ಜನಸ್ಪಂದನ ನ್ಯೂಸ್, ಬೆಂಗಳೂರು : ಕರ್ನಾಟಕದಲ್ಲಿ ಮತ್ತೆ ಭಾಷಾ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಬೆಂಗಳೂರಿನ ಮೆಟ್ರೋ (Metro) ನಿಲ್ದಾಣದಲ್ಲಿ ಇಬ್ಬರು ಮಹಿಳೆಯರ ನಡುವೆ ನಡೆದ ವಾಕ್ಸಮರದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಮೆಟ್ರೋ (Metro) ನಿಲ್ದಾಣದಲ್ಲಿ ಭಾಷಾ ಜಗಳ :
ನಗರದ ಪ್ರಮುಖ ಮೆಟ್ರೋ (Metro) ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಕನ್ನಡ ಮಾತನಾಡುತ್ತಿದ್ದ ಮಹಿಳೆಗೆ, ಇನ್ನೊಬ್ಬರು “ಹಿಂದಿ ಮಾತನಾಡಿ” ಎಂದು ಒತ್ತಾಯಿಸಿರುವ ಘಟನೆ ನಡೆದಿದೆ. ಇದರಿಂದ ಇಬ್ಬರ ನಡುವೆ ವಾಕ್ವಾದ ತೀವ್ರಗೊಂಡಿದ್ದು, ಅಲ್ಲಿದ್ದ ಜನರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
RRB – NTPC ಹುದ್ದೆಗಳಿಗೆ ಭಾರಿ ನೇಮಕಾತಿ : 30,307 ಹುದ್ದೆಗಳ ಖಾಲಿ ಹುದ್ದೆಗಳಿಗೆ ಭರ್ತಿ.!
ವಿಡಿಯೋದಲ್ಲಿ, ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಕನ್ನಡ ಮಾತನಾಡುತ್ತಿರುವ ಮತ್ತೊಬ್ಬ ಮಹಿಳೆಗೆ ಹಿಂದಿ ಮಾತನಾಡಿ ಎಂದು ಹೇಳಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಆ ಕನ್ನಡತಿ ತೀವ್ರವಾಗಿ ಪ್ರತಿಕ್ರಿಯಿಸಿ, “ಇದು ಕರ್ನಾಟಕ, ಇಲ್ಲಿ ಆಡಳಿತ ಭಾಷೆ ಕನ್ನಡ” ಎಂದು ಹಿಮ್ಮೆಟ್ಟದೆ ನಿಂತಿರುವುದು ಗಮನಾರ್ಹವಾಗಿದೆ.
ಕನ್ನಡತಿಯ ದಿಟ್ಟ ಪ್ರತಿಕ್ರಿಯೆಗೆ ಮೆಚ್ಚುಗೆ :
ಈ ವಿಡಿಯೋ ವೈರಲ್ ಆದ ನಂತರ, ಕನ್ನಡ ಮಾತನಾಡಲು ಆಗ್ರಹಿಸಿದ ಕನ್ನಡತಿಯ ಧೈರ್ಯಕ್ಕೆ ರಾಜ್ಯದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆಗಳ ಹೋರಾಟಗಾರರೂ ಈ ಘಟನೆಯನ್ನು ಸ್ವಾಗತಿಸಿ, “ಕರ್ನಾಟಕದಲ್ಲಿ ಕನ್ನಡವೇ ಮೊದಲ ಆದ್ಯತೆ. ಹಿಂದಿ ಮಾತನಾಡಿ ಎಂದು ಒತ್ತಾಯಿಸುವುದು ಸೂಕ್ತವಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
“Heart attack ಆದ ತಕ್ಷಣ ನಾಲಿಗೆಯ ಮೇಲೆ ಈ ಎಲೆಯ ರಸ ಹಚ್ಚಿ; ಜೀವ ಉಳಿಸಿ”.!
