Sunday, September 15, 2024
spot_img
spot_img
spot_img
spot_img
spot_img
spot_img
spot_img

ಗೋಕಾಕ : ದೇವಸ್ಥಾನದ ಕಟ್ಟೆ ಮೇಲೆ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಗೋಕಾಕ : ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಕಬ್ಬು ಕಡಿಯುವ ಕೋಯ್ತಾದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಮಡ್ಡೆಪ್ಪ ಯಲ್ಲಪ್ಪ ಬಾನಸಿ (47) ಎಂದು ತಿಳಿದು ಬಂದಿದ್ದು, ಕೊಲೆ ಆರೋಪಿಯನ್ನು ಅದೇ ಗ್ರಾಮದ
ಬೀರಪ್ಪ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : Health : ದೇಹದಲ್ಲಿನ ಕೊಲೆಸ್ಟ್ರಾಲ್ ಕರಗಿಸಲು ಈ 5 ಕೆಲಸಗಳನ್ನು ತಪ್ಪದೇ ಮಾಡಿ.

ಮಡ್ಡೆಪ್ಪ, ರಾತ್ರಿ ಹೊತ್ತು ಗುಡಿಯಲ್ಲಿ ನಡೆದ ಭಜನೆ ಕಾರ್ಯಕ್ರಮ ಮುಗಿದ ಬಳಿಕ ಅಲ್ಲೇ ಇದ್ದ ಕಟ್ಟೆಯ ಮೇಲೆ ಮಲಗಿದ್ದ ವೇಳೆ ಅದೇ ಗ್ರಾಮದ ಬೀರಪ್ಪ ಸಿದ್ದಪ್ಪ ಸೋನದೋಳಿ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ಗಾಯಾಳು ಮಡ್ಡೆಪ್ಪನನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ‌ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

ಇದನ್ನು ಓದಿ : ನೌಕರಿ ಆಮಿಷ ತೋರಿಸಿ ಮಂಚಕ್ಕೆ ಕರೆದ ಕ್ಲರ್ಕ್ Arrest.!

ಮಮದಾಪೂರ ಗ್ರಾಮದ ಬೀರ ಸಿದ್ದೇಶ್ವರ ಗುಡಿಯಲ್ಲಿ ಭಜನೆ ಕಾರ್ಯಕ್ರಮ ನಡೆದಿತ್ತು. ಮೃತ ವ್ಯಕ್ತಿಯು ಈ ಕಾರ್ಯಕ್ರಮ ಮುಗಿಸಿ ಗುಡಿಯ ಕಟ್ಟೆಯ ಮೇಲೆ ಮಲಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಹೊಲದ ಸೀಮೆಯ ವಿಚಾರದಲ್ಲಿ ಮಡ್ಡೆಪ್ಪ ಮತ್ತು ಬೀರಪ್ಪನ ನಡುವೆ ಕಲಹ ನಡೆದಿತ್ತು. ಇದೇ ವಿಚಾರಕ್ಕೆ ಬೀರಪ್ಪ ಮಡ್ಡೆಪ್ಪನ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಗೋಕಾಕ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img