Wednesday, May 22, 2024
spot_img
spot_img
spot_img
spot_img
spot_img
spot_img

ಆಸ್ಪತ್ರೆಯಲ್ಲಿ ಪತಿ ಸಾವು ; ದುಖಃದಲ್ಲಿಯೂ ಮತ ಚಲಾಯಿಸಿ ಮಾದರಿಯಾದ ಪತ್ನಿ.!

spot_img

ಜನಸ್ಪಂದನ ನ್ಯೂಸ್‌, ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡುಗೋಡಿಯಲ್ಲಿ ಪತಿಯ ಸಾವಿನ ನಡುವೆಯು ಪತ್ನಿಯೋಬ್ಬರು ದುಃಖದಲ್ಲೇ ತಮ್ಮ ಹಕ್ಕು (ಮತ) ಚಲಾಯಿಸಿ ಬೇರೆಯವರಿಗೆ ಮಾದರಿಯಾಗಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಆಡುಗೋಡಿಯ ನಿವಾಸಿಯಾದ ಕಲಾವತಿ ಎನ್ನುವ ಮಹಿಳೆಯೇ ಮತ ಚಲಾಯಿಸಿದವರು. ಕಲಾವತಿ ಅವರ ಪತಿ ವೆಂಕಟೇಶ್ ಮಂಗಳೂರಿನ ವೆನ್​ಲಾಕ್ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ.

ಇದನ್ನೂ ಓದಿ : ಕೋಳಿಯೊಂದಿಗೆ ಯುವತಿಯ ಯುದ್ಧ ; ಸೋತವರ್ಯಾರು, ಗೆದ್ದವರ್ಯಾರು? ; Video ನೋಡಿ.!

ಮಹಿಳೆ ವೋಟ್ ಹಾಕಲು ತೆರಳುವುದಕ್ಕೂ ಮೊದಲೇ ಗಂಡ ಸಾವನ್ನಪ್ಪಿರುವ ವಿಷಯ ತಿಳಿದಿದೆ. ಗಂಡ ಸಾವನ್ನಪ್ಪಿರುವ ಸುದ್ದಿ ತಿಳಿದ ಮೇಲೂ ಮಹಿಳೆ ಮತದಾನ ಮಾಡಿದ್ದಾರೆ.

ಗಂಡನಿಗೆ ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ಕಾರಣ ಅವರ ನೆನಪಲ್ಲಿ ಪತ್ನಿ ಮತ ಚಲಾವಣೆ ಮಾಡಿದ್ದಾರೆ. ತನ್ನ ಗಂಡನ ತೃಪ್ತಿಗಾಗಿ ವೋಟ್ ಹಾಕಲೇಬೇಕು ಎಂದು ಕಲಾವತಿಯವರು ಮತ ಚಲಾಸಿದ್ದಾರೆ.

ಇದನ್ನೂ ಓದಿ : ಬಿಎಂಟಿಸಿಯ 2500 ನಿರ್ವಾಹಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಲ್ಲಿದೆ ಡೈರೆಕ್ಟ್‌ ಲಿಂಕ್.!

ಇದೀಗ ಮೃತ ಪತಿ ದೇಹ ನೋಡಲು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಜನಸ್ಪಂದನ ನ್ಯೂಸ್‌, ಕಳಕಳಿಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img