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಂಚಿಕೊಂಡು, “ಕನ್ನಡದಲ್ಲಿ ಧೈರ್ಯವಾಗಿ ಪ್ರತಿಕ್ರಿಯಿಸಿದ ಯುವತಿಗೆ ಅಭಿನಂದನೆಗಳು. ಕರ್ನಾಟಕದಲ್ಲಿ ಹಿಂದಿ ಒತ್ತಾಯಿಸುವುದು ಅವಿವೇಕಿ ಧೋರಣೆ. ನಮ್ಮ ನಾಡಲ್ಲಿ ಕನ್ನಡವೇ ನಮ್ಮ ಗುರುತು” ಎಂದು ಹೇಳಿದ್ದಾರೆ.
Metro ದಲ್ಲಿ ಜಗಳ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ :
ಘಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ #SpeakInKannada, #NammaKannada ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿದ್ದು, ಅನೇಕರು ಕನ್ನಡತಿಯ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ನಮ್ಮ ರಾಜ್ಯದಲ್ಲಿ ಕನ್ನಡ ಮಾತಾಡುವವರನ್ನೇ ನಾವು ಬೆಂಬಲಿಸುತ್ತೇವೆ” ಎಂದು ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮದುವೆಗೆ ಒಪ್ಪದ Boyfriend ಹತ್ಯೆ ಮಾಡಿದ 16 ವರ್ಷದ ಗರ್ಭಿಣಿ ಅಪ್ರಾಪ್ತೆ.!
Metro ನಿಲ್ದಾಣದಲ್ಲಿ ಕನ್ನಡ vs ಹಿಂದಿ ವಾಕ್ಸಮರದ ವಿಡಿಯೋ :
ಮೊದಲನೆಯದಾಗಿ ಕನ್ನಡ ಮಾತಾಡು ಎಂದು ದಿಟ್ಟವಾಗಿ ಧ್ವನಿ ಎತ್ತಿದ ಕನ್ನಡತಿಗೆ ಅಭಿನಂದನೆಗಳು..❤️
ಕನ್ನಡ ನಾಡಲ್ಲಿ ಹಿಂದಿ ಮಾತಾಡು ಅಂತ ದುರಹಂಕಾರ ತೋರುವುದು ಅವಿವೇಕಿತನ
ಇದು ಕರ್ನಾಟಕ ನಮ್ಮ ಆಡಳಿತ ಭಾಷೆ ಕನ್ನಡ.
ನಮ್ಮದು ಹಿಂದಿ ನಾಡಲ್ಲ.
ಹಿಂದಿ ಮಾತಾಡು ಅಂತ ದುರಹಂಕಾರ ತೋರಿದ ಈ ಯುವತಿಗೆ ದಿಕ್ಕಾರ. pic.twitter.com/Zjt3eb7f3N— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) September 29, 2025
ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಸಮಾಜದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರ (Police) ಮೇಲೆಯೇ ಗಂಭೀರ ಆರೋಪ ಕೇಳಿಬಂದಿರುವ ಘಟನೆ ತಮಿಳುನಾಡಿನ ತಿರುವಣಮಲೈ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಹಣ್ಣು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 25 ವರ್ಷದ ಯುವತಿಯೊಬ್ಬಳ ಮೇಲೆ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸರ (Police) ಮೇಲೆ ಅ*ತ್ಯಾ*ಚಾರ ಆರೋಪ ಹೊರಬಿದ್ದಿದ್ದು, ಆರೋಪಿಗಳನ್ನು ತಕ್ಷಣವೇ ಬಂಧಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.
SSC : 509 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿ ; ಈಗಲೇ ಅರ್ಜಿ ಸಲ್ಲಿಸಿ.!
ಹಣ್ಣು ಮಾರಾಟ ಮಾಡುತ್ತಿದ್ದ ಯುವತಿ :
ಮೂಲತಃ ಆಂಧ್ರಪ್ರದೇಶದವರಾದ ಸಂತ್ರಸ್ತ ಯುವತಿ ತನ್ನ ತಾಯಿಯ ಜೊತೆ ತಮಿಳುನಾಡಿನ ತಿರುವಣಮಲೈಗೆ ಹಣ್ಣಿನ ಮಾರಾಟಕ್ಕಾಗಿ ಬಂದಿದ್ದರು. ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಇಬ್ಬರು ಪೊಲೀಸರ (Police) ಕಣ್ಣಿಗೆ ಬಿದ್ದಿದ್ದು, ಆಗ ಅವರು ಬಲವಂತವಾಗಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂಬುದು ದೂರು ಕೇಳಿ ಬಂದಿದೆ.
