ರೈಲ್ವೇ ಸ್ಟೇಷನ್ ಫ್ಲಾಟ್‌ಫಾರ್ಮ್‌ನಲ್ಲಿ ಅಸಭ್ಯ ವರ್ತನೆ: ಯುವ ಜೋಡಿ ವಿಡಿಯೋ ವೈರಲ್.!

ಯುವ ಜೋಡಿಯ ಅಸಭ್ಯ ವರ್ತನೆ

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸೋಶಿಯಲ್ ಮೀಡಿಯಾ, ಝೆನ್‌ಜಿ ಯುಗ ಮತ್ತು ಮುಕ್ತ ಚಿಂತನೆಯ ಹೆಸರಿನಲ್ಲಿ ಯುವ ಜನಾಂಗ ಹೊಸ ದಾರಿಯಲ್ಲಿ ಸಾಗುತ್ತಿರುವುದು ಸತ್ಯ. ಆದರೆ ಈ ಮುಕ್ತತೆಯೇ ಕೆಲ ಸಂದರ್ಭಗಳಲ್ಲಿ ಮಿತಿಮೀರಿ ಸಮಾಜದ ಸಂಸ್ಕೃತಿ ಹಾಗೂ ನಾಗರೀಕ ಮೌಲ್ಯಗಳಿಗೆ ಧಕ್ಕೆಯಾಗುತ್ತಿರುವುದು ಕಳವಳಕಾರಿಯಾಗಿದೆ.

ಪ್ರೀತಿ, ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಆಯ್ಕೆಯ ಹೆಸರಿನಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಖತ್ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳದಲ್ಲಿ ನಡೆದ ಅಸಭ್ಯ ವರ್ತನೆಗೆ ಸಂಬಂಧಿಸಿದೆ. ವೈರಲ್ ವಿಡಿಯೋದಲ್ಲಿ ಯುವ ಜೋಡಿಯೊಂದು ರೈಲ್ವೇ ಸ್ಟೇಷನ್‌ನ ಫ್ಲಾಟ್‌ಫಾರ್ಮ್‌ನಲ್ಲಿ ಅಸಂಯಮಿತವಾಗಿ ವರ್ತಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.

ಯುವ ಜೋಡಿಯ ಅಸಭ್ಯ ವರ್ತನೆಯ ವಿಡಿಯೋ :

Courtesy : Social Media / Twitter 

ಸಾರ್ವಜನಿಕ ಸ್ಥಳದಲ್ಲೇ ನಾಗರೀಕ ಪ್ರಜ್ಞೆ ಇಲ್ಲದಂತೆ ನಡೆದ ಈ ಘಟನೆ ವ್ಯಾಪಕ ಟೀಕೆಗೆ ಕಾರಣವಾಗಿದೆ.

ವಿಡಿಯೋ ಆರಂಭದಲ್ಲಿ ಯಾರೋ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿರುವುದು ಕಂಡುಬರುತ್ತದೆ. ಫ್ಲಾಟ್‌ಫಾರ್ಮ್‌ನಲ್ಲಿ ಹಾಸಿಗೆ ಹಾಸಿಕೊಂಡು ಮಲಗಿದ್ದ ಜೋಡಿಯ ಮೇಲಿದ್ದ ಬೆಡ್‌ಶೀಟ್ ಅತಿಯಾಗಿ ಚಲಿಸುತ್ತಿರುವುದು ಗಮನಕ್ಕೆ ಬಂದಿದೆ.

ಈ ವೈರಲ್‌ ವಿಡಿಯೋ ನೋಡಿ : ನಡುರಸ್ತೆಯಲ್ಲಿಯೇ ಮಹಿಳೆಗೆ 15 ನಿಮಿಷ ಲೈಂಗಿಕ ಕಿರುಕುಳ: ಸಿಸಿಟಿವಿ ವೈರಲ್.

ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು ಅವರ ಮೇಲಿದ್ದ ಬೆಡ್‌ಶೀಟ್ ಅನ್ನು ಎಳೆದು ಹಾಕಿರುವ ದೃಶ್ಯವೂ ವಿಡಿಯೋದಲ್ಲಿ ದಾಖಲಾಗಿದೆ.

ಬೆಡ್‌ಶೀಟ್ ತೆಗೆದ ಬಳಿಕ ಕಂಡ ದೃಶ್ಯವು ಅಲ್ಲಿ ಇದ್ದವರಿಗೂ ಮುಜುಗರ ಉಂಟುಮಾಡುವಂತಿತ್ತು ಎಂದು ಹೇಳಲಾಗುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಜೋಡಿಯನ್ನು ಕಂಡು ಆ ವ್ಯಕ್ತಿಯೇ ಮತ್ತೆ ಅವರ ಮೇಲೆ ಬೆಡ್‌ಶೀಟ್ ಹಾಕಿ ಅಲ್ಲಿಂದ ಹೊರನಡೆದಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಈ ವಿಡಿಯೋ ಯಾವ ರೈಲ್ವೇ ಸ್ಟೇಷನ್‌ನದ್ದು, ಯಾವ ರಾಜ್ಯಕ್ಕೆ ಸಂಬಂಧಿಸಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ದೃಶ್ಯಗಳು ಸೋಶಿಯಲ್ ಮೀಡಿಯಾ (Social Media) ದಲ್ಲಿ ವೇಗವಾಗಿ ಹರಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.

  • “ರೈಲ್ವೇ ನಿಲ್ದಾಣದಲ್ಲಿ ಕಡಿಮೆ ವೆಚ್ಚದಲ್ಲಿ ವಿಶ್ರಾಂತಿ ಕೊಠಡಿಗಳು ಲಭ್ಯವಿರುವಾಗ, ಸಾರ್ವಜನಿಕ ಸ್ಥಳದಲ್ಲೇ ಇಂಥ ವರ್ತನೆ ನಡೆಸುವುದು ಅಪರಾಧಕ್ಕೆ ಸಮಾನ” ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
  • ಒಂದೆಡೆ ಯುವ ಜೋಡಿಯ ಅಸಭ್ಯ ವರ್ತನೆಗೆ ವಿರೋಧ ವ್ಯಕ್ತವಾಗಿದ್ದರೆ, ಇನ್ನೊಂದೆಡೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ, ಸ್ವತಃ ಬೆಡ್‌ಶೀಟ್ ಎಳೆದು ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯ ವರ್ತನೆಯನ್ನೂ ತಪ್ಪೆಂದು ಹಲವರು ಪ್ರಶ್ನಿಸಿದ್ದಾರೆ.
  • “ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಕಾಪಾಡುವುದು ಎಲ್ಲರ ಹೊಣೆ. ಆದರೆ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು” ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಇದನ್ನ ಓದಿ : ವ್ಯಾಲೆಂಟೈನ್ಸ್ ಡೇಗೂ ಮುನ್ನ ಮಾಲ್‌ಗೆ ಪ್ರೇಯಸಿಯನ್ನು ಕರೆತಂದ ಪ್ರೇಮಿ ; ಪತ್ನಿ ಆಗಮನದಿಂದ ಆಗಿದ್ದೇನು?

ಸೋಶಿಯಲ್ ಮೀಡಿಯಾ ಮೂಲಕ ಇಂಥ ವಿಡಿಯೋಗಳು ವೈರಲ್ ಆಗುತ್ತಿರುವುದು ಯುವ ಜನಾಂಗದ ಮೇಲೆ ತಪ್ಪು ಸಂದೇಶ ನೀಡುವ ಅಪಾಯವಿದೆ ಎಂದು ಸಾಮಾಜಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮುಕ್ತತೆ ಎಂಬ ಹೆಸರಿನಲ್ಲಿ ಮಿತಿಮೀರಿದ ವರ್ತನೆ ಸಮಾಜದ ಸಂಸ್ಕೃತಿ, ಕಾನೂನು ಹಾಗೂ ಸಾರ್ವಜನಿಕ ಶಿಸ್ತುಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂಬುದು ಅವರ ಅಭಿಪ್ರಾಯ. ಈ ಘಟನೆ ಮತ್ತೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು, ಸಂಯಮ ಮತ್ತು ನಾಗರೀಕ ಪ್ರಜ್ಞೆಯ ಅಗತ್ಯತೆಯನ್ನು ನೆನಪಿಸುತ್ತಿದೆ.


Disclaimer: ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮಾಹಿತಿಯನ್ನು ಆಧರಿಸಿದೆ. ಯಾವುದೇ ಅಶ್ಲೀಲ ದೃಶ್ಯಗಳನ್ನು ಪ್ರದರ್ಶಿಸುವ ಉದ್ದೇಶ ಇಲ್ಲ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top