ಜನಸ್ಪಂದನ ನ್ಯೂಸ್, ಡೆಸ್ಕ್ : ನೀವು ಊಟದ ಬಳಿಕ ಅಥವಾ ಊಟದ ಮಧ್ಯದಲ್ಲಿ ನೀರು ಕುಡಿತೀರಾ? ಹಾಗಿದ್ರೆ ಈ ಸುದ್ದಿ ಓದಿ.
ಸಾಮಾನ್ಯವಾಗಿ ಊಟವಾದ ಬಳಿಕ ಅಥವಾ ಊಟ ಮಾಡುವಾಗ ನೀರು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಈ ರೀತಿಯ ಅಭ್ಯಾಸವು ಒಳ್ಳೆಯದಲ್ಲ, ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ (negative effect) ಬೀರುತ್ತದೆ ಎನ್ನಲಾಗಿದೆ.
ಇದನ್ನು ಓದಿ : Pak : ಯುವತಿ ಜೊತೆ ಪಾಕ್ ಹೈಕಮಿಷನರ್ ; ವಿಡಿಯೋ ವೈರಲ್.!
ಕೆಲವರು ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ತಿಂದರೂ ಕೂಡ ದೇಹದ ತೂಕದ ಮೇಲೆ ಮಾತ್ರ ನಿಯಂತ್ರಣ ಹೊಂದಿರುವುದಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ಅವರು ಯಾವುದೇ ಆಹಾರ ಪದಾರ್ಥ ತಿನ್ನುವಾಗ ಮಧ್ಯ ಮಧ್ಯ ನೀರು ಕುಡಿಯುವುದು (Drinking water between meals).
ಆದರೆ ಊಟವಾದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ, ಚರ್ಮ ಮತ್ತು ದೇಹದ ಇತರ ಭಾಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ.
ಇದನ್ನು ಓದಿ : ಲೋಕಾಯುಕ್ತ ಬಲೆಗೆ ಬಿದ್ದ FDA, ಅಕೌಂಟೆಂಟ್.
ಊಟವಾದ ತಕ್ಷಣ ನೀರು ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಯೋಣ.
ಊಟದ ಜೊತೆ ನೀರು ಕುಡಿಯುವುದರಿಂದ ದೇಹದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ತೊಂದರೆ (Difficulty absorbing nutrients) ಉಂಟಾಗುತ್ತದೆ.
ಊಟವಾದ ಕೂಡಲೇ ಅಥವಾ ಊಟ ಮಾಡುವಾಗ ನೀರು ಕುಡಿಯುವುದರಿಂದ ಮೊಡವೆ, ಕಲೆ ಸೇರಿದಂತೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.
ಇದನ್ನು ಓದಿ : Health : ಬೆಳಿಗ್ಗೆ ಲವಂಗ ನೆನೆಸಿದ ನೀರು ಕುಡಿಯುವುದರಿಂದ ಆಗುವ Health ಪ್ರಯೋಜನಗಳು.!
ಊಟದ ಜೊತೆ ನೀರು ಕುಡಿಯುವ ಅಭ್ಯಾಸವಿದ್ದರೆ ಕೂಡಲೇ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಏಕೆಂದರೆ ಊಟ ಮಾಡುವಾಗ ನೀರು ಕುಡಿಯುವುದರಿಂದ ದೇಹದಲ್ಲಿ ಕ್ಯಾಲೋರಿಗಳ ಹೀರಿಕೊಳ್ಳುವಿಕೆ ಪ್ರಮಾಣ ಹೆಚ್ಚಾಗುತ್ತದೆ. ಅಲ್ಲದೇ ಈ ಕಾರಣದಿಂದಾಗಿ ತೂಕವು ವೇಗವಾಗಿ ಹೆಚ್ಚಾಗುತ್ತದೆ.
ಊಟದ ಜೊತೆಗೆ ನೀರು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆಗೆ (For constipation problem) ಒಳಗಾಗಬಹುದು.
ಊಟ ಮಾಡುವ ವೇಳೆ ಅಥವಾ ಊಟದ ಬಳಿಕ ತಕ್ಷಣ ನೀರು ಕುಡಿಯುವ ವ್ಯಕ್ತಿಯಲ್ಲಿ ಕೀಲು ನೋವು, ದೇಹದ ದೌರ್ಬಲ್ಯ (Body weakness), ಆಯಾಸ ಇತ್ಯಾದಿ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.
ಇದನ್ನು ಓದಿ : Raid : ರಾಜ್ಯದಾದ್ಯಂತ ಬೆಳ್ಳಂಬೆಳಗ್ಗೆ 40 ಕಡೆಗಳಲ್ಲಿ ಲೋಕಾಯುಕ್ತ ದಾಳಿ.
ಊಟ ಮಾಡುವ ವೇಳೆ ಅಥವಾ ಊಟದ ಬಳಿಕ ತಕ್ಷಣ ನೀರು ಸೇವಿಸುವುದರಿಂದ ಜೀರ್ಣಾಂಗದಲ್ಲಿರುವ ಕಿಣ್ವಗಳು ದುರ್ಬಲಗೊಂಡು ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ನೋವು, ಗ್ಯಾಸ್ ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು.
ಊಟವಾದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ನಿಧಾನಗೊಳಿಸುತ್ತದೆ (Digestion is slow). ಇದು ದೀರ್ಘಾವಧಿಯಲ್ಲಿ ದೊಡ್ಡ ಹಾನಿಯನ್ನುಂಟು ಮಾಡುತ್ತದೆ.
ಇದನ್ನು ಓದಿ : ಡ್ರಗ್ಸ್ ಚಟಕ್ಕೆ ಬರೋಬ್ಬರಿ 1 ಕೋಟಿ ರೂ. ಆಸ್ತಿ ಮಾರಿದ ಲೇಡಿ ಡಾಕ್ಟರ್ ಅರೆಸ್ಟ್.!
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಮತ್ತು ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.
ಹಿಂದಿನ ಸುದ್ದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಚರ್ಮದ ಆರೈಕೆ ತಜ್ಞರು ಫೇಸ್ ಮ್ಯಾಪಿಂಗ್ (Face Mapping) ಮಾಡಿ ನಮ್ಮ ಆರೋಗ್ಯ ಹೇಗಿದೆ ಅಂತ ಹೇಳುತ್ತಾರೆ. ಮುಖದ ಮೇಲೆ ಎಲ್ಲಿ ಮೊಡವೆ ಮೂಡಿದೆ, ಎಲ್ಲಿ ಹುಣ್ಣಾಗಿದೆ, ಎಲ್ಲಿ ಚರ್ಮ ಇಳಿಬಿದ್ದಿದೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಹೃದಯ, ಕಿಡ್ನಿ, ಲಿವರ್ ಇತ್ಯಾದಿ ಹೇಗಿದೆ ಎಂದು ತಿಳಿಸುತ್ತಾರೆ.
ಮುಖದ ವೈಶಿಷ್ಟ್ಯಗಳು ಮತ್ತು ನಮ್ಮ ದೇಹದ ಅಂಗಗಳ ನಡುವೆ ಆಕರ್ಷಕ ಸಂಪರ್ಕವಿದೆ, ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಫೇಸ್ ಮ್ಯಾಪಿಂಗ್ ಎಂದೂ ಕರೆಯುತ್ತಾರೆ.
ಇದನ್ನು ಓದಿ : 500 ರೂ. ಉತ್ತರ ಪತ್ರಿಕೆಯಲ್ಲಿಟ್ಟು, ಪಾಸಾದ್ರಷ್ಟೇ ಹುಡುಗಿ ಲವ್ ಮಾಡುತ್ತಾಳೆ ಎಂದ SSLC ವಿದ್ಯಾರ್ಥಿ.!
ಫೇಸ್ ಮ್ಯಾಪಿಂಗ್ ಎನ್ನುವುದು ಚರ್ಮದ ಒಟ್ಟಾರೆ ಆರೋಗ್ಯವನ್ನು ನಿರ್ಧರಿಸಲು (To determine skin health) ವಿವಿಧ ಮುಖದ ಪ್ರದೇಶಗಳನ್ನು ಮ್ಯಾಪಿಂಗ್ ಮಾಡುವ ಒಂದು ರೀತಿಯ ಚರ್ಮದ ಪರೀಕ್ಷೆಯಾಗಿದೆ.
ಹಾರ್ಮೋನುಗಳ ಅಸಮತೋಲನ, ನಿರ್ಜಲೀಕರಣ, ಸೂಕ್ಷ್ಮತೆಗಳು ಮತ್ತು ನಿರ್ಬಂಧಿಸಲಾದ ರಂಧ್ರಗಳಂತಹ (Dehydration, sensitivities and blocked pores) ಆರೋಗ್ಯ ಸಮಸ್ಯೆಗಳಿಂದ ಪ್ರಭಾವಿತವಾಗಿರುವ ಮುಖದ ಭಾಗಗಳನ್ನು ಗ್ರಿಡ್ ವಿಧಾನವನ್ನು ಬಳಸಿಕೊಂಡು ಗುರುತಿಸಲಾಗುತ್ತದೆ.
ಇದನ್ನು ಓದಿ : ಲಂಚ ಪಡೆಯುತ್ತಿದ್ದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ Lokayukta ಬಲೆಗೆ.!
ವಿಶ್ಲೇಷಣೆಯನ್ನು ಬಳಸಿಕೊಂಡು, ಚರ್ಮದ ಆರೈಕೆ ತಜ್ಞರು ಸಾಮಾನ್ಯ ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಚಿಕಿತ್ಸೆಗಳು ಮತ್ತು ಉತ್ಪನ್ನಗಳನ್ನು ಸೂಚಿಸಬಹುದು.
* ಗಲ್ಲ ಮತ್ತು ದವಡೆ :
ಹಾರ್ಮೋನ್ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗಳಿಗೆ ಸಂಬಂಧಿಸಿದೆ. ಇಲ್ಲಿ ಉಂಟಾಗುವ ಕಲೆಗಳು ಹಾರ್ಮೋನ್ ಅಸಮತೋಲನವನ್ನು (Hormonal imbalance) ಸೂಚಿಸಬಹುದು. ಇನ್ನೂ ಗಂಡು ಮಕ್ಕಳಲ್ಲಿ ಗಲ್ಲದ ಮೇಲೆ ಮೊಡವೆ ಇದ್ದಲ್ಲಿ ಫರ್ಟಿಲಿಟಿ ಸಮಸ್ಯೆ ಇರಬಹುದು. ಅದೇ ಹೆಣ್ಣುಮಕ್ಕಳಲ್ಲಿ ಇದ್ದಲ್ಲಿ ಅವರು ಗೈನಕಾಲಜಿಸ್ಟ್ ಭೇಟಿ ಮಾಡಬೇಕು.
ಇದನ್ನು ಓದಿ : ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಮಗನ ಮೇಲೆ ಫೈರಿಂಗ್.!
* ಮೂಗು :
ನಮ್ಮ ರಕ್ತಪರಿಚಲನಾ ವ್ಯವಸ್ಥೆಯ ಪ್ರತಿಬಿಂಬವೇ ಆಗಿದೆ ಈ ಪ್ರದೇಶ. ಅಲ್ಲದೇ ಹೃದಯ ಮತ್ತು ಹೃದಯ ರಕ್ತನಾಳದ ಆರೋಗ್ಯಕ್ಕೆ ಸಂಬಂಧಿಸಿದೆ. ಇಲ್ಲಿ ಯಾವುದೇ ಕೆಂಪು ಅಥವಾ ಕಲೆಗಳು ಅಧಿಕ ರಕ್ತದೊತ್ತಡ, ಕಳಪೆ ರಕ್ತಪರಿಚಲನೆ (Poor circulation) ಅಥವಾ ಹೃದಯ ರಕ್ತನಾಳದ ಒತ್ತಡದಂತಹ ಆಧಾರವಾಗಿರುವ ಸಮಸ್ಯೆಗಳ ಸಂಕೇತವಾಗಿರಬಹುದು, ನಮ್ಮ ಹೃದಯದ ಆರೋಗ್ಯವನ್ನು ಹತ್ತಿರದಿಂದ ನೋಡಲು ಪ್ರೋತ್ಸಾಹಿಸುತ್ತದೆ.
