Sunday, September 8, 2024
spot_img
spot_img
spot_img
spot_img
spot_img
spot_img
spot_img

ಹೊಟ್ಟೆಪಾಡಿಗಾಗಿ ಸೈನಿಕರ ಮುಂದೆ ಬೆತ್ತಲಾಗಲು ಸರದಿಯಲ್ಲಿ ನಿಲ್ಲುತ್ತಿದ್ದಾರೆ ಮಹಿಳೆಯರು.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್ : ತಮ್ಮ ಕುಟುಂಬಕ್ಕೆ ಆಹಾರ ಸಂಪಾದಿಸಲು ಸೈನಿಕರ ಜತೆ ಮಲಗಬೇಕಾದ ಅನಿಯವಾರ್ಯತೆಗೆ ಯುದ್ಧಪೀಡಿತ ಸುಡಾನ್ ದೇಶದಲ್ಲಿ ಮಹಿಳೆಯರು ಸಿಲುಕುತ್ತಿದ್ದಾರೆ ಎಂದು ಪತ್ರಿಕೆಯೊಂದರ ಆಘಾತಕಾರಿ ವರದಿ ಎಲ್ಲೆಡೆ ವೈರಲ್‌ ಆಗಿದೆ.

ತಮ್ಮ ಕುಟುಂಬಸ್ಥರ ಹೊಟ್ಟೆಗೆ ಆಹಾರವನ್ನು ಪಡೆಯಲು ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಆಘಾತಕರ ಸುದ್ದಿ ಬೆಳಕಿಗೆ ಬಂದಿದೆ. ಹಣ ಬೇಕೆಂದರೆ ಸೈನಿಕರ ಜತೆ ಲೈಂಗಿಕ ಸಂಪರ್ಕಕ್ಕೆ ಒಳಗಾಗುವುದು ಅನಿವಾರ್ಯವಾಗುತ್ತಿದೆ. ಈ ಕಾರಣದಿಂದಲೇ ಎರಡು ಡಜನ್‌ಗೂ ಹೆಚ್ಚು ಮಹಿಳೆಯರು ಓಮಡುರ್ಮನ್ ನಗರದಿಂದ ಪಲಾಯನ ಮಾಡಿದ್ದಾರೆ ಎಂದು ವರದಿ ಹೇಳಿದೆ. ‌

ಇದನ್ನು ಓದಿ : 10/12 ನೇ ತರಗತಿ ಪಾಸಾದವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗವಕಾಶ.!

ಈ ಬಗ್ಗೆ ಮಾತನಾಡಿದ 37 ವರ್ಷದ ಮಹಿಳೆ, “ತನ್ನ ಹೆತ್ತವರು ತುಂಬಾ ವಯಸ್ಸಾದವರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ತನಗೆ ಹೊರಗೆ ಹೋಗಿ ದುಡಿಯಲು ಆಗುತ್ತಿಲ್ಲ. ಹಾಗಾಗಿ ತಾನು ಸೈನಿಕರ ಬಳಿಗೆ ಹೋದಾಗ ಅವರ ಬಳಿ ಆಹಾರವನ್ನು ಪಡೆಯಲು ಅವರ ಜೊತೆ ಲೈಂಗಿಕ ಕ್ರಿಯೆ ನಡೆಸುವುದೊಂದೇ ಮಾರ್ಗವಾಗಿತ್ತು. ಅವರು ಕಾರ್ಖಾನೆಗಳ ಪ್ರದೇಶದಲ್ಲಿ ಎಲ್ಲೆಡೆ ಇದ್ದರು. ಹಾಗಾಗಿ ಕಳೆದ ವರ್ಷ ಮೇ ತಿಂಗಳಲ್ಲಿ ಮಾಂಸ ನೀಡುವ ಕಾರ್ಖಾನೆಯಲ್ಲಿ ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದರು” ಎಂಬುದಾಗಿ ತಿಳಿಸಿದ್ದಾಳೆ.

ದೇಶದಲ್ಲಿ ಅಂತರ್ಯುದ್ಧ ಪ್ರಾರಂಭವಾದ ಕೂಡಲೇ ಈ ದೌರ್ಜನ್ಯ ಪ್ರಾರಂಭವಾದವು ಎಂದು ವರದಿಯಾಗಿದೆ. ಕಳೆದ ವರ್ಷ ಏಪ್ರಿಲ್ 15ರಂದು ಸಂಘರ್ಷ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಸಶಸ್ತ್ರ ಪುರುಷರಿಂದ ಅತ್ಯಾಚಾರದ ವರದಿಗಳು ಹೊರಬಂದವು.

ಇದನ್ನು ಓದಿ : ಹಳ್ಳಿ ಹುಡುಗಿಯನ್ನು ನಂಬಿಸಿ ಅಶ್ಲೀಲ Video ಚಿತ್ರೀಕರಿಸಿದ ಪೊಲೀಸ್ ; ಮುಂದೆ.?

ಇದೀಗ ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಆರ್‌ಎಸ್‌ಎಫ್ ಹೋರಾಟಗಾರರು ವ್ಯವಸ್ಥಿತ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಭಯಾನಕ ಕಥೆಗಳನ್ನು ಹಂಚಿಕೊಳ್ಳಲು ಹಲವಾರು ಮಹಿಳೆಯರು ಮುಂದೆ ಬಂದಿದ್ದಾರೆ.

ಸೈನಿಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ನಂತರ ಅವರಿಗೆ ಆಹಾರ, ಅಡುಗೆ ಉಪಕರಣಗಳು ಮತ್ತು ಸುಗಂಧ ದ್ರವ್ಯಗಳನ್ನು ನೀಡಲಾಗಿದೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಅಲ್ಲದೇ ಸೈನಿಕರು ಮಹಿಳೆಯರನ್ನು ಪಾಳುಬಿದ್ದ ಮನೆಗಳಿಗೆ ಕರೆತಂದು ಅಲ್ಲಿ ಅವರನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ತಿಳಿಸುತ್ತಾರೆ. ಬಳಿಕ ತಮಗೆ ಇಷ್ಟ ಆದವರನ್ನು ಆಯ್ಕೆ ಮಾಡುತ್ತಾರೆ. ಲೈಂಗಿಕ ಕ್ರಿಯೆ ನಡೆಸಿ ಕಳುಹಿಸುತ್ತಾರೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ : Health : ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿನ್ನಲೇಬಾರದು..?

ಇನ್ನೊಬ್ಬ ಮಹಿಳೆ ತಾನು ಸೈನಿಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ನಂತರ ಅವರು ತನಗೆ ಚಿತ್ರಹಿಂಸೆ ನೀಡಿದರು ಮತ್ತು ತನ್ನ ಕಾಲುಗಳನ್ನು ಸುಟ್ಟು ಹಾಕಿದರು ಎಂದು ಹೇಳಿದ್ದಾಳೆ. (ಎಜೇನ್ಸಿಸ್)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img