Thursday, April 25, 2024
spot_img
spot_img
spot_img
spot_img
spot_img
spot_img

ಲೋಕಾಯುಕ್ತ ಬಲೆಗೆ ಬಿದ್ದ 3 ರೂ. ಲಕ್ಷ ಲಂಚ ಕೇಳಿದ ಸರ್ವೇಯರ್.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು ಗ್ರಾಮಾಂತರ : ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ತಾಲ್ಲೂಕಿನಲ್ಲಿ ಮೂರು ಎಕರೆ ಜಮೀನು ಪೋಡಿ ಮಾಡಿಕೊಡಲು ರೈತರೊಬ್ಬರಿಂದ ಲಂಚ (bribe) ಸ್ವೀಕರಿಸುತ್ತಿದ್ದ ಭೂ ಮಾಪಕ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.

ಭೂಮಾಪಕ ಅಧಿಕಾರಿ (Surveyor Officer) ವೀರಣ್ಣ ಹಾಗೂ ಮಧ್ಯವರ್ತಿ ಸತೀಶ್ ಎಂಬಾತ ಲೋಕಾಯುಕ್ತರ ಅತಿಥಿಯಾಗಿದ್ದಾರೆ.

ಹೋಳಿ ಹಬ್ಬದಂದು ಸ್ಕೂಟರ್‌ನಲ್ಲಿ ಯುವತಿಯರಿಂದ ಅಶ್ಲೀಲ-ಅಸಭ್ಯ ಕೃತ್ಯ ; ವಿಡಿಯೋ Virul.!

ದೊಡ್ಡಬೆಳವಂಗಲದ ಗುಂಡಲಹಳ್ಳಿ ನಿವಾಸಿ ನಂದೀಶ್ ಎಂಬುವರು ತಮ್ಮ 3 ಎಕರೆ ಜಮೀನು ಪೋಡಿಗೆ ಅರ್ಜಿ ಸಲ್ಲಿಸಿದ್ದರು. ಭೂಮಾಪಕರ ಕಚೇರಿಗೆ ಬಂದಾಗ ಸರ್ವೇಯರ್ ವೀರಣ್ಣ ಅವರು ಪೋಡಿ ಮಾಡಿಕೊಡಲು ರೂ.3 ಲಕ್ಷಕ್ಕೆ ಬೇಡಿಕೆ (demand) ಇಟ್ಟಿದ್ದರು. ಕೊನೆಗೆ ರೂ.1 ಲಕ್ಷಕ್ಕೆ ಒಪ್ಪಿದ್ದರು.

ಕೆಲ ದಿ‌ನಗಳ ಹಿಂದೆ ನಂದೀಶ್ ಅವರು ಭೂ ಮಾಪಕ ಅಧಿಕಾರಿ ವೀರಣ್ಣಗೆ ರೂ.20 ಸಾವಿರ ನೀಡಿದ್ದರು. ಉಳಿದ ರೂ.80 ಸಾವಿರ ಲಂಚಕ್ಕೆ ವೀರಣ್ಣ ಬೇಡಿಕೆ ಇಟ್ಟಿದ್ದರು.

ಈ ಕುರಿತು ನಂದೀಶ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು (complaint) ನೀಡಿದ್ದರು.

PUC ಪಾಸಾದವರಿಗೆ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.!

ನಂದೀಶ್ ಅವರು ವೀರಣ್ಣ ಅವರಿಗೆ ಹಣ ನೀಡುವಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ (operation) ಆರೋಪಿ ವೀರಣ್ಣ ಹಾಗೂ ಮಧ್ಯವರ್ತಿ ಸತೀಶ್ ನನ್ನು ಅರೆಸ್ಟ್ ಮಾಡಿದ್ದಾರೆ.

ಎಸ್ಪಿ‌ ಪವನ್ ನಜ್ಜೂರು ಮಾರ್ಗದರ್ಶನದಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ರಮೇಶ್ ಜೆ. ನೇತೃತ್ವದಲ್ಲಿ ಈ ಲೋಕಾಯುಕ್ತ ದಾಳಿ (raid) ನಡೆಯಿತು.

spot_img
spot_img
spot_img
- Advertisment -spot_img