ಜನಸ್ಪಂದನ ನ್ಯೂಸ್, ಬೆಂಗಳೂರು : ಹನಿಟ್ರ್ಯಾಪ್ ಗ್ಯಾಂಗ್ ಒಂದು ಉದ್ಯಮಿಯಿಂದ ಸಿನಿಮಾ ಮಾಡುವುದಾಗಿ ನಂಬಿಸಿ ಮೋಸ ಮಾಡಿ ಬರೋಬ್ಬರಿ 40 ಲಕ್ಷ ರೂ. ಹಣವನ್ನು ಪಡೆದು, ಆತನನ್ನು ವಂಚಿಸಿದ ಘಟನೆ ನಡೆದಿದೆ.
ಸಿನಿಮಾ ಮಾಡುವ ಹೆಸರಿನಲ್ಲಿ ಉದ್ಯಮಿಯಿಂದ ಹಣ ಪಡೆದು ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ನಂತರ ಅದನ್ನು ಉದ್ಯಮಿಗೆ ತೋರಿಸಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಇದನ್ನು ಓದಿ : ಹೆಬ್ಬಾವಿಗೆ ಮುತ್ತು ಕೊಡಲು ಹೋದ ಯುವಕ; ಮುಂದೆನಾಯ್ತು ಗೊತ್ತಾ.? Video ನೋಡಿ.
ಉದ್ಯಮಿ ಗಣೇಶ್ ಬೆಂಗಳೂರಿನ ಎಂ. ಜಿ. ರಸ್ತೆಯಲ್ಲಿ ಲೈಟ್ ಆರ್ಟ್ ಸ್ಟುಡಿಯೋ ಹೊಂದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಗಣೇಶ ಅವರಿಗೆ ಯುವತಿ ಪರಿಚಿತಳಾಗಿದ್ದಾಳೆ. ಈಕೆ ಕಳೆದ ನಾಲ್ಕು ವರ್ಷಗಳಿಂದ ಸಿನಿಮಾ ಮಾಡುತ್ತಿರೋದಾಗಿ ಹೇಳಿಕೊಂಡಿದ್ದಾಳೆ.
ಅಂತೆಯೇ ಉದ್ಯೋಗಿಯನ್ನು ನಂಬಿಸಿ ನಿರ್ದೇಶಕ ಎಸ್. ಆರ್. ಪಾಟೀಲ್ ಎಂಬುವವರಿಗೆ 4.25 ಲಕ್ಷ ಹಣ ವರ್ಗಾಯಿಸಿಕೊಂಡಿದ್ದಳು.
ಬಳಿಕ ಗಣೇಶ್ ಅವರು ಕೊಟ್ಟ ಹಣ ವಾಪಸ್ಸು ಕೇಳಿದಾಗ ಯುವತಿ ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಗಣೇಶ್ ಅವರಿಗೆ ಲೈಂಗಿಕ ಕ್ರಿಯೆಗೆ ಪ್ರಚೋದಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಳು. ನಂತರ ವಿಡಿಯೋ ತೋರಿಸಿ ದೂರು ದಾಖಲು ಮಾಡಿ, ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಳು.
ಹಂತ ಹಂತವಾಗಿ ಉದ್ಯಮಿ ಗಣೇಶ್ ಅವರಿಂದ ಬರೋಬ್ಬರಿ 40 ಲಕ್ಷ ರೂ. ಹಣ ಪಡೆದಿದ್ದಾಳೆಯಂತೆ. ಇದಾದ ನಂತರ ಪುನಃ 20 ಲಕ್ಷ ರೂ. ಮೌಲ್ಯದ ಕಾರು ಕೊಡಿಸು ಅಂತ ಕಾವ್ಯ ಡಿಮ್ಯಾಂಡ್ ಮಾಡಿದ್ದಾಳೆ ಎನ್ನಲಾಗಿದೆ.
ಇದನ್ನು ಓದಿ : Video : ಯೂನಿಫಾರ್ಮ್ ಬಿಚ್ಚಿಸ್ತೀನಿ ಎಂದು BJP ಮುಖಂಡನಿಂದ ಬೆದರಿಕೆ; ಸಮವಸ್ತ್ರವನ್ನೇ ಹರಿದು ಹಾಕಿದ ASI.!
ಹೀಗಾಗಿ ಇವಳ ಕಿರುಕುಳವನ್ನು ತಾಳಲಾರದೇ ಉದ್ಯಮಿ ಗಣೇಶ್, ಕಾವ್ಯ ಹಾಗೂ ಆಕೆಯ ಗ್ಯಾಂಗ್ ವಿರುದ್ದ ಹೈಗ್ರೌಂಡ್ಸ್ ಠಾಣೆಯಲ್ಲಿ ದುರು ದಾಖಲಿಸಿದ್ದಾರೆ. ಇವರ ದೂರಿನ ಆಧಾರದಲ್ಲಿ ಹನಿಟ್ರ್ಯಾಪ್ ಕೇಸ್ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ.