Saturday, July 27, 2024
spot_img
spot_img
spot_img
spot_img
spot_img
spot_img

SSLC ಪರೀಕ್ಷೆಯಲ್ಲಿ ಸಾಮೂಹಿಕ ನಕಲು ; ಇಬ್ಬರು ಶಿಕ್ಷಕರು ಸಸ್ಪೆಂಡ್.!

spot_img

ಜನಸ್ಪಂದನ ನ್ಯೂಸ್, ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ SSLC ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದ ಶಿಕ್ಷಕರು ನಕಲು (copy) ಮಾಡಲು ಸಹಕರಿಸಿದ ಹಿನ್ನೆಲೆ ಅವರನ್ನು ಅಮಾನತು ಮಾಡಲಾಗಿದೆ.

ಸುರಪುರ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದ ಸುರಪುರ (Surapur) ತಾಲೂಕಿನ ಝಂಡದಕೇರ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಹನುಮಂತರಾಯ ಮತ್ತು ಹುಣಸಗಿ (Hunasagi) ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದ ಸುರಪುರ ತಾಲೂಕಿನ ಏವೂರು ಸರ್ಕಾರಿ ಶಾಲೆಯ ಶಿಕ್ಷಕ ಸಾಹೇಬ್​ಗೌಡ ಸಸ್ಪೆಂಡ್ ಆಗಿದ್ದಾರೆ.

ಇದನ್ನು ಓದಿ : ಪಟ್ಟಿ ಬಿಡುಗಡೆ : ಕರ್ನಾಟಕದ ನಾಲ್ವರಿಗೆ ಟಿಕೆಟ್.!

ಈ ಶಿಕ್ಷಕರು, ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದರೂ ಮೇಲ್ವಿಚಾರಕರು (Supervisors) ಕ್ರಮಕೈಗೊಂಡಿರಲಿಲ್ಲ ಎಂದು ತಿಳಿದು ಬಂದಿದೆ. ಮುಖ್ಯ ಅಧೀಕ್ಷಕರ ಗಮನಕ್ಕೂ ತರದೆ ನಿರ್ಲಕ್ಷ್ಯ ತೋರಿದ್ದಾರೆ.

ಪರೀಕ್ಷೆಯ ವೇಳೆಯಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ನಕಲು (Mass copying) ನಡೆಯುತ್ತಿರುವುದನ್ನು ಸಿಇಓ ಸಿಸಿಟಿವಿ ದೃಶ್ಯಾವಳಿಯಿಂದ ಗಮನಿಸಿದ್ದಾರೆ.

ಇದನ್ನು ಓದಿ : ನೀವೂ ಲಿಫ್ಟ್‌ ಡೋರ್ ಕ್ಲೋಸ್ ಆಗದಂತೆ ನಿಲ್ಲಿಸಲು ಕೈ-ಕಾಲು ಬಳಸ್ತೀರಾ.? ; ಹಾಗಿದ್ರೆ ತಪ್ಪದೇ ಈ ವಿಡಿಯೋ ನೋಡಿ.

ಈ ಹಿನ್ನಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.

spot_img
spot_img
- Advertisment -spot_img