ಜನಸ್ಪಂದನ ನ್ಯೂಸ್, ಮುಜಾಫರ್‌ನಗರ (ಉ.ಪ್ರ) : ಸಾಮಾಜಿಕ ಜಾಲತಾಣಗಳಲ್ಲಿ ಹಾವಿ (Snake) ನೊಂದಿಗೆ ವಿಡಿಯೋ ಮಾಡುವ ಹುಚ್ಚಿನಲ್ಲಿ 24 ವರ್ಷದ ಯುವಕನೊಬ್ಬ ಜೀವ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಮೊರ್ನಾ ತಾಲೂಕಿನ ಭೊಪಾ ಪ್ರದೇಶದಲ್ಲಿ ನಡೆದಿದೆ.
ಮೃತ ಯುವಕನನ್ನು ಮೋಹಿತ್ ಕುಮಾರ್ ಅಲಿಯಾಸ್ ಬಂಟಿ ಎಂದು ಗುರುತಿಸಲಾಗಿದೆ. ಸ್ಥಳೀಯರ ಪ್ರಕಾರ, ಮಂಗಲ್ ಪ್ರಜಾಪತಿ ಎಂಬುವರ ಮನೆಯಲ್ಲಿ ಹಾವು (Snake) ಕಂಡುಬಂದಾಗ ಜನರು ಅಂಜಿ ಬೊಬ್ಬೆ ಹೊಡೆದಿದ್ದರು. ಅದೇ ವೇಳೆ ಅಲ್ಲಿಗೆ ಬಂದ ಮೋಹಿತ್ ತನ್ನ ಕೈಗಳಿಂದಲೇ ಹಾವನ್ನು ಹಿಡಿದಿದ್ದಾನೆ.
72 ವರ್ಷದ ವರ, 27 ವರ್ಷದ ವಧು ; ಹಿಂದೂ ಸಂಪ್ರದಾಯದಂತೆ Marriage ಆದ ಉಕ್ರೇನ್ ಜೋಡಿ.!
ಹಾವ (Snake) ನ್ನು ಹಿಡಿದ ನಂತರ ಆತ ಅದನ್ನು ಚೀಲಕ್ಕೆ ತುಂಬದೆ, ಜನರ ಮುಂದೆ ಸಾಹಸ ಪ್ರದರ್ಶಿಸಲು ಮುಂದಾಗಿದ್ದ. ಹಾವನ್ನು ಕೊರಳಿಗೆ ಸುತ್ತಿಕೊಂಡು, ಆ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಸಲು ಪ್ರಾರಂಭಿಸಿದ್ದ. ಈ ವೇಳೆ ಬೆದರಿದ ಹಾವು ಆತನ ಕೈಗೆ ಎರಡು ಬಾರಿ ಕಚ್ಚಿತು.
ಕಚ್ಚಿದ ನಂತರವೂ ಹಾವ (Snake) ನ್ನು ಚೀಲಕ್ಕೆ ಹಾಕಿದ ಮೋಹಿತ್, ಕೆಲವು ನಿಮಿಷಗಳಲ್ಲಿ ಅಸ್ವಸ್ಥನಾದ. ತಕ್ಷಣವೇ ಕುಟುಂಬದವರು ಅವನನ್ನು ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೋಹಿತ್ ಮೃತಪಟ್ಟಿದ್ದಾನೆ.
ಹೆಚ್ಚಿದ Uric ಆಮ್ಲದಿಂದ ಬಳಲುತ್ತಿದ್ದೀರಾ? ಈ ಸೂಪರ್ ಫುಡ್ ಸೇವಿಸಿ.!
ಪೊಲೀಸರು ಈ ಪ್ರಕರಣವನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಿದ್ದು, “ಅವನು ಹಾವ (Snake) ನ್ನು ಹಿಡಿದು ನೇರವಾಗಿ ಕಾಡಿಗೆ ತೆರಳಿ ಬಿಟ್ಟು ಬಂದಿದ್ದರೆ ಬದುಕುಳಿಯಬಹುದಿತ್ತು. ಆದರೆ ಸ್ಟಂಟ್ ಮಾಡಲು ಹೋಗಿ ಜೀವ ಕಳೆದುಕೊಂಡಿದ್ದಾನೆ” ಎಂದು ತಿಳಿಸಿದ್ದಾರೆ.
