Thursday, April 25, 2024
spot_img
spot_img
spot_img
spot_img
spot_img
spot_img

ಹೋಳಿ ಹಬ್ಬದಂದು ಸ್ಕೂಟರ್‌ನಲ್ಲಿ ಯುವತಿಯರಿಂದ ಅಶ್ಲೀಲ-ಅಸಭ್ಯ ಕೃತ್ಯ ; ವಿಡಿಯೋ Virul.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತದಲ್ಲಿ ಹಬ್ಬಗಳು ನಮ್ಮ ದೇಶದ ಸಂಸ್ಕೃತಿ (culture), ಆಚಾರ-ವಿಚಾರಗಳ, ಸಂಸ್ಕಾರ ಮತ್ತು ದೇಶಿಯ ಸೊಗಡಿನ ಐತಿಹಾಸಿಕ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿವೆ.

ತಲೆಮಾರುಗಳಿಂದ ಇಂತಹ ಹಬ್ಬವನ್ನು ಹೀಗೆಯೇ ಆಚರಿಸಬೇಕು ಎಂಬ ರೀತಿ-ನೀತಿ ಇದ್ದು, ಅದನ್ನು ನಮ್ಮ ಹಿರಿಯರು ಹಾಗೆಯೇ ಹಬ್ಬಗಳನ್ನು (festival’s) ಆಚರಿಸಿಕೊಂಡು ಬಂದಿದ್ದಾರೆ. ಆದರೆ ಇಂದಿನ ಯುವಜನತೆಗೆ ಅದೇನು ಹೇಳಬೇಕೊ ಗೊತ್ತಾಗ್ತಿಲ್ಲ, ಸಂಸ್ಕಾರ ಹಾಳಾಗಿ ಹೋಗುತ್ತಿದೆ.

Health : ಪಪ್ಪಾಯಿ ಎಲೆಯ ರಸವನ್ನು ಏಕೆ ಕುಡಿಯುತ್ತಾರೆ ಗೊತ್ತಾ.?

ಇಂದಿನ ಯುವಕ, ಯುವತಿಯರು ಹಬ್ಬದ ಮಹತ್ವ ತಿಳಿಯದೇ, ಅದನ್ನು ಶಿಸ್ತು ಬದ್ಧವಾಗಿ ಆಚರಿಸದೇ ಇನ್ನೊಬ್ಬರು ಅಸಹ್ಯಪಡುವಂತೆ ಅಶ್ಲೀಲ ಹಾಗೂ ಅಸಭ್ಯವಾಗಿ (rudely) ಹಬ್ಬಗಳನ್ನು ತಮಗೆ ಬೇಕಾದ ರೀತಿ ಆಚರಿಸುತ್ತಿದ್ದಾರೆ.

ಸದ್ಯ ಅಸಹ್ಯ ಎನಿಸುವ ವಿಡಿಯೋವೊಂದು ವೈರಲ್ ಆಗಿದ್ದು, ಇಬ್ಬರು ಹುಡುಗಿಯರು ಚಲಿಸುತ್ತಿರುವ ಸ್ಕೂಟರ್​ನಲ್ಲಿಯೇ (scooter) ಅಸಭ್ಯವಾಗಿ ನಡೆದುಕೊಂಡಿರುವ ವಿಡಿಯೋ ವೈರಲ್ ಆಗ್ತಿದೆ.

ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ಬಾಲಕ ಸ್ಕೂಟರ್ ಚಾಲನೆ (drive) ಮಾಡುತ್ತಿದ್ದರೆ, ಹುಡುಗಿಯರು ಚಲಿಸುತ್ತಿರುವ ಸ್ಕೂಟರ್​ನಲ್ಲಿ ಪರಸ್ಪರ ಎದುರು ಬದುರಾಗಿ ಕುಳಿತು ಅಶ್ಲೀಲ ನೃತ್ಯ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ ವಿಡಿಯೋವನ್ನು ಚಿತ್ರೀಕರಿಸಿದ್ದಾನೆ.

PUC ಪಾಸಾದವರಿಗೆ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.!

ವೈರಲ್ ಆಗಿರುವ ವಿಡಿಯೋದಲ್ಲಿರುವ ದೃಶ್ಯ :

ಇಬ್ಬರು ಹುಡುಗಿಯರು ಸ್ಕೂಟರ್​ನ ಹಿಂಭಾಗ ಕುಳಿತು ಬಾಲಿವುಡ್ ಹಾಡು “ಮೊಹೆ ರಂಗ್ ಲಗಾಡೆ” ಗೆ ನೃತ್ಯ ಮಾಡಿದ್ದಾರೆ. ಇವರು ಡ್ಯಾನ್ಸ್ ಮಾಡ್ತಿದ್ದಾರಾ.? ಅಥವಾ ಅಶ್ಲೀಲ ಕೆಲಸದಲ್ಲಿ ತೊಡಗಿದ್ದಾರಾ.? ಅಥವಾ ಪ್ರಣಯದಲ್ಲಿ ತೊಡಗಿದ್ದಾರಾ.? ಎಂದು ವಿವರಿಸುವುದು ಅಸಾಧ್ಯ ಬಿಡಿ.

ಈ ವಿಡಿಯೋ ವೈರಲ್ ಬಳಿಕ ಪೊಲೀಸರು 33 ಸಾವಿರ ರೂ. ದಂಡ (penalty) ವಿಧಿಸಿದ್ದಾರೆ. ಈ ಕುರಿತು ಪೊಲೀಸರು ಸಾಮಾಜಿಕ ಮಾಧ್ಯಮ ವೇದಿಕೆ “X ” ನಲ್ಲಿ ಮಾಹಿತಿ ನೀಡಿದ್ದಾರೆ. ನೋಯ್ಡಾ (Noida) ಸಂಚಾರ ಪೊಲೀಸರು, ದೂರನ್ನು ಪರಿಗಣಿಸಿ, ನಿಯಮಗಳ ಪ್ರಕಾರ ಇ-ಚಲನ್ (33,000/-) ನೀಡಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಬಂಧಪಟ್ಟ ವಾಹನದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸಂಪಾದಕೀಯ : ಈ ಅವಿವೇಕಿಗಳು ಮಾಡಿದ ಘನಂದಾರಿ ಕಾರ್ಯಕ್ಕೆ ಎಲ್ಲರೂ ತಲೆ ತಗ್ಗಿಸುವಂತಾಗಿದೆ. ಇನ್ನಾದರೂ ಇಂತಹ ಅಶ್ಲೀಲ, ಅಸಭ್ಯ ಮತ್ತು ಅಸಹ್ಯಪಡುವಂತ ಕೃತ್ಯ ನಡೆಯದಿದ್ದರೆ ಸಾಕು.

spot_img
spot_img
spot_img
- Advertisment -spot_img