ಮಂಗಳವಾರ, ನವೆಂಬರ್ 18, 2025

Janaspandhan News

HomeViral VideoGun : "ಗನ್" ಪರಿಶೀಲನೆಯ ವೇಳೆ ಸಂಭವಿಸಿದ ಆಕಸ್ಮಿಕ ಘಟನೆ ; ಸಿಸಿಟಿವಿ ದೃಶ್ಯ ವೈರಲ್.!
spot_img
spot_img
spot_img

Gun : “ಗನ್” ಪರಿಶೀಲನೆಯ ವೇಳೆ ಸಂಭವಿಸಿದ ಆಕಸ್ಮಿಕ ಘಟನೆ ; ಸಿಸಿಟಿವಿ ದೃಶ್ಯ ವೈರಲ್.!

- Advertisement -

ಜನಸ್ಪಂದನ ನ್ಯೂಸ್‌, ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡುತ್ತಿರುವ ಒಂದು ವಿಡಿಯೋ ಜನರನ್ನು ಬೆಚ್ಚಿಬೀಳಿಸಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯವು ಬಂದೂಕಿ (Gun) ನ ಅಜಾಗರೂಕ ಬಳಕೆಯ ಪರಿಣಾಮವನ್ನು ತೀವ್ರವಾಗಿ ತೋರಿಸುತ್ತಿದೆ.

ಬಂದೂಕು ಪರಿಶೀಲನೆ ವೇಳೆ ಅಪಘಾತ :

ವಿಡಿಯೋದಲ್ಲಿ ಅಂಗಡಿಯೊಳಗೆ ಕುಳಿತಿದ್ದ ವ್ಯಕ್ತಿಯೊಬ್ಬರು ಬಂದೂಕನ್ನು ಹಿಡಿದು ಪರೀಕ್ಷಿಸಲು ಯತ್ನಿಸುತ್ತಾರೆ. ಪ್ರಾರಂಭದಲ್ಲಿ ಬಂದೂಕು (Gun) ಸರಿಯಾಗಿ ಕೆಲಸ ಮಾಡದ ಕಾರಣ ಅವರು ಅದನ್ನು ಮತ್ತೊಮ್ಮೆ ಪರಿಶೀಲಿಸಲು ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡು ಸಿಡಿದು, ಗಂಭೀರ ಅಪಘಾತ ಸಂಭವಿಸುತ್ತದೆ.

SSC : 509 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿ ; ಈಗಲೇ ಅರ್ಜಿ ಸಲ್ಲಿಸಿ.!
ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯ :

ಘಟನೆಯ ಇಡೀ ಪ್ರಕ್ರಿಯೆ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ವ್ಯಕ್ತಿಯು ಬಂದೂಕ (Gun) ನ್ನು ಎತ್ತಿಕೊಂಡು ನೋಡುತ್ತಿದ್ದ ವೇಳೆ ಅಪಘಾತ ಸಂಭವಿಸಿದ ಕ್ಷಣವು ವಿಡಿಯೋದಲ್ಲಿ ಪತ್ತೆಯಾಗಿದೆ.

ಜನರಲ್ಲಿ ಆತಂಕ ಮತ್ತು ಚರ್ಚೆ :

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಅನೇಕರು ಇದನ್ನು ಎಚ್ಚರಿಕೆಯ ಪಾಠವಾಗಿ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. “ಯಾವುದೇ ಆಯುಧವನ್ನು ಅಜಾಗರೂಕವಾಗಿ ಬಳಸುವುದು ಅಪಾಯಕಾರಿ, ಬಂದೂಕುಗಳನ್ನು ಬಳಸುವಾಗ ತೀವ್ರ ಎಚ್ಚರಿಕೆ ಅಗತ್ಯ” ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!
ಸುರಕ್ಷತಾ ಸಂದೇಶ :

ತಜ್ಞರು ಸಹ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಬಂದೂಕು (Gun) ಅಥವಾ ಇತರ ಶಸ್ತ್ರಾಸ್ತ್ರಗಳನ್ನು ಸುರಕ್ಷಿತವಾಗಿ ನಿರ್ವಹಿಸುವುದು ಅತ್ಯಂತ ಮುಖ್ಯ ಎಂದು ಹೇಳಿದ್ದಾರೆ. ಆಯುಧಗಳನ್ನು ಪರೀಕ್ಷಿಸುವಾಗ ನಿಯಮ ಪಾಲನೆ ಮಾಡದಿದ್ದರೆ ಅಪಾಯ ಉಂಟಾಗಬಹುದು ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ.

ಗನ್ (Gun) ಪರಿಶೀಲನೆಯ ವೇಳೆ ಸಿಡಿದ ಗುಂಡಿನ ವಿಡಿಯೋ :


Metro ನಿಲ್ದಾಣದಲ್ಲಿ ಕನ್ನಡ vs ಹಿಂದಿ ವಾಕ್ಸಮರ ; ಕನ್ನಡತಿಯ ದಿಟ್ಟ ಪ್ರತಿಕ್ರಿಯೆ.!

