Thursday, September 19, 2024
spot_img
spot_img
spot_img
spot_img
spot_img
spot_img
spot_img

ವಾರ ಪೂರ್ತಿ Non veg ತಿನ್ನುವವರೇ ಈ ಸುದ್ದಿಯನ್ನೊಮ್ಮೆ ಓದಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವೊಬ್ಬರು ಚಿಕನ್, ಮಟನ್ ಇಲ್ಲದೆ ಊಟವಿಲ್ಲ ಎಂಬ ಮಾತನ್ನು ಶಿರಸಾ ವಹಿಸಿ ಪಾಲಿಸುತ್ತಾರೆ. ಇಂಥವರು ಪ್ರತಿದಿನ ಕೊಟ್ಟರೂ ಹಿಂಜರಿಯದೇ ತಿನ್ನುತ್ತಾರೆ.

ಆದರೆ ನೀವು ಪ್ರತಿನಿತ್ಯ ಮಾಂಸಾಹಾರ ಸೇವನೆ ಮಾಡುತ್ತಿದ್ದರೆ ಇಂದೇ ಆ ಅಭ್ಯಾಸವನ್ನು ಬಿಟ್ಟು ಬಿಡುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ವಾರಕ್ಕೆ 3 ಬಾರಿಗಿಂತ ಹೆಚ್ಚು ಮಾಂಸ ತಿನ್ನುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಹೇಳಲಾಗುತ್ತದೆ.

ಇದನ್ನು ಓದಿ : ಬಾಯ್‌ಫ್ರೆಂಡ್ ಜೊತೆ ಓಡಿಹೋಗುತ್ತಿದ್ದ ಯುವತಿಗೆ ನೆನಪಾದ ತಂದೆ ; ಮುಂದೆನಾಯ್ತು? ಈ Video ನೋಡಿ.

ಇನ್ನೂ ದಿನನಿತ್ಯ ಮಾಂಸಾಹಾರ ತಿನ್ನುವುದರಿಂದ ಮಧುಮೇಹ, ಹೃದ್ರೋಗ, ಕ್ಯಾನ್ಸರ್, ನ್ಯುಮೋನಿಯಾ, ರಕ್ತದೊತ್ತಡ, ಬೊಜ್ಜು, ಹೆಚ್ಚಿನ ಕೊಲೆಸ್ಟ್ರಾಲ್, ಜೀರ್ಣಕಾರಿ ಸಮಸ್ಯೆಗಳು, ಯೂರಿಕ್ ಆಮ್ಲದಂತಹ ಸಮಸ್ಯೆಗಳಿಂದ ಬಳಲಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸುತ್ತಾರೆ.

ವಾರದಲ್ಲಿ 3 ದಿನ ಅಥವಾ ಅದಕ್ಕಿಂತ ಹೆಚ್ಚು ದಿನ ಕೆಂಪು ಮಾಂಸ, ಸಂಸ್ಕರಿಸಿದ ಮಾಂಸ, ಕೋಳಿ ಮಾಂಸ ಇತ್ಯಾದಿಗಳನ್ನು ಸೇವನೆ ಮಾಡಿದರೆ 9 ರೀತಿಯ ರೋಗಗಳು ಬರುವ ಅಪಾಯ ಇದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬಿಎಂಸಿ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಿಂದ ತಿಳಿದು ಬಂದಿದೆ.

ಇದನ್ನು ಓದಿ : Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವವರೇ ಈ ಸುದ್ದಿಯನ್ನೊಮ್ಮೆ ಓದಿ.

ಕೆಂಪು ಸಂಸ್ಕರಿಸಿದ ಮಾಂಸವನ್ನು ಅತಿಯಾದ ಸೇವನೆಯಿಂದ ಹೊಟ್ಟೆಯ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗಿರುತ್ತದೆ ಎಂದು ಅನೇಕ ಅಧ್ಯಯನಗಳು ಮತ್ತು ಸಂಶೋಧನೆಗಳು ತೋರಿಸಿ ಕೊಟ್ಟಿವೆ.

ನ್ಯುಮೋನಿಯಾ, ಹೃದ್ರೋಗ, ಡೈವರ್ಟಿಕ್ಯುಲರ್ ಕಾಯಿಲೆ ಮತ್ತು ಮಧುಮೇಹದ ಅಪಾಯ ಹೆಚ್ಚಾಗಬಹುದು. ಕೋಳಿ ಮಾಂಸ ತಿನ್ನುವವರಲಿ ಗ್ಯಾಸ್ಟ್ರೈಟಿಸ್, ಡ್ಯುಡೆನಿಟಿಸ್, ಪಿತ್ತಕೋಶದ ಕಾಯಿಲೆ ಮತ್ತು ಮಧುಮೇಹ ಹೆಚ್ಚಾಗಬಹುದು.

ಪ್ರತಿದಿನ 70 ಗ್ರಾಂ ಸಂಸ್ಕರಿಸದ ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಮಾಂಸ ಸೇವಿಸುವವರಲ್ಲಿ ಹೃದ್ರೋಗದ ಅಪಾಯವು ಶೇಕಡಾ 15 ರಷ್ಟು ಮತ್ತು ಮಧುಮೇಹದ ಅಪಾಯವು ಶೇಕಡಾ 30 ರಷ್ಟು ಹೆಚ್ಚಾಗುತ್ತದೆಯಂತೆ.

ಇದನ್ನು ಓದಿ : ಅತ್ತೆ ಹೊಡೆದಿದ್ದಾರೆ ಎಂದು ಸಹಾಯವಾಣಿ ಕೇಂದ್ರಕ್ಕೆ Call ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಮುಂದೆನಾಯ್ತು ಗೊತ್ತಾ.?

ಬ್ರಿಟನ್ನಿನ 4 ಲಕ್ಷ 75 ಸಾವಿರ ಮಧ್ಯ ವಯಸ್ಕರನ್ನು ಅಧ್ಯಯನದಲ್ಲಿ ಸೇರಿಸಿಕೊಳ್ಳಲಾಗಿದ್ದು ಈ ಸಮಯದಲ್ಲಿ, ಸಂಶೋಧಕರು ಆ ಜನರ ಆಹಾರ ಮತ್ತು ವೈದ್ಯಕೀಯ ದಾಖಲೆಗಳು, ಆಸ್ಪತ್ರೆಗೆ ದಾಖಲಾದವರ ಕುರಿತು ಮಾಹಿತಿ ಕಲೆ ಹಾಕಿದೆ.

ಸುಮಾರು 8 ವರ್ಷಗಳ ಕಾಲ ನಡೆದ ಅಧ್ಯಯನದಲ್ಲಿ ವಾರಕ್ಕೆ ಸರಾಸರಿ 3 ಅಥವಾ ಅದಕ್ಕಿಂತ ಹೆಚ್ಚು ದಿನ ಮಾಂಸವನ್ನು ಸೇವನೆ ಮಾಡುವವರು ಕಡಿಮೆ ಮಾಂಸ ಸೇವನೆ ಮಾಡುವವರಿಗೆ ಹೋಲಿಸಿದರೆ ಕೆಟ್ಟ ಆರೋಗ್ಯ ಪರಿಸ್ಥಿತಿಯನ್ನು ಹೊಂದಿದ್ದಾರೆ ಎಂದು ಅಧ್ಯಯನದ ಫಲಿತಾಂಶಗಳಿಂದ ಬಹಿರಂಗಗೊಂಡಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img