Sunday, September 8, 2024
spot_img
spot_img
spot_img
spot_img
spot_img
spot_img
spot_img

ದೂರು ನೀಡಲು ಬಂದ 23ರ ಯುವತಿಯನ್ನು ಬಲೆಗೆ ಬೀಳಿಸಿಕೊಂಡ 53ರ ASI.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಅಯ್ಯಾ ನಮಗೆ ನ್ಯಾಯ ಕೊಡಿ, ನನ್ನ ಗಂಡ ದಿನಾಲು ಕುಡಿದು ಬಂದು ಗಲಾಟೆ ಮಾಡತಾನೆ. ಹೀಗಂತ ಯಾವೊಬ್ಬ ಮಹಿಳೆ ಪೊಲೀಸ್ ಠಾಣೆಗೆ ಹೋಗಿ ಪಿರ್ಯಾದು ಮಾಡಿದರೆ, ಸಂತ್ರಸ್ತ ಮಹಿಳೆಗೆ ನ್ಯಾಯ ಕೊಡಿಸಬೇಕಾಗಿರುವುದು ಅವರ ಧರ್ಮ. ಆದರೆ, ನ್ಯಾಯ ಕೊಡಬೇಕಾದ ಪೊಲೀಸರೇ ಅನ್ಯಾಯ ಎಸಗಿ ಜನರಿಗೆ ತೊಂದರೆ ಕೊಡುತ್ತಿದ್ದರೆ ಬೇರೆ ಯಾರಿಗೆ ಕಷ್ಟ ಹೇಳಿಕೊಳ್ಳುವುದು ನೀವೇ ಹೇಳಿ.

ವಿಷಯ ಏನಪ್ಪ ಅಂದ್ರೆ ಇಲ್ಲೋಬ್ಬ ಎಎಸ್‌ಐ ನ್ಯಾಯಕ್ಕಾಗಿ ಪೊಲೀಸ್‌ ಠಾಣೆಗೆ ಹೋದ ಮಹಿಳೆಯನ್ನೇ ತನ್ನ ಬುಟ್ಟಿಗೆ ಬೀಳಿಸಿಕೊಂಡ ಘಟನೆ ತೆಲಂಗಾಣದ ಇಬ್ರಾಹಿಂಪಟ್ಟಣ ಮಂಡಲದಲ್ಲಿ ನಡೆದಿದೆ.

Test : ವ್ಯಕ್ತಿ ಕೈಗಳನ್ನು ಹೇಗೆ ಹಿಡಿಯುತ್ತಾನೆ ಎಂಬುದರ ಮೇಲೆ ಆತನ ವ್ಯಕ್ತಿತ್ವ ಗುರುತಿಸಬಹುದು.!

ತೆಲಂಗಾಣದ ವರ್ಷಕೊಂಡ ಗ್ರಾಮದ 23 ವರ್ಷದ ಯುವತಿಯೊಬ್ಬಳು ಇಬ್ರಾಹಿಂಪಟ್ಟಣ ಪೊಲೀಸ್​ ಠಾಣೆಗೆ ಕಳೆದ ಕೆಲ ದಿನಗಳ ಹಿಂದೆ ತನ್ನ ಗಂಡ ಕುಡಿದ ಅಮಲಿನಲ್ಲಿ ತನಗೆ ಥಳಿಸುತ್ತಾನೆಂದು ದೂರು ದಾಖಲಿಸಿದ್ದಳು. ಯುವತಿಯಿಂದ ಪ್ರಕರಣ ದಾಖಲಿಸಿಕೊಳ್ಳುವ ಸಮಯದಲ್ಲಿ ಠಾಣೆಯಲ್ಲಿ 53 ವರ್ಷದ ಎಎಸ್​ಐ ರಾಮುಲು ಕೂಡ ಹಾಜರಿದ್ದರು.

