ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರೀತಿ ಎಂಬುದು ಇದು ಮೃದುತ್ವ, ಅನ್ಯೋನ್ಯತೆ, ರಕ್ಷಣೆ, ಆಕರ್ಷಣೆ, ವಾತ್ಸಲ್ಯ ಮತ್ತು ನಂಬಿಕೆಯನ್ನು ಒಳಗೊಂಡಿರುತ್ತದೆ. ಈ ಪ್ರೀತಿಯು ನಿಕಟತೆ, ಉತ್ಸಾಹ ಮತ್ತು ಬದ್ಧತೆಯಿಂದ ಗುರುತಿಸಲ್ಪಟ್ಟ ಭಾವನೆಗಳು ಮತ್ತು ನಡವಳಿಕೆಗಳ ಮಿಶ್ರಣವಾಗಿದೆ.
ಆದರೆ ಕೆಲವು ರಾಶಿಯವರು ಪ್ರೀತಿಯಲ್ಲಿ ತುಂಬಾ ನೋವನ್ನು ಅನುಭವಿಸುತ್ತಾರಂತೆ.
ಇನ್ನೂ ಗುಣಲಕ್ಷಣಗಳು ನಿರ್ದಿಷ್ಟ ರಾಶಿಗಳೊಂದಿಗೆ ಸಂಬಂಧ ಹೊಂದಿದ್ದರೂ, ಪ್ರತಿ ರಾಶಿಯವರು ವೈಯಕ್ತಿಕ ವ್ಯಕ್ತಿತ್ವಗಳು ಬದಲಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಸೂಕ್ತ.
ಇದನ್ನು ಓದಿ : ಕಾರಿನ ಇಂಜಿನ್ ಲೈಫ್ ದ್ವಿಗುಣವಾಗಬೇಕೆ.? ಸ್ಟಾರ್ಟ್ ಮಾಡುವಾಗ 40 ಸೆಕೆಂಡ್ ಹೀಗೆ ಮಾಡಿ.!
ಮಕರ ರಾಶಿ :
ಮಕರ ರಾಶಿಯವರಿಗೆ ತಮ್ಮ ಗುರಿ ಹಾಗೂ ರಿಲೇಷನ್ಶಿಪ್ ನಡುವೆ ಸಮಾನಾಂತರ ಸಮತೋಲನವನ್ನು ಹೊಂದಿರುವುದು ಕಷ್ಟವಾಗಿಸುತ್ತದೆ. ಇನ್ನು ಮಕರ ರಾಶಿಯವರು ಕೂಡ ಕೆಲವೊಮ್ಮೆ ಪ್ರೀತಿಗಿಂತ ಹೆಚ್ಚಾಗಿ ತಮ್ಮ ಕೆಲಸವನ್ನೇ ಪ್ರಮುಖ ಆದ್ಯತೆಯ ರೂಪದಲ್ಲಿ ಕಾಣುತ್ತಾರೆ.
ಈ ರೀತಿ ಕೆಲಸಕ್ಕೆ ಪ್ರಮುಖ ಆದ್ಯತೆಯನ್ನು ನೀಡುವಂತಹ ಮಕರ ರಾಶಿಯವರ ಈ ಮನೋಭಾವನೆ ಅವರ ಪ್ರೀತಿಯ ಮೇಲಿನ ಸಮಯದ ಮೇಲೆ ಗ್ರಹಣ ಮೂಡುವಂತೆ ಮಾಡುತ್ತದೆ.
ಕರ್ಕ ರಾಶಿ :
ಕರ್ಕ ರಾಶಿಯವರು ನಂಬಿಕೆ ಸಂಬಂಧಪಟ್ಟಂತಹ ವಿಚಾರಗಳಲ್ಲಿ ಮೋಸ ಹೋಗುವಂತಹ ಸಾಧ್ಯತೆ ಇರುತ್ತದೆ. ಇದೇ ಅವರಲ್ಲಿ ಈ ಪರಿಣಾಮ ಬೀರುವಂತೆ ಕಾರಣವಾಗುತ್ತದೆ.
ಇನ್ನು ಇದಕ್ಕೆ ಕಾರಣ ಆಗೋದು ಅವರಲ್ಲಿರುವಂತಹ ಬಲವಾದ ಭಾವನೆಗಳು ಹಾಗೂ ನಿರ್ಲಕ್ಷ್ಯಕ್ಕೆ ಒಳಗಾಗುವಂತಹ ಭೀತಿ ಅನ್ನೋದನ್ನ ಕೂಡ ನಾವಿಲ್ಲಿ ಪರಿಗಣಿಸಬೇಕಾಗುತ್ತದೆ. ಈ ಭಾವನಾತ್ಮಕ ಕುಸಿತವೇ ಅವರಲ್ಲಿ ಪ್ರೀತಿಯನ್ನು ಪೋಷಿಸುವಂತಹ ಅಂಶಗಳನ್ನು ಕಡಿಮೆ ಮಾಡುವ ಹಾಗೆ ಮಾಡುತ್ತದೆ.
ಕುಂಭ ರಾಶಿ :
ತಮ್ಮದೇ ಆಗಿರುವಂತಹ ವೈಯಕ್ತಿಕ ಸಮಯವನ್ನು ಕಳೆಯಲು ಇಷ್ಟಪಡುವುದರಿಂದಾಗಿ ತಮ್ಮ ಸಂಗಾತಿಯ ಜೊತೆಗೆ ರೋಮ್ಯಾಂಟಿಕ್ ಕ್ಷಣಗಳನ್ನು ಕಳೆಯುವುದಕ್ಕೆ ಕುಂಭ ರಾಶಿಯವರು ಅಷ್ಟೊಂದು ಇಷ್ಟಪಡುವುದಿಲ್ಲ.
ಇದನ್ನು ಓದಿ : Special news : ಭಾರತದ ಈ ಗ್ರಾಮದಲ್ಲಿ ಯುವತಿ ವಾರಕ್ಕೊಬ್ಬನ ಜೊತೆ ಲಿವ್ ಇನ್ ರಿಲೇಷನ್‌ಶಿಪ್’ನಲ್ಲಿರಬಹುದಂತೆ.!
ರೋಮ್ಯಾಂಟಿಕ್ ರಿಲೇಷನ್ ಶಿಪ್ ನಲ್ಲಿ ಇರುವಾಗ ಕುಂಭ ರಾಶಿಯವರು ತಮ್ಮ ಪ್ರತ್ಯೇಕತೆಯನ್ನು ಕಳೆದುಕೊಂಡ ಹಾಗೆ ಭಾವಿಸುತ್ತಾರೆ. ಇದು ಅವರು ತಮ್ಮ ಸಂಗಾತಿಯ ಜೊತೆಗೆ ಉತ್ತಮ ಬಾಂಧವ್ಯದಲ್ಲಿ ಇರಲು ಅಡ್ಡಿಯಾಗುತ್ತದೆ.
ಮೇಷ ರಾಶಿ :
ಮೇಷ ರಾಶಿಯ ಜನರಿಗೆ ತಮ್ಮ ಸ್ವಾತಂತ್ರ್ಯದ ಅಗತ್ಯತೆಗಳನ್ನು ಪೂರೈಸುವುದು ಹಾಗೂ ತಮ್ಮ ಸಂಗಾತಿಯ ಅವಶ್ಯಕತೆಗೆ ತಕ್ಕಂತೆ ನಡೆದುಕೊಳ್ಳುವುದು ಎರಡನ್ನು ಕೂಡ ಬ್ಯಾಲೆನ್ಸ್ ಮಾಡುವ ವಿಚಾರದಲ್ಲಿ ಬ್ಯಾಲೆನ್ಸ್ ತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ತಮ್ಮ ರಿಲೇಷನ್ಶಿಪ್ ನಲ್ಲಿ ಅವರು ಉತ್ತಮವಾದ ಬಾಂಧವ್ಯವನ್ನ ಹೊಂದಿರುವುದಕ್ಕೆ ಸಾಧ್ಯವಾಗುವುದಿಲ್ಲ. ಇದಕ್ಕೆ ಮೇಷ ರಾಶಿಯವರ ಸಿಟ್ಟು ಹಾಗೂ ಕೂಡಲೇ ಬದಲಾಗುವಂತಹ ಅವರ ಮನೋಭಾವನೆ ಕೂಡ ಕಾರಣವಾಗಿರುತ್ತದೆ.