Sunday, September 8, 2024
spot_img
spot_img
spot_img
spot_img
spot_img
spot_img
spot_img

ಮದುವೆ ಮಂಟಪದಲ್ಲೇ WWE ; ಯುವಕನಿಗೋಸ್ಕರ ಇಬ್ಬರು ಯುವತಿಯರ ನಡುವೆ ಮಾರಾಮಾರಿ ; ವಿಡಿಯೋ ವೈರಲ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮದುವೆ (marriage) ಮಂಟಪದಲ್ಲೇ ವರನಿಗಾಗಿ ಇಬ್ಬರು ಯುವತಿಯರ ನಡುವೆ ಮಾರಾಮಾರಿಯಾದ ಘಟನೆ ನಡೆದಿದೆ.

ಈ ಫೈಟ್‌ ನೋಡಲು ಯಾವ WWFಗೂ ಕಡಿಮೆಯಿಲ್ಲ ಅನ್ನಬಹುದು. ಆ ರೇಂಜಿಗಿದೆ. ಘಟನೆಯ ಕುರಿತಾದ ವಿಡಿಯೋವೊಂದು ವೈರಲ್ ಆಗ್ತಿದೆ.

ಇದನ್ನು ಓದಿ : ವೇದಿಕೆ ಮೇಲೆಯೇ ನೆಚ್ಚಿನ ಗಾಯಕನ ಕೆನ್ನೆಗೊಂದು Kiss ಮಾಡಿ ಸಸ್ಪೆಂಡ್ ಆದ ಮಹಿಳಾ ಕಾನ್ಸ್‌ಟೇಬಲ್‌.!

ವಿಡಿಯೋದಲ್ಲಿ ಓರ್ವ ಯುವಕನಿಗೋಸ್ಕರ ಇಬ್ಬರು ಯುವತಿಯರು ವೇದಿಕೆಯಲ್ಲೇ ಡಿಶುಂಡಿಶುಂ ನಡೆಸಿದ್ದಾರೆ. ಇಲ್ಲಿ ವಧು ಮತ್ತು ವರನ (Bride and groom) ಪ್ರೇಯಸಿ ನಡುವೆ ಹೊಡೆದಾಟವೇ ಶುರುವಾಗಿದೆ.

ಅಲ್ಲದೇ ಒಬ್ಬರನೊಬ್ಬರು ಬೈದಾಡಿಕೊಂಡು ಇಬ್ಬರು ಜುಟ್ಟು ಹಿಡಿದು ಹೊಡೆದಾಟ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ವಧುವಿಗೆ ಯುವಕ ಇನ್ನೇನು ತಾಳಿ ಕಟ್ಟಬೇಕೆನ್ನುವ ಹೊತ್ತಲ್ಲಿ ಮದುವೆ ಮಂಟಪಕ್ಕೆ ಬಂದಿದ್ದ ಆತನ ಪ್ರೇಯಸಿ (lover) ತಕರಾರು ತೆಗೆದಿದ್ದಾಳೆ. ಆಗ ವೇದಿಕೆಯಲ್ಲಿದ್ದ ವಧು ಕೂಡ ಆಕೆಯ ಜೊತೆ ಜಗಳಕ್ಕಿಳಿದಿದ್ದಾಳೆ.

ಇನ್ನು ಇಬ್ಬರು ಯುವತಿಯರೂ ಎಲ್ಲರೆದುರೆ ಪರಸ್ಪರ ಬಡಿದಾಡಿಕೊಂಡಿದ್ದಾರೆ (Struggled). ನಡುವಲ್ಲಿದ್ದ ವರ ಇಬ್ಬರನ್ನೂ ತಡೆಯಲು ಪ್ರಯತ್ನಿಸಿದ್ದನಾದರೂ ಯುವತಿಯರಿಬ್ಬರು ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ.

ಇದನ್ನು ಓದಿ : Belagavi : ಸಹೋದರಿಯೊಂದಿಗೆ ಲವ್ವಿಡವ್ವಿಯಲ್ಲಿ ತೊಡಗಿದ್ದವನ ಬರ್ಬರ ಹತ್ಯೆ.!

ಅನಿತಾ ಸುರೇಶ್‌ ಶರ್ಮಾ ಎಂಬ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದು, ಐದು ದಿನಗಳ ಹಿಂದೆ ಈ ವಿಡಿಯೋ ಪೋಸ್ಟ್‌ ಮಾಡಲಾಗಿದ್ದು, 1ಲಕ್ಷಕ್ಕೂ ಅಧಿಕ ಲೈಕ್ಸ್‌ (likes) ಬಂದಿದೆ.

ಹಲವಾರು ಕಮೆಂಟ್ ಗಳು ಬಂದಿದ್ದು, ಓರ್ವ ಇವನಿಗೂ ಗರ್ಲ್‌ಫ್ರೆಂಡ್‌ ಇದ್ದಾಳೆ ಎಂದು ಕಮೆಂಟ್ ಮಾಡಿದರೆ, ಪಕ್ಕದಲ್ಲಿ ಇನ್ನೊಬ್ಬ ವರ ಇದ್ದಾನೆ ಸರಿಯಾಗಿ ನೋಡಿ ಎಂದು ಮತ್ತೊಬ್ಬರು ಕಮೆಂಟ್‌ (comments) ಮಾಡಿದ್ದಾರೆ. ಹುಡುಗ ಸರ್ಕಾರಿ ನೌಕರನಾಗಿರಬೇಕು ಅದಕ್ಕಾಗಿ ಈ ಫೈಟ್‌ ಎಂದು ಒಬ್ಬರು ಕಮೆಂಟ್‌ ಮಾಡಿದ್ದರೆ, ದೇವರೇ ನನ್ನನ್ನು ಮೇಲೆ ಕರೆಸಿಕೋ ಎಂದು ಮತ್ತೊಬ್ಬ ಕಮೆಂಟ್‌ ಮಾಡಿದ್ದಾನೆ.

 

View this post on Instagram

 

A post shared by Anita sharma (@anita_suresh_sharma)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img