ಸಾಮಾನ್ಯವಾಗಿ ಗಂಡ-ಹೆಂಡತಿ ಜಗಳದ ವಿಷಯದಲ್ಲಿ ಇಬ್ಬರನ್ನು ಕರೆಯಿಸಿ ಬುದ್ದಿ ಮಾತು ಹೇಳಿ ಕಳುಹಿಸಿಕೊಡುತ್ತಾರೆ. ಹಾಗೇಯೇ ಈ ಕೇಸಿನಲ್ಲಿಯೋ ಗಂಡ ಹೆಂಡತಿಯನ್ನು ಕರೆಯಿಸಿ ಕೌನ್ಸೆಲಿಂಗ್ ಮಾಡಿ ಕಳುಹಿಸಿದ್ದಾರೆ.

ಆದಾಗ್ಯೂ ಗಂಡನ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣದೆ ಪ್ರತಿದಿನ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಲೇ ಇತ್ತು. ಯುವತಿ ಆಗಾಗ ಠಾಣೆಗೆ ಬಂದು ದೂರು ನೀಡುವುದು ಸಾಮಾನ್ಯವಾಗಿತ್ತು. ಹೀಗಾಗಿ ಯುವತಿಯ ಗಂಡನನ್ನು ಕರೆದು ಬುದ್ಧಿವಾದ ಹೇಳುತ್ತಿದ್ದ ಎಎಸ್​ಐ ರಾಮುಲು ಕಣ್ಣು ಯುವತಿಯ ಮೇಲೆ ಬಿದ್ದಿ ಫರಿಣಾಮ ಆಗಾಗ ಫೋನ್‌ನಲ್ಲಿ ಮಾತನಾಡುತ್ತಾ ಯುವತಿಗೆ ಆಪ್ತನಾಗಿದ್ದಾನೆ.

PUC ಪಾಸಾದವರಿಗೆ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.!

ವಿಚಾರಣೆ ನೆಪದಲ್ಲಿ ಯುವತಿ ಮತ್ತು ಆಕೆಯ ಗಂಡನನ್ನು ಠಾಣೆಗೆ ಕರೆಸಿಕೊಳ್ಳುತ್ತಿದ್ದ ರಾಮುಲು ಯುವತಿಗೆ ಹತ್ತಿರವಾಗುವುದರೊಂದಿಗೆ ಸಲುಗೆಯು ಬೆಳೆಯಿತು. ಎಎಸ್‌ಐ ವಿಚಾರ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಗಮನಕ್ಕೆ ಬಂದ ನಂತರ ಮೇಟಪಲ್ಲಿಯ ಸರ್ಕಲ್​ ಇನ್ಸ್​ಪೆಕ್ಟರ್​ ಗಮನಕ್ಕೆ ತಂದರು. ಆದರೆ ಶೀಘ್ರದಲ್ಲೇ ಎಎಸ್​ಐ ರಾಮುಲು ನಿವೃತ್ತಿಯಾಗುತ್ತಿದ್ದರಿಂದ ಉನ್ನತ ಅಧಿಕಾರಿಗಳಿಗೆ ದೂರು ನೀಡದೆ, ಇನ್ನೊಮ್ಮೆ ಈ ರೀತಿ ಮಾಡಬೇಡ ಎಂದು ಬೈದು ಬುದ್ಧಿವಾದ ಹೇಳಲಾಗಿತ್ತು. ಆದರೂ ಎಎಸ್​ಐ ವರ್ತನೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಕಾಣಲಿಲ್ಲ.

ಈ ನಡುವೆ ಕಳೆದ ಎರಡು ದಿನಗಳಿಂದ ಯುವತಿಯ ಜತೆಯಲ್ಲಿ ಎಎಸ್​ಐ ರಾಮುಲು ತುಂಬಾ ಸಲುಗೆಯಿಂದ ಇರುವ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರ ಉನ್ನತ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಎಎಸ್​ಐ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img