ವೈರಲ್ ವೀಡಿಯೋ ಹುಚ್ಚಿನ ದುಷ್ಪರಿಣಾಮ :
ಇತ್ತೀಚೆಗೆ ವೈರಲ್ ಆಗಲು ಯುವಕರು ಅತಿಯಾದ ಸಾಹಸಗಳಿಗೆ ಮುಂದಾಗುತ್ತಿರುವುದರಿಂದ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ರಸ್ತೆಗಳು, ರೈಲು ಹಳಿ, ಕಟ್ಟಡಗಳ ಮೇಲ್ಛಾವಣಿ ಇತ್ಯಾದಿ ಅಪಾಯಕಾರಿ ಸ್ಥಳಗಳಲ್ಲಿ ವೀಡಿಯೋ ಮಾಡುವ ಪ್ರವೃತ್ತಿ ಹೆಚ್ಚಾಗಿದ್ದು, ತಾವು ಮಾತ್ರವಲ್ಲ ಇತರರ ಜೀವಕ್ಕೂ ಅಪಾಯ ಉಂಟುಮಾಡುತ್ತಿದ್ದಾರೆ.
8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು ಮತ್ತು ಮೀನು.!
ಇದೇ ರೀತಿ, ಮೋಹಿತ್ ಹಾವಿನೊಂದಿಗೆ ಸ್ಟಂಟ್ ಮಾಡಲು ಹೋಗಿ ದುರ್ಭಾಗ್ಯವಶಾತ್ ಸಾವಿಗೀಡಾದ ಘಟನೆ ಇದೀಗ ಚರ್ಚೆಗೆ ಕಾರಣವಾಗಿದೆ.
ವಿಡಿಯೋ :
मुजफ्फरनगर के भोपा क्षेत्र में एक युवक को कोबरा सांप के साथ खेलना इतना भारी पड़ा कि कोबरा के काटने पर युवक की मौत हो गई। @NavbharatTimes pic.twitter.com/fCim5K03iu
— NBT Uttar Pradesh (@UPNBT) September 21, 2025
8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು ಮತ್ತು ಮೀನು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಮಧ್ಯಪ್ರದೇಶದ ಭೋಪಾಲದಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ಪ್ರೀತಿಸಿ ಬಳಿಕ ಕುಟುಂಬಸ್ಥರ ಅನುಮತಿಯೊಂದಿಗೆ ಮದುವೆಯಾಗಿದ್ದ ಯುವ ದಂಪತಿ (Couple), ಮದುವೆಯಾಗಿ ಕೇವಲ ಎಂಟು ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಗಂಡ–ಹೆಂಡತಿಯ ನಡುವಿನ ಕಲಹಕ್ಕೆ ಕಾರಣ ಅತ್ತೆ–ಮಾವ ಅಲ್ಲ, ಬದಲಿಗೆ ಇವರ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಮತ್ತು ಅಕ್ವೇರಿಯಂ ಮೀನು.
Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”
ಹೇಗೆ ಶುರುವಾಯಿತು ಕಲಹ?
ಮದುವೆಯಾದ ಬಳಿಕ ಆರಂಭದಲ್ಲಿ ಎಲ್ಲವೂ ಚನ್ನಾಗಿಯೆ ಸಾಗಿತ್ತು. ಗಂಡನು ಮದುವೆಗೂ ಮುಂಚೆ ನಾಯಿ, ಮೊಲ ಮತ್ತು ಅಕ್ವೇರಿಯಂ ಮೀನುಗಳನ್ನು ಸಾಕುತ್ತಿದ್ದ. ಇತ್ತ ಹೆಂಡತಿ ತನ್ನ ಉತ್ತರ ಪ್ರದೇಶದ ಮನೆಯಲ್ಲಿ ಬೆಕ್ಕನ್ನು ಸಾಕಿಕೊಂಡಿದ್ದಳು.
ಮದುವೆಯಾದ ಬಳಿಕ ಹೆಂಡತಿ ತನ್ನ ಬೆಕ್ಕನ್ನು ಗಂಡನ ಮನೆಗೆ ಕರೆದುಕೊಂಡು ಬಂದಳು. ಇಬ್ಬರೂ ಪ್ರಾಣಿಪ್ರೇಮಿಗಳಾಗಿದ್ದರಿಂದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಸಾಗಿತ್ತು. ಆದರೆ ದಿನಗಳು ಕಳೆಯುತ್ತಿದ್ದಂತೆ ಸಮಸ್ಯೆಗಳು ಶುರುವಾಯಿತು.
Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.
ಪತ್ನಿಯ ಹೇಳಿಕೆಯ ಪ್ರಕಾರ, ಗಂಡನ ನಾಯಿ ತನ್ನ ಸಾಕಿದ ಬೆಕ್ಕನ್ನು ನಿರಂತರವಾಗಿ ಹೆದರಿಸುತ್ತಿದೆ, ಬೊಗಳುತ್ತದೆ ಮತ್ತು ಕೆಲವೊಮ್ಮೆ ದಾಳಿ ಮಾಡಲು ಪ್ರಯತ್ನಿಸುತ್ತದೆ. ಇದರಿಂದ ಬೆಕ್ಕು ಆಹಾರ ತಿನ್ನಲು ಹೆದರಿಕೊಳ್ಳುತ್ತಿದೆ. ಇದು ನನಗೆ ಮಾನಸಿಕ ಹಿಂಸೆಯಾಗಿದೆ ಎಂದು ಪತ್ನಿ ಆರೋಪಿಸಿದ್ದಾಳೆ.
ಇತ್ತ ಗಂಡ (Husband) ನ ವಾದವೇನೆಂದರೆ, ಪತ್ನಿಯ ಬೆಕ್ಕು ಸದಾ ಅಕ್ವೇರಿಯಂ ಬಳಿ ಕಾದು ಕುಳಿತು ಮೀನು ಹಿಡಿಯಲು ಪ್ರಯತ್ನಿಸುತ್ತದೆ. ಜೊತೆಗೆ ನಾಯಿ ಮೇಲೆಯೂ ದಾಳಿ ಮಾಡಲು ಮುಂದಾಗುತ್ತದೆ. ಹೀಗಾಗಿ ಮನೆತನದಲ್ಲಿ ಪ್ರತಿದಿನ ಕಲಹ, ಅಶಾಂತಿ ನಡೆಯುತ್ತಿದೆ ಎಂದು ಆತ ತಿಳಿಸಿದ್ದಾನೆ.
Warts : ಹೀಗೆ ಮಾಡಿದ್ರೆ ದೇಹದ ಮೇಲಿರುವ ನರುಳ್ಳೆ ಸುಲಭವಾಗಿ ಉದುರಿಹೋಗುತ್ತವೆ.!
ದಂಪತಿ (Couple) ಗಳು ಡಿವೋರ್ಸ್‌ಗೆ ಮೊರೆ :
ಪ್ರಾಣಿಗಳ ಕಾರಣದಿಂದ ದಿನದಿಂದ ದಿನಕ್ಕೆ ಕಲಹ ತೀವ್ರಗೊಂಡ ಹಿನ್ನೆಲೆಯಲ್ಲಿ, ಇಬ್ಬರೂ ದಂಪತಿ (Couple) ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಮದುವೆಯಾಗಿ ಕೇವಲ ಎಂಟು ತಿಂಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿರುವುದರಿಂದ, ನ್ಯಾಯಾಧೀಶರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ದಂಪತಿ (Couple) ಗಳಿಗೆ ಕೌನ್ಸಿಲಿಂಗ್ ಸೂಚನೆ :
ನ್ಯಾಯಾಧೀಶರು ಪ್ರಕರಣವನ್ನು ಆಲಿಸಿ, “ಮದುವೆಗೆ ಕೇವಲ ಎಂಟು ತಿಂಗಳು ಕಳೆದಿದೆ, ಇಂತಹ ಸಮಸ್ಯೆಗಳಿಗೆ ವಿಚ್ಛೇದನವೇ ಪರಿಹಾರವಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ದಂಪತಿ (Couple) ಗೆ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಮುಂದಿನ ವಿಚಾರಣೆ ಅಕ್ಟೋಬರ್‌ನಲ್ಲಿ ನಡೆಯಲಿದೆ.
Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!
ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದ್ದು, ಸಾಕು ಪ್ರಾಣಿಗಳ ಕಾರಣದಿಂದಲೂ ಗಂಡ–ಹೆಂಡತಿ ನಡುವಿನ ಕಲಹ ವಿಚ್ಛೇದನದ ಹಂತಕ್ಕೇರಬಹುದು ಎಂಬುದನ್ನು ಸಾಬೀತುಪಡಿಸಿದೆ.