ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಂಗ್ರೆಸ್ ನಾಯಕಿಯೊಬ್ಬರು ಅತ್ಯಾಚಾರ ಬೆದರಿಕೆ ಮತ್ತು ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ ಆರೋಪದ ಮೇಲೆ ಬೆಂಬಲಿಗರೊಂದಿಗೆ ಆರೋಪಿಯ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವಾರಣಾಸಿಯ ಲಾಲ್ಪುರ್- ಪಾಂಡೇಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : Special news : ಭಾರತದ ಈ ಗ್ರಾಮದಲ್ಲಿ ಯುವತಿ ವಾರಕ್ಕೊಬ್ಬನ ಜೊತೆ ಲಿವ್ ಇನ್ ರಿಲೇಷನ್‌ಶಿಪ್’ನಲ್ಲಿರಬಹುದಂತೆ.!
ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ನಾಯಕಿ ರೋಶನಿ ಕುಶಾಲ್ ಜೇಸ್ವಾಲ್, ಆರೋಪಿ ಕೇಸರಿ ರಾಜೇಶ್ ಸಿಂಗ್ ಮನೆಗೆ ನುಗ್ಗಿ ಆತನ ಕುಟುಂಬದ ಸಮ್ಮುಖದಲ್ಲೇ ಆತನನ್ನು ಥಳಿಸಿದ್ದಾರೆ.
ಇನ್ನೂ ವ್ಯಕ್ತಿಯ ಕುಟುಂಬ ಆತನನ್ನು ರಕ್ಷಿಸಲು ಹಾಗೂ ಥಳಿಸದಂತೆ ಗುಂಪಿನ ಜನರಿಗೆ ಮನವಿ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಇದನ್ನು ಓದಿ : ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ Upload ಮಾಡ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.
ಕಳೆದ ನಾಲ್ಕು ವರ್ಷಗಳಿಂದ ರಾಜೇಶ್ ಸಿಂಗ್ ತನಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಾಚಾರದ ಬೆದರಿಕೆ ಹಾಗೂ ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿದ್ದ. ಅಲ್ಲದೇ ಅತ್ಯಾಚಾರ ಮಾಡಿ, ಗರ್ಭಿಣಿ ಮಾಡುವುದಾಗಿ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಇನ್ನು ಮುಂದೆ ತನ್ನ ವಿರುದ್ಧ ಇಂತಹ ಕಾಮೆಂಟ್‌ಗಳನ್ನು ಸಹಿಸಲು ಸಾಧ್ಯವಿಲ್ಲ. ಆತ ಎಂತಹ ವ್ಯಕ್ತಿ ಎಂಬುದನ್ನು ಆತನ ಹೆಂಡತಿ, ಮಕ್ಕಳಿಗೆ ತಿಳಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಆತನ ಕುಟುಂಬದ ಸಮ್ಮುಖದಲ್ಲೇ ಆತನಿಗೆ ತಕ್ಕ ಪಾಠ ಕಲಿಸಿದ್ದೇವೆ ಎಂದಿದ್ದಾರೆ.
वाराणसी : सोशल मीडिया पर कमेंटबाजी हुई मारपीट में तब्दील
➡कमेंट करने वाले व्यक्ति के घर पहुंची कांग्रेस नेत्री
➡लाइव आकार नेत्री रोशनी कुशल जायसवाल ने किया हंगामा
➡कमेंट करने वाले व्यक्ति,उनके परिवार के साथ दुर्व्यवहार का आरोप
➡फेसबुक लाइव का वीडियो सोशल मीडिया पर हो रहा… pic.twitter.com/p5b5jcDb3p— भारत समाचार | Bharat Samachar (@bstvlive) September 15, 2024