Sunday, September 8, 2024
spot_img
spot_img
spot_img
spot_img
spot_img
spot_img
spot_img

ಪತಿಯ ಕೈ-ಕಾಲು ಕಟ್ಟಿ ಸಿಗರೇಟ್‌ನಿಂದ ಪತಿಯ ಖಾಸಗಿ ಅಂಗ ಸುಟ್ಟ ಪತ್ನಿ ; ದೃಶ್ಯ CCTVಯಲ್ಲಿ ಸೆರೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್ : ಪತ್ನಿಯೋರ್ವಳು ತನ್ನ ಪತಿಯ ಕೈ-ಕಾಲುಗಳನ್ನು ಮಂಚಕ್ಕೆ ಕಟ್ಟಿ ಚಿತ್ರಹಿಂಸೆ ನೀಡಿದಲ್ಲದೆ ಸಿಗರೇಟ್‌ನಿಂದ ಸುಟ್ಟು ಆತನ ಖಾಸಗಿ ಭಾಗಗಳಿಗೆ ಹಾನಿ ಮಾಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಬಿಜ್ನೋರ್​ ನಗರದಲ್ಲಿ ಇಂಥ ಘಟನೆ ನಡೆದಿದ್ದು, ಆಕೆ ಪತಿಗೆ ಹಿಂಸೆ ನೀಡಿವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನು ಬಿಜ್ನೋರ್​ ನಗರದ ನಿವಾಸಿ ಮನನ್ ಜೈದಿ ಚಿತ್ರಹಿಂಸೆಗೆ ಒಳಗಾದ ಗಂಡ ಮತ್ತು ಈತನಿಗೆ ಟಾರ್ಚರ್ ಕೊಟ್ಟ ಹೆಂಡತಿ ಮೆಹರ್ ಜಹಾನ್ ಎಂದು ತಿಉಳಿದು ಬಂದಿದೆ.

ಇದನ್ನೂ ಓದಿ : ಬಿಎಂಟಿಸಿಯ 2500 ನಿರ್ವಾಹಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಲ್ಲಿದೆ ಡೈರೆಕ್ಟ್‌ ಲಿಂಕ್.!

ಘಟನೆಗೆ ಮುಖ್ಯ ಕಾರಣ ಪತ್ನಿಯ ಅಕ್ರಮ ಸಂಬಂಧ ಎಂದು ಹೇಳಲಾಗುತ್ತದೆ. ಪತ್ನಿಯ ಅಕ್ರಮ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ಪತಿಗೆ ಮಾದಕ ವಸ್ತುವನ್ನು ನೀಡಿ ಕೈ, ಕಾಲುಗಳನ್ನು ಕಟ್ಟಿ ಹಾಕುತ್ತಿದ್ದಳು. ಅಲ್ಲದೆ ವ್ಯಕ್ತಿಯ ಖಾಸಗಿ ಅಂಗಕ್ಕೆ ಸಿಗರೇಟ್‌ನಿಂದ ಸುಟ್ಟು ಗಾಯಗೊಳಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಹೆಂಡತಿ ಸಿಗರೇಟ್ ಸೇದುತ್ತ ವಿಕೃತಿ ಮೆರೆಯುತ್ತಾ ಗಂಡನಿಗೆ ಎಲ್ಲೆಂದರಲ್ಲಿ ಸಿಗರೇಟ್​ನಿಂದ ಸುಡುತ್ತಿದ್ದಳು ಎಂದು ಹೇಳಲಾಗಿದೆ.

ಇವರಿಬ್ಬರದ್ದು ಪ್ರೇಮ ವಿವಾಹ ಎಂದು ಹೇಳಲಾಗಿದೆ. ಇಬ್ಬರ ಕುಟುಂಬ ಒಪ್ಪಿಗೆಯ ನಂತರ ಮುಸ್ಲಿಂ ಪದ್ಧತಿಯಂತೆ 17 ನವೆಂಬರ್ 2023 ರಂದು ವಿವಾಹವಾಗಿದ್ದಾರೆ. ಆತನ ತಾಯಿ ಕೂಡ ತನ್ನ ಸೊಸೆ ನೀಡುತ್ತಿದ್ದ ಚಿತ್ರಹಿಂಸೆಯ ಬಗ್ಗೆ ಪೊಲೀಸರಿಗೆ ಹೇಳಿದ್ದಾರೆ.

ಇದನ್ನೂ ಓದಿ‌ : ಆಸ್ಪತ್ರೆಯಲ್ಲಿ ಪತಿ ಸಾವು ; ದುಖಃದಲ್ಲಿಯೂ ಮತ ಚಲಾಯಿಸಿ ಮಾದರಿಯಾದ ಪತ್ನಿ.!

ಹೆಂಡತಿ ಟಾರ್ಚರ್ ನೀಡುತ್ತಿದ್ದ ದೃಶ್ಯವೆಲ್ಲ ಮನೆಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ವಿಡಿಯೋಗಳನ್ನು ಗಂಡ ಪೊಲೀಸರಿಗೆ ನೀಡಿದ್ದಾನೆ. ಪತ್ನಿ ಅಮಲು ಪದಾರ್ಥ ನೀಡಿ, ತನ್ನ ಕೈಕಾಲು ಕಟ್ಟಿ ಚಿತ್ರಹಿಂಸೆ ನೀಡುತ್ತಿದ್ದಳು ಎಂದು ಈ ಹಿಂದೆಯು ಪೊಲೀಸರಿಗೆ ದೂರು ನೀಡಿದ್ದೆ ಎಂದು ಹೇಳಿಕೊಂಡಿದ್ದಾನೆ. ಆದರೆ ಆವಾಗ ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ. ಯಾವಾಗ ಸಿಸಿಟಿವಿ ದೃಶ್ಯ ಸಮೇತ ಬಂದು ಪೊಲೀಸರಿಗೆ ತೋರಿಸಿದಾಗ ಮಹಿಳೆಯನ್ನು ಬಿಜ್ನೋರ್​ ನಗರದ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಕೋಳಿಯೊಂದಿಗೆ ಯುವತಿಯ ಯುದ್ಧ ; ಸೋತವರ್ಯಾರು, ಗೆದ್ದವರ್ಯಾರು? ; Video ನೋಡಿ.!

ಬಿಜ್ನೋರ್​ ನಗರದ ಠಾಣೆಯಲ್ಲಿ ಕೇಸ್ ದಾಖಲು ಆಗಿದ್ದು ಪೊಲೀಸರು ಮಹಿಳೆಯನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img