Wednesday, May 22, 2024
spot_img
spot_img
spot_img
spot_img
spot_img
spot_img

ಕೋಳಿಯೊಂದಿಗೆ ಯುವತಿಯ ಯುದ್ಧ ; ಸೋತವರ್ಯಾರು, ಗೆದ್ದವರ್ಯಾರು? ; Video ನೋಡಿ.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್ : ‌ದಿನಂಪ್ರತಿ ಸೊಶಿಯಲ್‌ ಮಿಡಿಯಾದಲ್ಲಿ ಒಂದಿಲ್ಲೊಂದು ವಿಶಿಷ್ಟವಾದ ವಿಡಿಯೋ ಹಂಚಿಕೆಯಾಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಪ್ರಾಣಿಗಳದ್ದು, ಪಕ್ಷಿಗಳದ್ದು, ಅಸಭ್ಯ ವರ್ತನೆಯವು ಮತ್ತು ಹೊಟ್ಟೆ ಹುಣ್ಣಾಗಿಸುವ ರೀತಿಯ ನಗುತರಿಸುವ ಹೀಗೆ ಹಲವಾರು ವಿವಿಧಗಳಾಗಿರುತ್ತವೆ.

ಸದ್ಯ ಅಂತಹದ್ದೇ ವಿಡಿಯೋವೊಂದು ಇದೀಗ ಸೊಶಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ಅದು ಕೋಳಿ ಮತ್ತು ಯುವತಿಯ ನಡುವಿನ ಕಾಳಗದ ವಿಡಿಯೋ ಆಗಿದೆ.

ಇದೇನಪ್ಪ ಕೋಳಿ ಜೊತೆ ಯುವತಿ ಬಡೆದಾಡುವುದಾ ಅಂತ ಅನಿಸದೆ ಇರದು. ಆದರೆ ಅದು ನಿಜ. ಬೇಕಿದ್ರೆ ಈ ಕೆಳಗಿನ ವಿಡಿಯೋ ನೋಡಿ.

ಇದನ್ನೂ ಓದಿ : News : ಅಶ್ಲೀಲ ವಿಡಿಯೋ ತೋರಿಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ.!

ವಿಡಿಯೋದಲ್ಲೇನಿದೆ :

ಯುವತಿಯೋರ್ವಳು ತನ್ನಷ್ಟಕ್ಕೆ ತಾನು ಹೋಗುತ್ತಿರುತ್ತಾಳೆ, ಆಗ ಪಕ್ಕದಲ್ಲಿಯೇ ಇದ್ದ ಕೋಳಿ ಸುಖಾಸುಮ್ಮನೆ ಆಕೆಯ ಕಾಲಿಗೆ ಬಂದು ಕುಕ್ಕುತ್ತದೆ. ಇದರಿಂದ ಕೋಪಗೊಂಡ ಯುವತಿ ಆ ಕೋಳಿಯನ್ನು ಕೈಯಿಂದ ಹೊಡೆಯುತ್ತಾಳೆ. ಆದರೆ ಆ ಕೋಳಿ ಸುಮ್ಮನಿರದೇ ಮತ್ತೇ ಅವಳನ್ನು ಕೆಣಕುತ್ತದೆ.

ಆಗ ಕೋಪದಲ್ಲಿ ಯುವತಿ ಕೋಳಿಯೊಂದಿಗೆಯೇ ಜಗಳಕ್ಕಿಳಿಯುತ್ತಾಳೆ. ಇರು  ನಿನ್ನ ಅಹಂ ಎಲ್ಲಾ ನಾನ್‌ ಇಳಿಸ್ತೀನಿ ಎಂದು ಕೋಳಿಗೆ ಒಂದು ಏಟು ಹೊಡೆದು, ಅದನ್ನು ಕೈಯಲ್ಲಿ ಹಿಡಿದು ಎತ್ತಿ ಬಿಸಾಡಿ, ಆ ಕೋಳಿಯೊಂದಿಗೆ ಘನಘೋರ ಯುದ್ಧವನ್ನೇ ಮಾಡುತ್ತಾಳೆ.

ಇದನ್ನೂ ಓದಿ : ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ Online ಮೂಲಕ ಅರ್ಜಿ ಆಹ್ವಾನ.!

ಕೋಳಿ ಜಗಳದ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಈ ಘನಘೋರ ಯುದ್ಧದಲ್ಲಿ ವಿಜಯಶಾಲಿ ಅದವರ್ಯಾರು.? ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಮೇ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಯುದ್ಧದಲ್ಲಿ ಕೊನೆಗೆ ಗೆದ್ದವರ್ಯಾರು ʼಎಂದು ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಕೋಳಿ ಮತ್ತು ಯುವತಿಯ ನಡುವಿನ ಘನಘೋರ ಯುದ್ಧವನ್ನು ಕಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಜನಸ್ಪಂದನ ನ್ಯೂಸ್‌, ಕಳಕಳಿಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು” ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img