Metro

ಜನಸ್ಪಂದನ ನ್ಯೂಸ್‌, ಬೆಂಗಳೂರು : ಕರ್ನಾಟಕದಲ್ಲಿ ಮತ್ತೆ ಭಾಷಾ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಬೆಂಗಳೂರಿನ ಮೆಟ್ರೋ (Metro) ನಿಲ್ದಾಣದಲ್ಲಿ ಇಬ್ಬರು ಮಹಿಳೆಯರ ನಡುವೆ ನಡೆದ ವಾಕ್ಸಮರದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಮೆಟ್ರೋ (Metro) ನಿಲ್ದಾಣದಲ್ಲಿ ಭಾಷಾ ಜಗಳ :

ನಗರದ ಪ್ರಮುಖ ಮೆಟ್ರೋ (Metro) ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಕನ್ನಡ ಮಾತನಾಡುತ್ತಿದ್ದ ಮಹಿಳೆಗೆ, ಇನ್ನೊಬ್ಬರು “ಹಿಂದಿ ಮಾತನಾಡಿ” ಎಂದು ಒತ್ತಾಯಿಸಿರುವ ಘಟನೆ ನಡೆದಿದೆ. ಇದರಿಂದ ಇಬ್ಬರ ನಡುವೆ ವಾಕ್ವಾದ ತೀವ್ರಗೊಂಡಿದ್ದು, ಅಲ್ಲಿದ್ದ ಜನರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

RRB – NTPC ಹುದ್ದೆಗಳಿಗೆ ಭಾರಿ ನೇಮಕಾತಿ : 30,307 ಹುದ್ದೆಗಳ ಖಾಲಿ ಹುದ್ದೆಗಳಿಗೆ ಭರ್ತಿ.!

ವಿಡಿಯೋದಲ್ಲಿ, ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಕನ್ನಡ ಮಾತನಾಡುತ್ತಿರುವ ಮತ್ತೊಬ್ಬ ಮಹಿಳೆಗೆ ಹಿಂದಿ ಮಾತನಾಡಿ ಎಂದು ಹೇಳಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಆ ಕನ್ನಡತಿ ತೀವ್ರವಾಗಿ ಪ್ರತಿಕ್ರಿಯಿಸಿ, “ಇದು ಕರ್ನಾಟಕ, ಇಲ್ಲಿ ಆಡಳಿತ ಭಾಷೆ ಕನ್ನಡ” ಎಂದು ಹಿಮ್ಮೆಟ್ಟದೆ ನಿಂತಿರುವುದು ಗಮನಾರ್ಹವಾಗಿದೆ.

ಕನ್ನಡತಿಯ ದಿಟ್ಟ ಪ್ರತಿಕ್ರಿಯೆಗೆ ಮೆಚ್ಚುಗೆ :

ಈ ವಿಡಿಯೋ ವೈರಲ್ ಆದ ನಂತರ, ಕನ್ನಡ ಮಾತನಾಡಲು ಆಗ್ರಹಿಸಿದ ಕನ್ನಡತಿಯ ಧೈರ್ಯಕ್ಕೆ ರಾಜ್ಯದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆಗಳ ಹೋರಾಟಗಾರರೂ ಈ ಘಟನೆಯನ್ನು ಸ್ವಾಗತಿಸಿ, “ಕರ್ನಾಟಕದಲ್ಲಿ ಕನ್ನಡವೇ ಮೊದಲ ಆದ್ಯತೆ. ಹಿಂದಿ ಮಾತನಾಡಿ ಎಂದು ಒತ್ತಾಯಿಸುವುದು ಸೂಕ್ತವಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

“Heart attack ಆದ ತಕ್ಷಣ ನಾಲಿಗೆಯ ಮೇಲೆ ಈ ಎಲೆಯ ರಸ ಹಚ್ಚಿ; ಜೀವ ಉಳಿಸಿ”.!

ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಂಚಿಕೊಂಡು, “ಕನ್ನಡದಲ್ಲಿ ಧೈರ್ಯವಾಗಿ ಪ್ರತಿಕ್ರಿಯಿಸಿದ ಯುವತಿಗೆ ಅಭಿನಂದನೆಗಳು. ಕರ್ನಾಟಕದಲ್ಲಿ ಹಿಂದಿ ಒತ್ತಾಯಿಸುವುದು ಅವಿವೇಕಿ ಧೋರಣೆ. ನಮ್ಮ ನಾಡಲ್ಲಿ ಕನ್ನಡವೇ ನಮ್ಮ ಗುರುತು” ಎಂದು ಹೇಳಿದ್ದಾರೆ.

Metro ದಲ್ಲಿ ಜಗಳ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ :

ಘಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ #SpeakInKannada, #NammaKannada ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿದ್ದು, ಅನೇಕರು ಕನ್ನಡತಿಯ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ನಮ್ಮ ರಾಜ್ಯದಲ್ಲಿ ಕನ್ನಡ ಮಾತಾಡುವವರನ್ನೇ ನಾವು ಬೆಂಬಲಿಸುತ್ತೇವೆ” ಎಂದು ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮದುವೆಗೆ ಒಪ್ಪದ Boyfriend ಹತ್ಯೆ ಮಾಡಿದ 16 ವರ್ಷದ ಗರ್ಭಿಣಿ ಅಪ್ರಾಪ್ತೆ.!
Metro ನಿಲ್ದಾಣದಲ್ಲಿ ಕನ್ನಡ vs ಹಿಂದಿ ವಾಕ್ಸಮರದ ವಿಡಿಯೋ :

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments