Thursday, September 19, 2024
spot_img
spot_img
spot_img
spot_img
spot_img
spot_img
spot_img

Video : ಯೂನಿಫಾರ್ಮ್ ಬಿಚ್ಚಿಸ್ತೀನಿ ಎಂದು BJP ಮುಖಂಡನಿಂದ ಬೆದರಿಕೆ; ಸಮವಸ್ತ್ರವನ್ನೇ ಹರಿದು ಹಾಕಿದ ASI.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬಿಜೆಪಿ ನಾಯಕರೊಬ್ಬರು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ಮುಂದೆಯೇ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸಮವಸ್ತ್ರ ಕಳಚಿದ ಹಳೆಯ ವಿಡಿಯೋ ಇದೀಗ ವೈರಲ್‌ ಆಗಿದೆ.

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.

ಇದನ್ನು ಓದಿ : ಈ ಹಳ್ಳಿಯ ಪ್ರತಿಯೊಬ್ಬರ ಬಳಿ ಇದೆ ಜೆಟ್; ತರಕಾರಿ ತರಲು ಸಹ Jet ನಲ್ಲೇ ಪ್ರಯಾಣಿಸ್ತಾರೆ.!

ಸಹಾಯಕ ಸಬ್ ಇನ್ಸ್‌ಪೆಕ್ಟರ್‌ ವಿನೋದ್ ಮಿಶ್ರಾ ತಮ್ಮ ಸಮವಸ್ತ್ರವನ್ನು ಹಿರಿಯ ಅಧಿಕಾರಿಗಳು ಮತ್ತು ಪಾಲಿಕೆ ಅಧಿಕಾರಿಗಳ ಸಮಕ್ಷಮದಲ್ಲಿ ಕಳಚಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕೊಟ್ವಾಲಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಚರಂಡಿ ನಿರ್ಮಿಸುವ ವಿಚಾರದಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ ವಿನೋದ್ ಮಿಶ್ರಾ ಮತ್ತು ಸ್ಥಳೀಯ ನಿವಾಸಿಗಳ ನಡುವೆ ವಿವಾದ ಭುಗಿಲೆದ್ದಿತ್ತು. ವಾಗ್ವಾದದ ನಂತರ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಮತ್ತು ಪೊಲೀಸರು ಸಮಸ್ಯೆಯನ್ನು ಪರಿಹರಿಸಲು ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿದರು.

ಇದನ್ನು ಓದಿ : Special news : ಭಾರತದ ಈ ಗ್ರಾಮದಲ್ಲಿ ಯುವತಿ ವಾರಕ್ಕೊಬ್ಬನ ಜೊತೆ ಲಿವ್ ಇನ್ ರಿಲೇಷನ್‌ಶಿಪ್’ನಲ್ಲಿರಬಹುದಂತೆ.!

ಈ ವೇಳೆ ವಾಗ್ವಾದ ನಡೆದು ಸ್ಥಳೀಯ ಕೌನ್ಸಿಲರ್ ಪತಿ, ಬಿಜೆಪಿ ಮುಖಂಡ ಅರ್ಜುನ್ ಗುಪ್ತಾ ಅವರು ವಿನೋದ್ ಮಿಶ್ರಾ ಅವರ ಸಮವಸ್ತ್ರ ಕಳಚಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮಿಶ್ರಾ ಅವರು ಟೌನ್ ಇನ್ಸ್‌ಪೆಕ್ಟರ್‌ ಮತ್ತು ಇತರ ಅಧಿಕಾರಿಗಳು ಸೇರಿದಂತೆ ಎಲ್ಲರ ಮುಂದೆ ತಮ್ಮ ಸಮವಸ್ತ್ರದ ಅಂಗಿಯನ್ನು ಬಿಚ್ಚಿದರು.

ಈ ವೇಳೆ ಸಭೆಯಲ್ಲಿ ಹಾಜರಿದ್ದವರು ಮಿಶ್ರಾ ಅವರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದನ್ನು ಕಂಡುಬಂದಿದೆ. ಘಟನೆಯ ನಂತರ ವಿನೋದ್‌ ಮಿಶ್ರಾ ಅವರ ನಡವಳಿಕೆಗಾಗಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಇದನ್ನು ಓದಿ : ಅಶ್ಲೀಲ ಕಮೆಂಟ್ ಮಾಡಿದಾತನ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಯುವತಿ; ವಿಡಿಯೋ Viral.!

ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಿಸ್ಟೆಂಟ್‌ ಸಬ್ ಇನ್ಸ್‌ಪೆಕ್ಟರ್ ವಿನೋದ್ ಮಿಶ್ರಾ ಎನ್ನುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಬಿಜೆಪಿಯ ಪಾಲಿಕೆ ಸದಸ್ಯೆಯ ಪತಿಯೊಂದಿಗೆ ವಾಗ್ವಾದ ನಡೆಸಿದ ನಂತರ ಪೊಲೀಸ್‌ ಅಧಿಕಾರಿಯೇ ಸಮವಸ್ತ್ರ ಕಳಚಿದ್ದರು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿವರಣೆ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ. ಕ್ರಮವೂ ಆಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img