ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲ ಪ್ರಾಣಿ (ನಾಯಿ) ಗಳಲ್ಲಿ ಅಪಾರ ಸ್ನೇಹ ವಿಶ್ವಾಸವಿರುತ್ತದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ (It is going viral on social media).
ಉತ್ತರಾಖಂಡ್ ನಲ್ಲಿ (Uttarakhand) ಈ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : Water : ಊಟದ ಮಧ್ಯೆ ಪದೇ ಪದೇ ನೀರು ಕುಡಿತೀರಾ? ಹಾಗಿದ್ರೆ ಈ ಸುದ್ದಿ ಓದಿ.!
ಚಿರತೆ ದಾಳಿ ಮಾಡಲು (leopard attacked) ಬಂದ ಸಮಯದಲ್ಲಿ ಮಲಗಿದ್ದ ತನ್ನ ಗೆಳೆಯನನ್ನು ಕಾಪಾಡಲು ನಾಯಿಗಳು ಗುಂಪಾಗಿ ಸೇರಿಕೊಂಡು ರಕ್ಷಿಸಿದ ಘಟನೆ ನಡೆದಿದ್ದು, ಈ ಬಗ್ಗೆ ವಿಡಿಯೋ ಹರಿದಾಡುತ್ತಿದೆ.
ಮನೆಯೊಂದರ ಮುಂದೆ ನಾಯಿ ಮಲಗಿದೆ. ಈ ವೇಳೆ ಏಕಾಏಕಿ ಚಿರತೆಯೊಂದು ನಾಯಿಯ ಸಮೀಪ ಬಂದು ದಾಳಿ ಮಾಡಲು ಯತ್ನಿಸಿದೆ. ಆದರೆ ಆ ನಾಯಿಯ ಅದೃಷ್ಟ ಚೆನ್ನಾಗಿತ್ತು.
ಇದನ್ನು ಓದಿ : Video : ಬೈಕ್ ಓಡಿಸುತ್ತಿದ್ದ ಯುವಕನಿಗೆ ಹೃದಯಾಘಾತ.!
ಚಿರತೆಯು ನಾಯಿ ಕುತ್ತಿಗೆಗೆ ಬಾಯಿ ಹಾಕುತ್ತಿದ್ದಂತೆ ಅದರ ಬೊಗಳಲು ಶುರು ಮಾಡಿದ್ದು, ಅದರ ಧ್ವನಿ ಕೇಳಿ ಅಕ್ಕಪಕ್ಕದಲ್ಲಿದ್ದ ಸ್ನೇಹಿತ ನಾಯಿಗಳು ಒಮ್ಮೆಲೇ ಚಿರತೆ ಮೇಲೆ ಮುಗಿಬಿದ್ದಿವೆ. ನಾಯಿಯ ಗುಂಪಲ್ಲಿ ಒಂದು ಚಿರತೆಯ ಕಾಲು ಕಚ್ಚಿ ಎಳೆದರೆ ಇನ್ನೊಂದು ಬೆನ್ನು ಕಚ್ಚಿ ಅಟ್ಯಾಕ್ ಮಾಡಿದೆ.
ನಾಯಿಗಳೆಲ್ಲಾ ಒಗ್ಗಟ್ಟಾಗಿ ದಾಳಿ (Attack together) ಮಾಡಿದಾಗ ಚಿರತೆಯ ಹಿಡಿತದಿಂದ ನಾಯಿ ತಪ್ಪಿಸಿಕೊಂಡಿತು. ಆಬಳಿಕ ಆ ಚಿರತೆಯನ್ನು ಎಲ್ಲ ನಾಯಿಗಳು ಸೇರಿಕೊಂಡು ಓಡಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿ : Raid : ರಾಜ್ಯದಾದ್ಯಂತ ಬೆಳ್ಳಂಬೆಳಗ್ಗೆ 40 ಕಡೆಗಳಲ್ಲಿ ಲೋಕಾಯುಕ್ತ ದಾಳಿ.
ಈ ವಿಡಿಯೋವನ್ನು @gharke kalesh ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಆಹಾರವನ್ನು ಹುಡುಕುತ್ತ ಬಂದ ಚಿರತೆ ರಸ್ತೆಯಲ್ಲಿ ಮಲಗಿದ್ದ ಸಾಕು ನಾಯಿಯ ಮೇಲೆ ಅಟ್ಯಾಕ್ ಮಾಡಿದೆ. ಚಿರತೆಯೂ ನಾಯಿಯ ಕುತ್ತಿಗೆಗೆ ಬಾಯಿ ಹಾಕುತ್ತಿದ್ದಂತೆ ಅಲ್ಲೇ ಇದ್ದ ಮೂರ್ನಾಲ್ಕು ನಾಯಿಗಳು ಚಿರತೆಯ ಮೇಲೆ ಎರಗಿ, ಚಿರತೆಯನ್ನು ಅಲ್ಲಿಂದ ಓಡಿಸಿವೆ.
ಇದನ್ನು ಓದಿ : ಬೃಹತ್ ಉದ್ಯೋಗವಕಾಶ : ರೈಲ್ವೇ ಇಲಾಖೆಯಲ್ಲಿ 9970 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.
ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋವೊಂದು ಒಂದೂವರೆ ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಈ ಶ್ವಾನಗಳ ಒಗ್ಗಟ್ಟಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನನ್ನ ಜೀವನದಲ್ಲಿ ಇಂತಹ ಶ್ವಾನಗಳಂತಹ ಸ್ನೇಹಿತರು ಇದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಒಗ್ಗಟ್ಟಿನಲ್ಲಿ ಬಲವಿದೆ ಎಂದು ಕಮೆಂಟ್ ಮಾಡಿದ್ದಾರೆ ಮತ್ತೊಬ್ಬರು. ಈ ಮನುಷ್ಯರಿಗಿಂತ ನಾಯಿಗಳೇ ಎಷ್ಟೋ ವಾಸಿ (Dogs are better than humans). ಶ್ವಾನಗಳಿಗಿರುವ ಸಹಾಯ ಮಾಡುವ ಮನೋಭಾವ ಈ ಮನುಷ್ಯರಿಗಿಲ್ಲ ಎಂದು ಒಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ ನೋಡಿ :
Kalesh b/w Dogs and Leopard (In Haridwar, a leopard attacked a dog sleeping on the road. It grabbed its neck. Meanwhile, several other dogs came. They attacked the leopard and chased him away)
pic.twitter.com/AfbYGZJgED— Ghar Ke Kalesh (@gharkekalesh) May 14, 2025