ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ದಿನಗಳಲ್ಲಿ ಯಾವ ವಸ್ತು, ಸಾಮಗ್ರಿಗೆ ಬೆಲೆ ಜಾಸ್ತಿ ಇರುತ್ತದೆಯೋ ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಲವು ಜನರು ತಿಳಿದಿರುತ್ತಾರೆ. ಆದರೆ ಬೆಲೆ ಹೆಚ್ಚಿದೆ ಅಂದ್ರೆ ಅದು ಒಳ್ಳೆಯ ಗುಣಮಟ್ಟ, ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಅಂತ ಜನರು ಭಾವಿಸ್ತಾರೆ. ಆದ್ರೆ ಕಡಲೆಕಾಯಿ ವಿಷಯದಲ್ಲಿ ಈ ಮಾತು ಶುದ್ಧ ಸುಳ್ಳು.
ಒಂದು ಕೆ.ಜಿ ಗೋಡಂಬಿ ಬೆಲೆ 800 ರೂಪಾಯಿ ಮೇಲಿದೆ. ಅದೇ ಬಡವರ ಬಾದಾಮಿ ಎಂದೇ ಪ್ರಸಿದ್ಧಿ ಪಡೆದಿರುವ ಶೇಂಗಾ ಬೆಲೆ 100-150 ರೂಪಾಯಿ ಒಳಗಿದೆ.
ಇದನ್ನು ಓದಿ : Job : ಲಿಖಿತ ಪರೀಕ್ಷೆಯಿಲ್ಲದೇ ರೈಲ್ವೆ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗವಕಾಶ; 2 ಲಕ್ಷದವರೆಗೆ ಸಂಬಳ.!
ನಾವೇನು ತಿಳಿತೀವಿ ಗೋಡಂಬಿ ತುಟ್ಟಿ ಇದೆಯಲ್ಲಾ, ಅದಕ್ಕೆ ಅದನ್ನು ನಾವು ತಿಂದ್ರೆ ಅರಾಮ್ ಇರ್ತೀವಿ ಅಂತ ನಾವು ತಿಳಿದುಕೊಂಡಿರುತ್ತೇವೆ.
ನಿಮ್ಮ ಆರೋಗ್ಯ ವೃದ್ಧಿಸೋಕೆ ಗೋಡಂಬಿಯನ್ನೇ ತಿನ್ನಬೇಕು ಎನ್ನುವುದೇನಿಲ್ಲ. ಕೆಲ ತಜ್ಞರು, ಗೋಡಂಬಿ ಬೇಡ, ಶೇಂಗಾ ತಿನ್ನಿ ಅಂತ ಸಲಹೆ ನೀಡ್ತಾರೆ. ಅದಕ್ಕೆ ಕಾರಣ ಇದೆ. ನೀವಂದ್ಕೊಂಡಂಗೆ ಗೋಡಂಬಿ ಹಾಗೂ ಶೇಂಗಾ ಮಧ್ಯೆ ಹೆಚ್ಚಿನ ವ್ಯತ್ಯಾಸವೇನಿಲ್ಲ.
ಶೇಂಗಾ, ಗೋಡಂಬಿಗೆ ಸಮವಾಗಿ ತೂಗುತ್ತೆ. ಗೋಡಂಬಿ ಹಾಗೂ ಕಡಲೆಕಾಯಿ ಎರಡೂ ಸಮನಾದ ಕ್ಯಾಲೊರಿಗಳನ್ನು ಹೊಂದಿವೆ. ಪ್ರೋಟೀನ್ ಮತ್ತು ಕಾರ್ಬ್ ಮೌಲ್ಯಗಳಲ್ಲಿ ಭಿನ್ನವಾಗಿವೆ.
ಶೇಂಗಾದಲ್ಲಿ 189ರಷ್ಟು ಕ್ಯಾಲೋರಿ,9 ಗ್ರಾಂ ಪ್ರೋಟೀನ್, 14 ಗ್ರಾಂ ಕೊಬ್ಬು, 5.3 ಗ್ರಾಂ ಕಾರ್ಬ್ ಮತ್ತು 3 ಗ್ರಾಂ ಫೈಬರ್ ಇರುತ್ತದೆ. ಅದೇ ರೀತಿ 28 ಗ್ರಾಂ ಗೋಡಂಬಿಯಲ್ಲಿ, 188ರಷ್ಟು ಕ್ಯಾಲೋರಿ, 5 ಗ್ರಾಂ ಪ್ರೋಟೀನ್, 15 ಗ್ರಾಂ ಕೊಬ್ಬು, 11 ಗ್ರಾಂ ಕಾರ್ಬ್, 1 ಗ್ರಾಂ ಫೈಬರ್ ಇದೆ.
