ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದು ಭಾನುವಾರ ಬೆಳಗಿನ ಜಾವ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ (Helicopter crash) ಅಪಘಾತದಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. ಕೇದಾರನಾಥ ಧಾಮದಿಂದ ಗುಪ್ತಕಾಶಿಗೆ ತೆರಳುತ್ತಿದ್ದ ವೇಳೆ ಪ್ರತಿಕೂಲ ಹವಾಮಾನದಿಂದಾಗಿ ಗೌರಿಕುಂಡ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ.
ಭಾನುವಾರ ಬೆಳಗಿನ ಜಾವ ಸುಮಾರು 5:30 ರ ಸುಮಾರಿಗೆ ಸಂಭವಿಸಿದ್ದು, ಪೈಲಟ್ ಸೇರಿದಂತೆ ಏಳು ಜನರು ಅಪಘಾತದ ಸಮಯದಲ್ಲಿ ಅದರಲ್ಲಿದ್ದರು. ಅಪಘಾತದಿಂದ ಹೆಲಿಕಾಪ್ಟರ್‌ನ (Helicopter crash) ಅವಶೇಷಗಳು ಸ್ಥಳದಲ್ಲಿ ಚದುರಿಹೋಗಿವೆ.
ಇದನ್ನು ಓದಿ : Romance : ಕಾಲೇಜ್ ಕ್ಲಾಸ್ ಬಿಟ್ಟು, ನಡುಬೀದಿಯಲ್ಲಿ ವಿದ್ಯಾರ್ಥಿಗಳ ಲವ್ ಕ್ಲಾಸ್.!
ಹೊಗೆಯನ್ನು ನೋಡಿದ ಹುಲ್ಲು ಕತ್ತರಿಸುತ್ತಿದ್ದ ಮಹಿಳೆಯರು ಘಟನೆಯ ಬಗ್ಗೆ ಕೂಡಲೇ ಮಾಹಿತಿ ನೀಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಮೂರನೇ ಹೆಲಿಕಾಪ್ಟರ್ ಅಪಘಾತ (Helicopter crash) ಇದಾಗಿದೆ.
ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬರುತ್ತಿದ್ದು, ಹೆಲಿಕಾಪ್ಟರ್ ಪತನದ (Helicopter crash) ವೇಳೆ ಪೈಲಟ್ (5 ವಯಸ್ಕರು ಮತ್ತು 1 ಮಗು) ಸೇರಿದಂತೆ ಆರು ಪ್ರಯಾಣಿಕರಿದ್ದರು. ಹೆಲಿಕಾಪ್ಟರ್‌ನಲ್ಲಿದ್ದ ಪ್ರಯಾಣಿಕರು ಉತ್ತರಾಖಂಡ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನವರು.
ಇದನ್ನು ಓದಿ : Accident : ಅಥಣಿ ಬಳಿ ಭೀಕರ ಅಪಘಾತಕ್ಕೆ 3 ಜನರ ಸಾವು.!
ಅಪಘಾತದ (Helicopter crash) ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳನ್ನು ತೆರಳಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ.
ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಗೌರಿ ಮಾಯ್ ಖಾರ್ಕ್‌ನ ಮೇಲಿರುವ ಅರಣ್ಯ ಪ್ರದೇಶಕ್ಕೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ (Helicopter crash) ಎಂದು ವರದಿಯಾಗಿದೆ. ಪ್ರತಿಕೂಲ ಹವಾಮಾನ ಮತ್ತು ಪೂರ್ ವಿಸಿಬಿಲಿಟಿಯೇ ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆಂದು ತಿಳಿದು ಬಂದಿದೆ.
Helicopter crash :
Uttarakhand helicopter crash | Today, at around 5:20 am, a helicopter, which was going from Shri Kedarnath Dham to Guptkashi, has been reported to have crashed near Gaurikund. There were six passengers, including the pilot (5 adults and 1 child). The passengers in the helicopter… pic.twitter.com/AVGtuxWKGj
— ANI (@ANI) June 15, 2025
Central Bank : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 4500 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಜನಸ್ಪಂದನ ನ್ಯೂಸ್, ನೌಕರಿ : ಸೆಂಟ್ರಲ್ ಬ್ಯಾಂಕ್ (Central Bank) ಆಫ್ ಇಂಡಿಯಾದಲ್ಲಿ ಖಾಲಿ ಇರುವ 4,500 (ಅಪ್ರೆಂಟಿಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್ (Central Bank Of India ದ Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : Kidney stones : ಕಿಡ್ನಿ ಸ್ಟೋನ್ ಸಮಸ್ಯೆಯೇ.? ಹಾಗಾದ್ರೆ ಕುಡಿಯಿರಿ ಈ 1 ವಿಶೇಷ ಜ್ಯೂಸ್.!