25 ವರ್ಷದ ಯುವತಿಯ ಮೇಲಿನ ಅ*ತ್ಯಾ*ಚಾರ ವಿಚಾರ ಬೆಳಕಿಗೆ ಬಂದ ತಕ್ಷಣವೇ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳಾದ ಡಿ. ಸುರೇಶ್ ರಾಜ್ ಮತ್ತು ಪಿ. ಸುಂದರ್ ಎಂಬುವರನ್ನು ಬಂಧಿಸಿದ್ದಾರೆ.
“Heart attack ಆದ ತಕ್ಷಣ ನಾಲಿಗೆಯ ಮೇಲೆ ಈ ಎಲೆಯ ರಸ ಹಚ್ಚಿ; ಜೀವ ಉಳಿಸಿ”.!
ಪೊಲೀಸರು ಅಮಾನತು – ಕಠಿಣ ಕ್ರಮದ ಭರವಸೆ :
ಘಟನೆಯ ತೀವ್ರತೆಯನ್ನು ಮನಗಂಡ ಪೊಲೀಸ್ (Police) ಇಲಾಖೆ, ಇಬ್ಬರು ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಿದ್ದು, ಕಾನೂನು ಪ್ರಕಾರ ಗರಿಷ್ಠ ಶಿಕ್ಷೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ರಾಜಕೀಯ ವಲಯದಿಂದ ಖಂಡನೆ :
ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯದ ಪ್ರಮುಖ ರಾಜಕೀಯ ನಾಯಕರೂ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಎಐಎಡಿಎಂಕೆ ಮುಖ್ಯಸ್ಥ ಎಡಪಾಡಿ ಕೆ. ಪಳನಿಸ್ವಾಮಿ, “ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ (Police) ಇಂತಹ ಘಟನೆ ನಡೆಸಿರುವುದು ತಮಿಳುನಾಡಿನ ಕಾನೂನು-ಸುವ್ಯವಸ್ಥೆಗೆ ಕಪ್ಪು ಕಲೆ. ಮಹಿಳೆಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿರುವುದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ” ಎಂದು ಹೇಳಿದರು.
“ಬಕೆಟ್, ಮಗ್ ಕೊಳಕಾಗಿವೆಯೇ? ಕಡಿಮೆ ಖರ್ಚಿನಲ್ಲಿ ಕೆಲವೇ ನಿಮಿಷಗಳಲ್ಲಿ ಹೀಗೆ Clean ಮಾಡಿ.!”
ಜನರಿಂದ ಭಾರಿ ಆಕ್ರೋಶ :
ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ವಿರುದ್ಧವಾಗಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, “ಜನರ ಭದ್ರತೆಯ ಹೊಣೆ ಹೊತ್ತಿರುವ ಅಧಿಕಾರಿಗಳೇ (Police) ಇಂತಹ ವರ್ತನೆ ತೋರಿದರೆ ಮಹಿಳೆಯರು ಹೇಗೆ ಸುರಕ್ಷಿತರಾಗುತ್ತಾರೆ?” ಎಂಬ ಪ್ರಶ್ನೆ ಎದ್ದಿದೆ. ತಿರುವಣಮಲೈಯಂತಹ ಧಾರ್ಮಿಕ ಕ್ಷೇತ್ರದಲ್ಲೇ ಇಂತಹ ಘಟನೆ ನಡೆದಿರುವುದು ಜನರಲ್ಲಿ ಅಚ್ಚರಿ ಹಾಗೂ ಆತಂಕವನ್ನು ಉಂಟುಮಾಡಿದೆ.