Thursday, April 25, 2024
spot_img
spot_img
spot_img
spot_img
spot_img
spot_img

ರಾತ್ರಿ Mobile ಚಾರ್ಜ್ ಇಟ್ಟು ಮಲ್ಕೊತೀರಾ.? : ಹಾಗಿದ್ರೆ ಈ ಸುದ್ದಿ ಓದಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರತಿಯೊಬ್ಬರೂ ಮೊಬೈಲ್​ ಚಾರ್ಜಿಂಗ್​ (mobile charge) ವಿಚಾರದಲ್ಲಿ ಒಂದಲ್ಲಾ ಒಂದು ತಪ್ಪು ಮಾಡೇ ಮಾಡುತ್ತಾರೆ.

ಅದರಲ್ಲಿಯೂ ರಾತ್ರಿ ಹೊತ್ತು ಮೊಬೈಲ್ ಚಾರ್ಜಿಂಗ್ ಇಟ್ಟು ಮಲಗುವುದು (slip). ಈ ರೀತಿ ಮಾಡಿದ್ದರಿಂದ ಘೋರ ದುರಂತ ನಡೆದಿದೆ.

ಇದನ್ನು ಓದಿ : 5, 8, 9 ಮತ್ತು 11ನೇ ತರಗತಿಗಳ ಬೋರ್ಡ್ ಪರೀಕ್ಷೆ ಕುರಿತು ಹೈಕೋರ್ಟ್ ಮಹತ್ವದ ಆದೇಶ.!

ಮೀರತ್ ನ ಪಲ್ಲವಪುರಂ ಪ್ರದೇಶದಲ್ಲಿ ಮೊಬೈಲ್ ಫೋನ್ ಗಳನ್ನು ಚಾರ್ಜ್ ಮಾಡುವಾಗ ಶಾರ್ಟ್ ಸರ್ಕ್ಯೂಟ್ (Short circuit) ನಿಂದಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ನಾಲ್ವರು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಾವನ್ನಪ್ಪಿದವರು ಸಾರಿಕಾ (10), ನಿಹಾರಿಕಾ (8), ಸಂಸ್ಕಾರ್ ಅಲಿಯಾಸ್ ಗೋಲು (6) ಮತ್ತು ನಾಲ್ಕು ವರ್ಷದ ಕಾಲು ಎಂದು ವರದಿಯಾಗಿದೆ.

ಈ ವೇಳೆ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸುವಾಗ ಪೋಷಕರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ (serious injuries).

ಘಟನೆಯ ಹಿನ್ನೆಲೆ :

ಮನೆಯಲ್ಲಿ ಮೊಬೈಲ್ ಅನ್ನು ಚಾರ್ಜ್ ಗೆ ಇಟ್ಟು ಮಲಗಿದ್ದಾರೆ. ನಂತರ ಮೊಬೈಲ್ ನಲ್ಲಿ ದೊಡ್ಡ ಸ್ಫೋಟ (blast) ಸಂಭವಿಸಿದ್ದು, ಕೆಲವೇ ಸೆಕೆಂಡುಗಳಲ್ಲಿ, ಬೆಂಕಿ ಮನೆ ತುಂಬ ಹರಡಿದೆ. ಈ ವೇಳೆ ಮಲಗಿದ್ದ ನಾಲ್ವರು ಮಕ್ಕಳು ಸಜೀವ ದಹನವಾಗಿದ್ದಾರೆ.

ಇದನ್ನು ಓದಿ : ಆ ಒಂದು ವಸ್ತುವಿನಿಂದ ಬಟ್ಟೆ ಮೇಲಿನ ಕಲೆ ತೆಗೆಯಬಹುದು ; ಯಾವುದು ಆ ವಸ್ತು.? ; ಈ Video ನೋಡಿ.!

ಮೊಬೈಲ್ ನ ಚಾರ್ಜರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ನಂತರ ಸ್ಫೋಟ ಸಂಭವಿಸಿದೆ. ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

spot_img
spot_img
spot_img
- Advertisment -spot_img