ಅಪ್ರೆಂಟಿಸ್ ಕಾಯಿದೆ- 196 ರ ಅಡಿಯಲ್ಲಿ ಮತ್ತು ಅಪ್ರೆಂಟಿಸ್‌ಶಿಪ್ ನೀತಿಯ ಪ್ರಕಾರ ಅರ್ಹ ಅಭ್ಯರ್ಥಿಗಳಿಂದ ಸೆಂಟ್ರಲ್ ಬ್ಯಾಂಕ್ (Central Bank) ಆಫ್ ಇಂಡಿಯಾದಲ್ಲಿ 4500 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇಂದ್ರ ಉನ್ನತ ಶಿಕ್ಷಣ ಸಚಿವಾಲಯದ ಸಹಭಾಗಿತ್ವದಲ್ಲಿ ಬ್ಯಾಂಕ್ ಈ ಅಪ್ರೆಂಟಿಸ್‌ಶಿಪ್ ನೀಡುತ್ತಿದೆ.
Central Bank ನೇಮಕಾತಿ ವಿವರಗಳು :
- ಸಂಸ್ಥೆ ಹೆಸರು : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank) .
- ಒಟ್ಟು ಹುದ್ದೆಗಳ ಸಂಖ್ಯೆ : 4500.
- ಹುದ್ದೆಗಳ ಹೆಸರು : ಅಪ್ರೆಂಟಿಸ್.
- ಉದ್ಯೋಗ ಸ್ಥಳ : ಭಾರತಾದ್ಯಂತ.
ಇದನ್ನು ಓದಿ : Ahmedabad : 243 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಪಘಾತ.!
ಹುದ್ದೆಗಳ ಪ್ರಕಾರ :
- ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ತರಬೇತಿ ಪಡೆದ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ.
ವೇತನ ಶ್ರೇಣಿ :
- ಈ ಹುದ್ದೆಗಳಿಗೆ ಆಯ್ಕೆಯದ ಅಭ್ಯಾರ್ಥಿಗಳಿಗೆ ರೂ. 15,000/- ಪ್ರತಿ ತಿಂಗಳು ಬ್ಯಾಂಕಿನ (Central Bank) ನಿಯಮಾವಳಿಯಂತೆ ವೇತನ ನೀಡಲಾಗುವುದು.
ಇದನ್ನು ಓದಿ : MECL : ಮಿನಿರಲ್ ಎಪ್ಲೋರೇಷನ್ & ಕನ್ಸಲ್ಟೆನ್ಸಿ ಲಿಮಿಟೆಡ್‌ನಲ್ಲಿ ಉದ್ಯೋಗವಕಾಶ.!
ಶೈಕ್ಷಣಿಕ ವಿದ್ಯಾರ್ಹತೆ :
- ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Degree) ಪೂರ್ಣಗೊಳಿಸಿರಬೇಕು. ಯಾವುದೇ ವಿಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯೋಮಿತಿ : (07-06-2025 ಕ್ಕೆ)
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿವ ಅಭ್ಯರ್ಥಿಯ ಕನಿಷ್ಠ ವರ್ಷ : 20 ವರ್ಷ.
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿವ ಅಭ್ಯರ್ಥಿಯ ಗರಿಷ್ಠ ವರ್ಷ : 28 ವರ್ಷ.
ಇದನ್ನು ಓದಿ : ಗಸ್ತು ತಿರುಗುತ್ತಿದ್ದಾಗ SUV ಡಿಕ್ಕಿ : ಮಹಿಳಾ ಪೊಲೀಸ್ ಸಾವು, 2 ಜನರಿಗೆ ಗಾಯ.!
ವಯೋಮಿತಿ ಸಡಿಲಿಕೆ :
- ಒಬಿಸಿ ಅಭ್ಯರ್ಥಿಗಳಿಗೆ : 03 ವರ್ಷ.
- SC/ST ಅಭ್ಯರ್ಥಿಗಳಿಗೆ : 05 ವರ್ಷ.
- ವಿಕಲಚೇತನ ಅಭ್ಯರ್ಥಿಗಳಿಗೆ :
- ಯುಆರ್ : 10 ವರ್ಷ.
- OBC : 13 ವರ್ಷ.
- SC/ST : 15 ವರ್ಷ.
ಇದನ್ನು ಓದಿ : Accident : ಅಥಣಿ ಬಳಿ ಭೀಕರ ಅಪಘಾತಕ್ಕೆ 3 ಜನರ ಸಾವು.!
ಅರ್ಜಿ ಶುಲ್ಕ :
- ವಿಕಲಚೇತನ (PwBD) ಅಭ್ಯರ್ಥಿಗಳು : ರೂ. 400/-
- SC/ST/Women/EWS ಅಭ್ಯರ್ಥಿಗಳು : ರೂ. 600/-
- OBC ಅಭ್ಯರ್ಥಿಗಳು : ರೂ. 800/-
ಶುಲ್ಕ ಪಾವತಿ ವಿಧಾನ :
- ಆನ್‌ಲೈನ್ (Online) ಮೂಲಕ ಶುಲ್ಕ ಪಾವತಿ ಮಾಡಲು ಅವಕಾಶವಿದೆ.