ಇದನ್ನು ಓದಿ : ಮಸೀದಿಯೊಳಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲ್ಲ : High court
ಚಳಿಗಾಲದಲ್ಲಿ ಗೋಡಂಬಿ ಸೇವನೆಗಿಂತ ಶೇಂಗಾ ತಿನ್ನುವುದು ಒಳ್ಳೆಯದು. ಕಡಲೆಕಾಯಿಯಲ್ಲಿ ಇರುವ ಫೈಬರ್ ಮತ್ತು ಪ್ರೋಟೀನ್, ಹಸಿವನ್ನು ನಿಯಂತ್ರಿಸುತ್ತದೆ. ಕಡಲೆಕಾಯಿಯಲ್ಲಿ ವಿಟಮಿನ್ ಬಿ 3 ಮತ್ತು ರೆಸ್ವೆರಾಟ್ರೊಲ್ ಇದ್ದು, ಇದು ಮೆದುಳನ್ನು ಚುರುಕುಗೊಳಿಸುತ್ತದೆ. ಶೇಂಗಾದಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಖನಿಜಗಳು ಮೂಳೆ ಬಲಪಡಿಸುತ್ತವೆ.
ಕಡಲೆಕಾಯಿಯಲ್ಲಿ ಮೊನೊಸ್ಯಾಚುರೇಟೆಡ್ ಕೊಬ್ಬು ಮತ್ತು ಪಾಲಿಸ್ಯಾಚುರೇಟೆಡ್ ಕೊಬ್ಬು ಇದ್ದು, ಇದು ಹೃದಯಕ್ಕೆ ಒಳ್ಳೆಯದು. ಕಡಲೆಕಾಯಿಯಲ್ಲಿರುವ ಪ್ರೋಟೀನ್, ಸ್ನಾಯುಗಳ ಬೆಳವಣಿಗೆಗೆ ಸಹಕಾರಿ. ದೀರ್ಘಕಾಲ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಕಡಲೆಕಾಯಿಯಲ್ಲಿರುವ ಕಾರ್ಬೋಹೈಡ್ರೇಟ್ ಮತ್ತು ಪ್ರೊಟೀನ್ ದೇಹಕ್ಕೆ ತ್ವರಿತ ಶಕ್ತಿ ನೀಡುವುದಲ್ಲದೆ. ಜೀರ್ಣಕ್ರಿಯೆಗೆ ಸಹಕಾರಿ. ಮಲಬದ್ಧತೆ ಸಮಸ್ಯೆಯನ್ನು ಇದು ಕಡಿಮೆ ಮಾಡುತ್ತದೆ.
ಹಾಗಂತ ಗೋಡಂಬಿಯಿಂದ ಏನು ಆರೋಗ್ಯ ಪ್ರಯೋಜನಗಳಿಲ್ಲ ಅನ್ಕೊಬೇಡಿ. ಗೋಡಂಬಿ ತಿನ್ನುವುದರಿಂದ ತ್ವಚೆ ಆರೋಗ್ಯವಾಗಿರುವುದಲ್ಲದೆ ಕಾಂತಿಯುತವಾಗುತ್ತದೆ. ಕೂದಲು ಮತ್ತು ಚರ್ಮಕ್ಕೂ ಒಳ್ಳೆಯದು. ಪ್ರೋಟೀನ್ ಹೇರಳವಾಗಿರುವ ಕಾರಣ, ಜೀರ್ಣಕ್ರಿಯೆಗೆ ಉತ್ತಮ. ಇದು ಹೃದಯಕ್ಕೆ ಪ್ರಯೋಜನಕಾರಿ. ಇದು ಮೊನೊಸ್ಯಾಚುರೇಟೆಡ್ ಮತ್ತು ಪಾಲಿಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುತ್ತದೆ. ಆದರೆ ಗೋಡಂಬಿಯನ್ನು ಮಿತವಾಗಿ ತಿನ್ನಬೇಕು.
ಇದನ್ನು ಓದಿ : ಮಕ್ಕಳ ಮುಂದೆ S*x ಮಾಡುವುದು, ಬಟ್ಟೆ ಬದಲಿಸುವುದು ಲೈಂಗಿಕ ಕಿರುಕುಳವಿದ್ದಂತೆ; ಹೈಕೋರ್ಟ್ ಮಹತ್ವದ ತೀರ್ಪು.!
ಶೇಂಗಾದಲ್ಲಿ ವಿಟಮಿನ್ ಪ್ರಮಾಣ ಹೆಚ್ಚಿದ್ದು, ಗೋಡಂಬಿಯಲ್ಲಿ ಕಡಿಮೆ ಇರುತ್ತದೆ. ಎರಡೂ ತಮ್ಮದೇ ಆರೋಗ್ಯ ಲಾಭವನ್ನು ಹೊಂದಿದ್ದರೂ, ಹೇಗೆ ಸೇವನೆ ಮಾಡುತ್ತೇವೆ ಎಂಬುದರ ಮೇಲೆ ನಮ್ಮ ಆರೋಗ್ಯ ನಿಂತಿದೆ. ಹೆಚ್ಚು ಉಪ್ಪು ಮಿಶ್ರಿತ ಗೋಡಂಬಿ ಅಥವಾ ಶೇಂಗಾ ಸೇವನೆ ಆರೋಗ್ಯಕ್ಕೆ ಹಾನಿಕರ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.