ಜನಸ್ಪಂದನ ನ್ಯೂಸ್, ಬೆಂಗಳೂರು : ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿಯಾಗಿರುವ (anchor) ಅನುಶ್ರೀ ಮನೆಮಾತಾಗಿದ್ದಾರೆ.
ತಮ್ಮ ಚಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು (viewers) ಫಿದಾ ಆಗಿದ್ದಾರೆ.
ಇದನ್ನು ಓದಿ : ಡ್ಯಾನ್ಸ್ ಮಾಡಲು ಒತ್ತಾಯಿಸಿದ ವಧು ; ವರ ಮಾಡಿದ್ದೇನು.? ಈ video ನೋಡಿ.!
ವಯಸ್ಸು 36 ಆದರೂ ವಯಸ್ಸು ಮದುವೆ ಇನ್ನೂ ಆಗಿಲ್ಲ ಎನ್ನುವುದೇ ಅನುಶ್ರೀ ಅವರ ಅಭಿಮಾನಿಗಳಿಗೆ (fans) ಬೇಸರ ತಂದಿದೆ. ಆದ್ದರಿಂದ ಹೋದಲ್ಲಿ, ಬಂದಲ್ಲಿ ಮದ್ವೆ ಯಾವಾಗ ಎನ್ನುವ ಪ್ರಶ್ನೆಯೇ ಎದುರಾಗುತ್ತಿರುತ್ತದೆ.
ಈ ಮಧ್ಯೆ ಇತ್ತೀಚೆಗೆ ಭಾರಿ ಟ್ರೆಂಡ್ (trend) ಆಗಿರುವ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ಆ್ಯಂಕರ್ ಅನುಶ್ರೀ ರೀಲ್ಸ್ ಮಾಡಿದ್ದಾರೆ. ಕೆಲವು ಯುವತಿಯರ ಜೊತೆ ಅನುಶ್ರೀ ರೀಲ್ಸ್ ಮಾಡಿದ್ದು, ಇದಕ್ಕೆ ಬಹಳಷ್ಟು ಕಮೆಂಟ್ಗಳು ಬರುತ್ತಿವೆ.
ಪ್ಲೀಸ್ ರಾಹುಲ್ಲಾ ಅಂತ ಮಾತ್ರ ಹೇಳ್ಬೇಡಮ್ಮಾ ಎಂದು ಕಾಲೆಳೆಯುತ್ತಿದ್ದಾರೆ. ಹೆಚ್ಚಿನವರು ನಾವೂ ಅದನ್ನೇ ಕೇಳ್ತಿದ್ದೇವೆ ಎಂದಿದ್ದಾರೆ. ನಿನ್ನ ಕರಿಮಣಿ ಮಾಲಿಕ ಯಾರಮ್ಮಾ, ಬೇಗ ಹೇಳಮ್ಮಾ ಅಂತಿದ್ದಾರೆ.
ಇದನ್ನು ಓದಿ : ʻಧಕ್ ಧಕ್ ಕರ್ನೆ ಲಗಾʼ ಹಾಡಿಗೆ ಮೈ ಚಳಿ ಬಿಟ್ಟು ಕುಣಿದ ನಟಿ ; Video viral.!
ನಮಗೂ ಇದು ಮಿಲಿಯನ್ ಡಾಲರ್ ಪ್ರಶ್ನೆ ಎಂದು ಅಭಿಮಾನಿಯೊಬ್ಬ ಹೇಳಿದ್ದರೆ, ಇನ್ನು ಕೆಲವರು ಕರಿಮಣಿ ಮಾಲೀಕ ನಿಮಗೆ ಆದಷ್ಟು ಬೇಗ ಸಿಗಲಿ ಎಂದು ಹಾರೈಸುತ್ತಿದ್ದಾರೆ (wishing). ಇನ್ನು ಕೆಲವು ತರ್ಲೆ ನೆಟ್ಟಿಗರು ನಾನಾಗ್ಲಾ ಎಂದು ಪ್ರಶ್ನಿಸುತ್ತಿದ್ದಾರೆ.
View this post on Instagram