ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಸೈಕಲ್ ಗುದ್ದಿಸಿದ ಬಾಲಕ

“ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಸೈಕಲ್ ಗುದ್ದಿಸಿದ ಬಾಲಕ”; ಮುಂದೆನಾಯ್ತು? ವಿಡಿಯೋ ವೈರಲ್.

ಜನಸ್ಪಂದನ ನ್ಯೂಸ್, ಡೆಸ್ಕ್ : ಸಣ್ಣ ಅಪಘಾತದ ಬಳಿಕ ಭಯದಿಂದ ಓಡಿಹೋಗದೇ, ತಾನು ಮಾಡಿದ ತಪ್ಪನ್ನು ಸರಿಪಡಿಸಲು ಪ್ರಯತ್ನಿಸಿದ ಬಾಲಕನ ನಡವಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ಸೈಕಲ್‌ನಲ್ಲಿ ಬರುತ್ತಿದ್ದ ಬಾಲಕನೊಬ್ಬ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಅಜಾಗರೂಕತೆಯಿಂದ ಗುದ್ದಿದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ವಿಡಿಯೋದಲ್ಲಿ ಕಾಣುವಂತೆ, ಸೈಕಲ್‌ನಲ್ಲಿ ಸಾಗುತ್ತಿದ್ದ ಆತ ಬೈಕ್‌ಗೆ ತಗುಲಿದ ಪರಿಣಾಮ ಬೈಕ್‌ನ ನಂಬರ್ ಪ್ಲೇಟ್ ಕೆಳಗೆ ಬಿದ್ದಿದೆ.

ಈ ಘಟನೆಯಿಂದ ಗಾಬರಿಯಾದ ಆತ, ಅಲ್ಲಿಂದ ಓಡಿಹೋಗುವ ಬದಲು ನಂಬರ್ ಪ್ಲೇಟ್ ಅನ್ನು ಮತ್ತೆ ಜೋಡಿಸಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ.

ವಿಡಿಯೋ :

Courtesy : Social media

ತಪ್ಪನ್ನು ಒಪ್ಪಿಕೊಂಡ ಬಾಲಕ :

ತಾನು ಮಾಡಿದ ತಪ್ಪನ್ನು ಅರಿತ ಆತ, ನಂಬರ್ ಪ್ಲೇಟ್ ಅನ್ನು ಸರಿಪಡಿಸಲು ಹಲವು ಬಾರಿ ಪ್ರಯತ್ನಿಸಿದ್ದಾನೆ.

ಆದರೆ ಅದು ಸರಿಯಾಗಿ ಜೋಡಿಸಲು ಸಾಧ್ಯವಾಗದೇ, ಅಲ್ಲೇ ನಿಂತು ಬೈಕ್ ಮಾಲೀಕರು ಬರುವವರೆಗೆ ಕಾಯುತ್ತಿದ್ದಾನೆ. ಈ ನಡುವೆ ಅವನು ನಂಬರ್ ಪ್ಲೇಟ್ ಅನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ದೃಶ್ಯವು ಗಮನಾರ್ಹವಾಗಿದೆ.

ಸ್ವಲ್ಪ ಸಮಯದ ಬಳಿಕ ಬೈಕ್ ಸವಾರ ಸ್ಥಳಕ್ಕೆ ಬಂದಾಗ, ಆತ ಅಲ್ಲಿಯೇ ನಿಂತು ಘಟನೆ ಕುರಿತು ವಿವರಿಸಿದ್ದಾನೆ. ಬಳಿಕ ಬೈಕ್ ಸವಾರ ನಂಬರ್ ಪ್ಲೇಟ್ ಅನ್ನು ಸರಿಪಡಿಸುವ ವೇಳೆ ಬಾಲಕ ಕೂಡ ಅಲ್ಲೇ ನಿಂತು ಸಹಕರಿಸಿದ್ದಾನೆ.

ಮನಸಿಗೆ ತುಂಬಾ ಹತ್ತಿರದ ದೃಶ್ಯ :

ಆತನ ಪ್ರಾಮಾಣಿಕತೆ ಹಾಗೂ ಜವಾಬ್ದಾರಿತನ ಕಂಡು ಬೈಕ್ ಸವಾರ ಅವನನ್ನು ತಬ್ಬಿಕೊಂಡಿರುವ ದೃಶ್ಯವೂ ವಿಡಿಯೋದಲ್ಲಿ ಕಾಣುತ್ತದೆ.

ಈ ಘಟನೆ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿ ವೈರಲ್ ಆಗಿದೆ.

ಇದನ್ನು ಓದಿ : ಡ್ರಾಮಾ ಮಾಡಿದ್ರೆ ಹೀಗೆ ಮಾಡಬೇಕು! ಆಹಾರಕ್ಕಾಗಿ ಎರಡು ಕಾಲು ಇಲ್ಲದಂತೆ ನಟಿಸಿದ ನಾಯಿಯ ವಿಡಿಯೋ ವೈರಲ್.!

ಈ ವಿಡಿಯೋ ನೋಡಿದ ನೆಟ್ಟಿಗರು ಬಾಲಕನ ಸರಳತೆ ಮತ್ತು ಸತ್ಯನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. “ಸಣ್ಣ ವಯಸ್ಸಿನಲ್ಲೇ ಇಂತಹ ಜವಾಬ್ದಾರಿ ಭಾವನೆ ಇದ್ದರೆ ಸಮಾಜಕ್ಕೆ ಉತ್ತಮ ಸಂದೇಶ” ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Disclaimer : ಈ ಸುದ್ದಿಯಲ್ಲಿ ಉಲ್ಲೇಖಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳ ಆಧಾರಿತವಾಗಿದೆ. ಘಟನೆಯ ನಿಖರ ಸ್ಥಳ ಮತ್ತು ದಿನಾಂಕವನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ. ಯಾರನ್ನೂ ನೋಯಿಸುವ ಉದ್ದೇಶ ಇಲ್ಲ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top