ಆಯ್ಕೆ ವಿಧಾನ :
- ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ:
- Online test : ಬ್ಯಾಂಕಿಂಗ್ ಜ್ಞಾನ, ಸಾಮಾನ್ಯ ಅರಿವು, ಸಂಖ್ಯಾತ್ಮಕ ನಿರ್ಣಯ, ಅಂಕಗಣಿತ, ಇಂಗ್ಲೀಷ್ ಸೇರಿದಂತೆ ವಿಷಯಗಳನ್ನು ಒಳಗೊಂಡಂತೆ ಪರೀಕ್ಷೆ ನಡೆಸಲಾಗುತ್ತದೆ.
- Local language test : ಅಭ್ಯರ್ಥಿಗಳು ಆಯ್ಕೆ ಮಾಡಿದ ರಾಜ್ಯದ ಪ್ರಕಾರ ಸ್ಥಳೀಯ ಭಾಷೆಯಲ್ಲಿ ನೈಪುಣ್ಯದ ಪರೀಕ್ಷೆ ನಡೆಯಲಿದೆ.
ಇದನ್ನು ಓದಿ : Romance : ಕಾಲೇಜ್ ಕ್ಲಾಸ್ ಬಿಟ್ಟು, ನಡುಬೀದಿಯಲ್ಲಿ ವಿದ್ಯಾರ್ಥಿಗಳ ಲವ್ ಕ್ಲಾಸ್.!
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ (Central Bank Of India) ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
- ಅರ್ಜಿ ಸಲ್ಲಿಸಲು ಮೊದಲು ನಿಮ್ಮ Email ID, Mobile Number, ಶೈಕ್ಷಣಿಕ ದಾಖಲೆಗಳನ್ನು ಸಿದ್ಧಪಡಿಸಿ.
- Online ಅರ್ಜಿ ಸಲ್ಲಿಕೆ ಲಿಂಕ್‌ನಲ್ಲಿ ಅರ್ಜಿ ನಮೂನೆ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು Upload ಮಾಡಿ ಹಾಗೂ ಫೋಟೋ ಸೈನ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ.
- ಅರ್ಜಿ ಸಲ್ಲಿಸಿ ಮತ್ತು ನಿಮ್ಮ Application ಸಂಖ್ಯೆಯನ್ನು ಉಳಿಸಿಟ್ಟುಕೊಳ್ಳಲು ಪ್ರಿಂಟ್ (Print) ತೆಗೆದುಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : ಜೂನ್ 07, 2025.
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜೂನ್ 23, 2025.
- ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : ಜೂನ್ 25, 2025.
- ಆನ್‌ಲೈನ್ ಪರೀಕ್ಷೆ (approximate) : ಜುಲೈ 03, 2025.
ಇದನ್ನು ಓದಿ : Greens : ಅರೆ ನೀವು ತಿಂದಿರಾ? ಈ 1 ಸೊಪ್ಪಿನ ಆರೋಗ್ಯದ ರಹಸ್ಯಗಳು ಇಗೋ ಇಲ್ಲಿವೆ!
ಕರ್ನಾಟಕದಲ್ಲಿ ಹುದ್ದೆಗಳು ಎಲ್ಲಲ್ಲಿ?
ಬೆಂಗಳೂರು ಗ್ರಾಮಾಂತರ-3, ಬೆಂಗಳೂರು ನಗರ-37, ಚಾಮರಾಜನಗರ-1, ಚಿಕ್ಕಬಳ್ಳಾಪುರ-3, ಚಿಕ್ಕಮಗಳೂರು-1, ಹಾಸನ-3, ಕೊಡಗು-3, ಕೋಲಾರ-1, ಮಂಡ್ಯ-2, ಮೈಸೂರು-4, ರಾಮನಗರ-2, ತುಮಕೂರು-1, ಬಾಗಲಕೋಟೆ-4, ಬಳ್ಳಾರಿ-2, ಬೆಳಗಾವಿ-3, ಬೀದರ್-1, ಚಿತ್ರದುರ್ಗ-1, ದಕ್ಷಿಣ ಕನ್ನಡ-3, ದೇವನಗೆರೆ-3, ದಾರವಾಡ-4. ಗದಗ-2, ಹಾವೇರಿ-3, ಕಲಬುರಗಿ-2, ಕೊಪ್ಪಳ-2, ರಾಯಚೂರು-3, ಶಿವಮೊಗ್ಗ-1,ಉಡುಪಿ-2, ಉತ್ತರ ಕನ್ನಡ-4, ವಿಜಯನಗರ-1, ವಿಜಯಪುರ-3, ಯಾದಗಿರಿ-2
ಪ್ರಮುಖ ಲಿಂಕ್‌ಗಳು :
- Online ಅರ್ಜಿ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ.
- ಟೆಲಿಗ್ರಾಂ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ.
- whatsapp ಲಿಂಕ್ : ಇಲ್ಲಿ ಕ್ಲಿಕ್ ಮಾಡಿ.
Disclaimer : The above given information is available On online, candidates should check it properly before applying. This is for information only.