್ ನೈಟ್” ನಿರಾಕರಣೆ: ಠಾಣೆ ಮೆಟ್ಟಿಲೇರಿದ ಪತ್ನಿ – ಪತಿ ಸೇರಿ 6 ಮಂದಿಗೆ FIR.

“ಫಸ್ಟ್ ನೈಟ್” ನಿರಾಕರಣೆ: ಠಾಣೆ ಮೆಟ್ಟಿಲೇರಿದ ಪತ್ನಿ

ಜನಸ್ಪಂದನ ನ್ಯೂಸ್‌, ಬೆಂಗಳೂರು : ಬೆಂಗಳೂರು ನಗರದಲ್ಲಿ ದಿನೇ ದಿನೇ ವಿಚಿತ್ರ ಹಾಗೂ ಆತಂಕಕಾರಿ ಪ್ರಕರಣಗಳು ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ವಿಶೇಷವಾಗಿ ವಿದ್ಯಾವಂತರೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಘಟನೆಗಳು ಸಮಾಜದಲ್ಲಿ ಚರ್ಚೆಗೆ ಗ್ರಾಸವಾಗುತ್ತಿವೆ.

ಈ ನಡುವೆ, ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಅಪರೂಪದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.

‘ಫಸ್ಟ್ ನೈಟ್’ ನಿರಾಕರಣೆ ಆರೋಪ :

ನಗರದ ಸುಬ್ರಹ್ಮಣ್ಯಪುರ ಪ್ರದೇಶದಲ್ಲಿ ಮಹಿಳೆಯೊಬ್ಬರು ತಮ್ಮ ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಪ್ರಕರಣ ಪೊಲೀಸ್ ಠಾಣೆಗೆ ತಲುಪಿದೆ. ಮದುವೆಯಾಗಿ ಹಲವು ತಿಂಗಳುಗಳಾದರೂ ಪತಿ ದೈಹಿಕ ಸಂಬಂಧ (ಫಸ್ಟ್ ನೈಟ್) ವನ್ನು ನಿರಾಕರಿಸುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಹಿಳೆಯ ಹೇಳಿಕೆಯ ಪ್ರಕಾರ, ಗುಬ್ಬಲಾಲ ನಿವಾಸಿ ರಾಘವೇಂದ್ರ ಎಂಬಾತನೊಂದಿಗೆ ಮದುವೆಯಾದ ನಂತರ, ಸಾಮಾನ್ಯ ವೈವಾಹಿಕ ಜೀವನದ ನಿರೀಕ್ಷೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಆದರೆ ಮದುವೆಯ ದಿನದಿಂದಲೇ ಪತಿ ತನ್ನಿಂದ ದೂರವಿದ್ದು, ಯಾವುದೇ ರೀತಿಯ ದೈಹಿಕ ಅಥವಾ ಭಾವನಾತ್ಮಕ ಸಂಬಂಧ ಬೆಳೆಸಲು ಆಸಕ್ತಿ ತೋರಲಿಲ್ಲ ಎಂದು ಆರೋಪಿಸಲಾಗಿದೆ.

ಈ ನಡೆ ತನ್ನ ಮೇಲೆ ನಿರಂತರ ಮಾನಸಿಕ ಒತ್ತಡ ಉಂಟುಮಾಡಿದ್ದು, ದಾಂಪತ್ಯ ಜೀವನವೇ ಕುಸಿತಗೊಂಡಿದೆ ಎಂದು ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ವರದಕ್ಷಿಣೆ ಕಿರುಕುಳ ಆರೋಪ :

ಇದರ ಜೊತೆಗೆ, ಮದುವೆಯ ಸಮಯದಲ್ಲಿ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ನೀಡಿದ್ದರೂ ಸಹ, ಪತಿ ಮತ್ತು ಅವರ ಕುಟುಂಬ ಸದಸ್ಯರು ನಿರಂತರವಾಗಿ ವರದಕ್ಷಿಣೆಗಾಗಿ ಒತ್ತಾಯಿಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

ಅತ್ತೆ-ಮಾವ ಸೇರಿ ಕುಟುಂಬದ ಹಲವರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಲವಾರು ತಿಂಗಳು ಕಿರುಕುಳ :

ಮಹಿಳೆಯ ದೂರಿನ ಪ್ರಕಾರ, 2024ರ ಜೂನ್‌ನಿಂದ ಡಿಸೆಂಬರ್‌ವರೆಗೆ ಹಲವು ತಿಂಗಳುಗಳ ಕಾಲ ಕಿರುಕುಳ ಮುಂದುವರಿದಿದೆ. ಈ ಅವಧಿಯಲ್ಲಿ ಪತಿ ಆಕೆಯನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಹೋಗುತ್ತಿದ್ದಲ್ಲದೆ, ಯಾವುದೇ ರೀತಿಯ ಸಂವಹನವನ್ನೂ ನಡೆಸದೇ ದೂರವಿದ್ದನೆಂದು ಆರೋಪಿಸಲಾಗಿದೆ.

ಈ ಪರಿಸ್ಥಿತಿ ಮುಂದುವರಿದ ಕಾರಣ, ಮಹಿಳೆ ಕಾನೂನು ಸಹಾಯ ಪಡೆಯಲು ಮುಂದಾಗಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನು ಓದಿ : ಮುತ್ತಿನಂತೆ ಹೊಳೆಯುವ ಹಲ್ಲುಗಳಿಗೆ ಮನೆಮದ್ದು: ನೈಸರ್ಗಿಕ ಟೂತ್‌ಪೇಸ್ಟ್ ವಿಧಾನ.

6 ಮಂದಿಗೆ ಎಫ್‌ಐಆರ್ :

ಮಹಿಳೆಯ ದೂರಿನ ಆಧಾರದ ಮೇಲೆ, ಸುಬ್ರಹ್ಮಣ್ಯಪುರ ಪೊಲೀಸರು ಪತಿ ಸೇರಿದಂತೆ ಒಟ್ಟು 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ವರದಕ್ಷಿಣೆ ನಿಷೇಧ ಕಾಯ್ದೆ.
  • ಬಿಎನ್‌ಎಸ್ (BSN) ಸೆಕ್ಷನ್ 85 (ಪತಿ ಅಥವಾ ಸಂಬಂಧಿಕರಿಂದ ಕ್ರೌರ್ಯ).
  • ಬಿಎನ್‌ಎಸ್ ಸೆಕ್ಷನ್ 115(2) (ಉದ್ದೇಶಪೂರ್ವಕವಾಗಿ ನೋವುಂಟುಮಾಡುವುದು).

ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Disclaimer : ಈ ಸುದ್ದಿಯಲ್ಲಿ (ಫಸ್ಟ್ ನೈಟ್) ಉಲ್ಲೇಖಿಸಿರುವ ಆರೋಪಗಳು ದೂರುದಾರರ ಹೇಳಿಕೆ ಮತ್ತು ಪೊಲೀಸರ ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ. ಪ್ರಕರಣದ ಅಂತಿಮ ತೀರ್ಪು ನ್ಯಾಯಾಲಯದ ಪರಿಶೀಲನೆಗೆ ಒಳಪಟ್ಟಿರುತ್ತದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top