* ಹಣೆ :
ಹಣೆಯ ಮೇಲಿನ ಬಿರುಕುಗಳು ಕಳಪೆ ಜೀರ್ಣಕ್ರಿಯೆ, ಉಬ್ಬುವುದು ಅಥವಾ ಒತ್ತಡವನ್ನು ಸೂಚಿಸಬಹುದು, ಜೀರ್ಣಕ್ರಿಯೆ ಮತ್ತು ಮೂತ್ರಕೋಶಕ್ಕೆ ಸಂಬಂಧಿಸಿದೆ. ಸ್ಪಷ್ಟವಾದ ಚರ್ಮ ಮತ್ತು ಉತ್ತಮ ಆರೋಗ್ಯಕ್ಕಾಗಿ ಆಂತರಿಕ ಅಸಮತೋಲನವನ್ನು ಪರಿಹರಿಸುವ ಅಗತ್ಯವನ್ನು ಸೂಚಿಸುತ್ತದೆ.
ಇದನ್ನು ಓದಿ : ಮದ್ಯದ ನಿಶೆ, ಕೈಯಲ್ಲಿ ರೈಫಲ್ : ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪನ ವಿಡಿಯೋ ವೈರಲ್.!
* ಕೆನ್ನೆಗಳು :
ಈ ಪ್ರದೇಶವು ಶ್ವಾಸಕೋಶದ ಆರೋಗ್ಯಕ್ಕೆ ಸಂಬಂಧಿಸಿದೆ, ಕಲೆಗಳು ಅಥವಾ ಅಸಮತೋಲನದ ಮೂಲಕ ಉಸಿರಾಟದ ಸಮಸ್ಯೆಗಳು ಅಥವಾ ಅಲರ್ಜಿಗಳನ್ನು ಸಂಕೇತಿಸುತ್ತದೆ, ಉಸಿರಾಟ ಮತ್ತು ಶ್ವಾಸಕೋಶದ ಕಾರ್ಯವನ್ನು ಪರಿಹರಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ.
* ಜೀರ್ಣ ವ್ಯವಸ್ಥೆ ಸರಿ ಇಲ್ಲದಿದ್ದಲ್ಲಿ ನಿಮ್ಮ ಕಣ್ಣುಗಳ ಕೆಳಭಾಗದ ಕಪೋಲ ಪ್ರದೇಶದಲ್ಲಿ ಮೊಡವೆಗಳು ಆಗುತ್ತವೆ. ಕಣ್ಣಿನ ಕೆಳಗೆ ತುಂಬಾ ನೀರು ಸೇರಿದ ರೀತಿ ಇದ್ದರೆ ಅಥವಾ ತೀರಾ ಕಪ್ಪು ಇದ್ದಲ್ಲಿ ನಿಮ್ಮ ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ (It means that the kidneys are not working properly). ಲೇಟ್ ನೈಟ್ ಮದ್ಯಪಾನ ಮಾಡುತ್ತಿರುವವರಲ್ಲಿ ಇದನ್ನು ಗಮನಿಸಬಹುದು.
ಇದನ್ನು ಓದಿ : ಯಾವ ಯಾವ ಕಾಯಿಲೆಗಳಿಗೆ `ಪ್ಯಾರೆಸಿಟಮಾಲ್’ ಮಾತ್ರೆ ಸೇವಿಸಬಹುದು.? ಇಲ್ಲಿದೆ ಮಾಹಿತಿ.!
* ಶ್ವಾಸಕೋಶ ಸರಿಯಾಗಿ ಕಾರ್ಯ ನಿರ್ವಹಿಸದೆ ಇದ್ದರೆ, ಬಾಯಿಯ ಎರಡೂ ಕಡೆಗಳಲ್ಲಿಯೂ ಮೊಡವೆ ಉಂಟಾಗುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.