ಜನಸ್ಪಂದನ ನ್ಯೂಸ್, ಡೆಸ್ಕ್ : ರೂಮ್ ನಲ್ಲಿ ಪೊಲೀಸನೊಬ್ಬ ತನ್ನ ಗರ್ಲ್ ಫ್ರೆಂಡ್ ಕೈಗೆ ಗನ್ ಕೊಟ್ಟು ರೀಲ್ಸ್ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸದ್ಯ ಘಟನೆಯ ಕುರಿತಾದ ವಿಡಿಯೋವೊಂದು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ನೆಟ್ಟಿಗರಿಂದ ಪಾಸಿಟಿವ್, ನೆಗೆಟಿವ್ ಕಮೆಂಟ್ ಗಳು ಬಂದಿವೆ. ಕೆಲವರು ಆತ ತನ್ನ ಗರ್ಲ್ ಫ್ರೆಂಡ್ ಕೈಗೆ ಗನ್ ಕೊಟ್ಟು ಕರ್ತವ್ಯ ಲೋಪವೆಸಗಿದ್ದಾನೆ ಎಂದಿದ್ದಾರೆ.
ಇನ್ನೂ ಕೆಲವರು ಪೊಲೀಸ್ ಆಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಆತ ತನ್ನ ಖಾಸಗಿ ಜೀವನದ ವಿಡಿಯೋವನ್ನು ಈ ರೀತಿ ಬಹಿರಂಗ ಪಡಿಸಬಾರದು ಎಂದು ಸಲಹೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ (X) ನಲ್ಲಿ ಈ ವಿಡಿಯೋವನ್ನು ಮನೋಜ್ ಶರ್ಮಾ ಲಖನೌ ಯುಪಿ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಇದರಲ್ಲಿ ಪೊಲೀಸನ ಗನ್ ಅನ್ನು ಆತನ ಗೆಳತಿ ಹಿಡಿದುಕೊಂಡು ಮೇರಾ ಬಾಲಮ್ ಠಾಣೆದಾರ್ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಾಳೆ.
ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಇನ್ಸ್‌ಪೆಕ್ಟರ್ ಓರ್ವ ಸರ್ಕಾರಿ ಗೆಸ್ಟ್ ಹೌಸ್‌ನಲ್ಲಿ ಮಹಿಳಾ ಇನ್ಸ್‌ಪೆಕ್ಟರ್ ಜೊತೆ ಲವ್ವಿಡವ್ವಿಯಲ್ಲಿ ತೊಡಗಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಪತ್ನಿಯ ಕೈಗೆ ಸಿಕ್ಕಿ ಬಿದ್ದಿದ್ದರು.
ಆಗ್ರಾದಲ್ಲಿರುವ ಪೊಲೀಸ್ ರೆಸ್ಟ್ ಹೌಸ್‌ನಲ್ಲಿ ರಕಬ್ ಗಂಜ್ ಪೊಲೀಸ್ ಠಾಣೆಯ ಮಹಿಳಾ ಎಸ್ಐ ಜತೆ ಕಾಲ ಕಳೆಯುತ್ತಿದ್ದ ವೇಳೆ ಪತ್ನಿ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಧರ್ಮದೇಟು ನೀಡಿದ್ದರು. ಘಟನೆಯ ಕುರಿತು ವಿಡಿಯೋ ಕೂಡ ವೈರಲ್ ಆಗಿತ್ತು.
ऐसे लोगों ने खाकी का मज़ाक बना कर रख दिया है !!
अभी आगरा में आशिक मिजाज़ इंस्पेक्टरो को यूपी के लोग भूल भी नहीं पाए थे !!देखिए गजब आशिकी छाई हुई हैं साहब जी पर !!
"प्रेमिका के हाथ में पिस्टल दे डाला"मेरा बालम थानेदार चलावे जिप्सी गाना पर रील की खुमारी छाई हुई हैं !!
किसी साथी… pic.twitter.com/lYHAmWU8f4— MANOJ SHARMA LUCKNOW UP🇮🇳🇮🇳🇮🇳 (@ManojSh28986262) August 5, 2024