ಜನಸ್ಪಂದನ ನ್ಯೂಸ್, ಡೆಸ್ಕ್ : 70 ಜನರಿದ್ದ ವಿಮಾನವು ಬ್ರೆಜಿಲ್‌ನ ಸಾವೋ ಪೌಲೋದಲ್ಲಿ ಪತನಗೊಂಡಿದ್ದು, ಭೂಮಿಗೆ ಅಪ್ಪಳಿಸುತ್ತಲೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು 62 ಪ್ರಯಾಣಿಕರು ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ.
ಬ್ರೆಜಿಲ್‌ನಲ್ಲಿ ಈ ಭೀಕರ ವಿಮಾನ ದುರಂತ ಸಂಭವಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಕೋಟ್ಯಾಂತರ ರೂಪಾಯಿ ವಂಚಿಸಿದ್ದ Aunty ಅರೆಸ್ಟ್ ; ಅಂತದ್ದೇನು ಮಾಡಿದ್ಳು ಗೊತ್ತಾ.?
ಇನ್ನೂ ಬ್ರೆಜಿಲ್‌ನಲ್ಲಿಯೇ ಇದು ಇತ್ತೀಚೆಗೆ ಸಂಭವಿಸಿದ ಭೀಕರ ವಿಮಾನ ದುರಂತ ಎಂದು ತಿಳಿದುಬಂದಿದೆ.
ಕಾಸ್ಕಾವೆಲ್‌ನಿಂದ ಗುವಾರುಲ್ಹೋಸ್ ಏರ್‌ಪೋರ್ಟ್‌ಗೆ ತೆರಳುತ್ತಿದ್ದ ವೇಳೆ ಸಾವೋ ಪೌಲೋ ರಾಜ್ಯದ ವಿನ್ಹೇಡೋ ಎಂಬ ಪ್ರದೇಶದಲ್ಲಿ ವಿಮಾನವು ಪತನಗೊಂಡಿದೆ. ಅದೃಷ್ಟವಶಾತ್, ವಿಮಾನವು ಜನವಸತಿ ಪ್ರದೇಶದಲ್ಲಿ ಪತನಗೊಂಡಿಲ್ಲ.
ಇದನ್ನು ಓದಿ : Health : ಸೋಡಾ ಕುಡಿಯುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಗೊತ್ತಾ.?
ಆದರೂ, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಪತನಗೊಂಡ ಬಳಿಕ ಹೊತ್ತಿಕೊಂಡ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ.
ವಿಮಾನ ಹಾರಾಟ ನಡೆಸುತ್ತಿರುವಾಗಲೇ ನಿಯಂತ್ರಣ ತಪ್ಪಿದೆ. ಅದು ಬೀಳುವ ಮುನ್ನ ಬೆಂಕಿ ಕಾಣಿಸಿಕೊಂಡಿರಲಿಲ್ಲ. ಭೂಮಿಗೆ ಅಪ್ಪಳಿಸಿದ ರಭಸಕ್ಕೆ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ವಿಮಾನದಲ್ಲಿ 62 ಪ್ರಯಾಣಿಕರು ಹಾಗೂ 8 ವಿಮಾನದ ಸಿಬ್ಬಂದಿ ಇದ್ದರು. ಎಂದು ವರದಿಯಾಗಿದೆ.
ಇದನ್ನು ಓದಿ : PUC ಪಾಸಾದವರಿಗೆ ಗುಡ್ ನ್ಯೂಸ್ : ರೈಲ್ವೆ ಇಲಾಖೆಯಲ್ಲಿ 10,884 ಹುದ್ದೆಗಳ ನೇಮಕಾತಿ.!
ಸ್ಥಳಕ್ಕೆ ಭದ್ರತಾ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಆಗಮಿಸುವ ವೇಳೆಗೆ ಎಲ್ಲ ಪ್ರಯಾಣಿಕರು ಮೃತಪಟ್ಟಿದ್ದರು ಎನ್ನಲಾಗಿದೆ. ವಿಮಾನ ಪತನವಾಗುವ ಭೀಕರ ವಿಡಿಯೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ವಿಮಾನದ ಅವಶೇಷಗಳಿಂದ ಶವಗಳನ್ನು ಹೊರತೆಗೆಯಲಾಗುತ್ತಿದೆ. ಮೃತಪಟ್ಟವರ ಗುರುತು ಪತ್ತೆ ಹಚ್ಚಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿಯು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಶವಗಳನ್ನು ಸಾಗಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
BREAKING: Voepass Flight 2283, a large passenger plane, crashes in Vinhedo, Brazil pic.twitter.com/wmpJLVYbB3
— BNO News (@BNONews) August 9, 2024