ಜನಸ್ಪಂದನ ನ್ಯೂಸ್, ಡೆಸ್ಕ್ : ಸ್ನೇಹವನ್ನು ಬೆಳೆಸಲು ಕಿರಿಯರು, ಹಿರಿಯರು, ಬಡವರು, ಬಲ್ಲಿದರು ಇಂತಹ ಯಾವುದೇ ಭೇದವು ಅಡ್ಡ ಬಾರದು. ಜೀವನದಲ್ಲಿ ಗೆಳೆಯರನ್ನು ಹೊಂದುವುದು ಬಹಳ ಅವಶ್ಯಕ. ಗೆಳೆಯರಿಲ್ಲ ಎಂದರೆ ಜೀವನದಲ್ಲಿ ಅತ್ಯಮೂಲ್ಯವಾದದ್ದು ಏನಾದರೂ ಕಳೆದುಕೊಳ್ಳುತ್ತೀರಿ ಎಂದರ್ಥ. ಪ್ರತಿಯೊಬ್ಬರಿಗೂ ಜೀವನದ ಯಾವುದಾದರೂ ಒಂದು ಹಂತದಲ್ಲಿ ಅತ್ಯುತ್ತಮವಾದ ಸ್ನೇಹಿತರು ಲಭಿಸುತ್ತಾರೆ.
ಬೆಸ್ಟ್ ಫ್ರೆಂಡ್ಸ್ ಮಾಡಿಕೊಳ್ಳುವುದರಲ್ಲಿ ಕೆಲವು ರಾಶಿಯವರು ಮುಂದಿರುತ್ತಾರೆ. ಕೆಲವು ರಾಶಿಗಳ ಬಗ್ಗೆ ಹೇಳಲಾಗಿದೆ, ಅವರು ಬೆಸ್ಟ್ ಫ್ರೆಂಡ್ಸ್ ಗಳನ್ನು ಮಾಡಿಕೊಳ್ಳುವುದರಲ್ಲಿ ಯಾವಾಗಲೂ ಮುಂದಿರುತ್ತಾರೆ.
ಇದನ್ನು ಓದಿ : ಬಾಯ್‌ಫ್ರೆಂಡ್ ಜೊತೆ ಓಡಿಹೋಗುತ್ತಿದ್ದ ಯುವತಿಗೆ ನೆನಪಾದ ತಂದೆ ; ಮುಂದೆನಾಯ್ತು? ಈ Video ನೋಡಿ.
ಕನ್ಯಾ ರಾಶಿ :
ಕನ್ಯಾ ರಾಶಿಯವರು ಪ್ರಾರಂಭದಲ್ಲಿ ಇವರು ನಿಮಗೆ ಅತ್ಯುತ್ತಮ ಸ್ನೇಹಿತರು ಎಂದು ಅನಿಸುವುದಿಲ್ಲ, ಆದರೆ ದಿನ ಕಳೆದಂತೆ ನೀವು ಇವರೊಂದಿಗೆ ಯಾವಾಗಲೂ ನಗುತ್ತಿರುತ್ತೀರಿ ಮತ್ತು ಅತ್ಯಂತ ಹೆಚ್ಚಿನ ಸಂತೋಷದಿಂದಿರುತ್ತೀರಿ.
ಕನ್ಯಾ ರಾಶಿಗೆ ಸೇರಿದ ಜನರಿಗೆ ಸ್ನೇಹವನ್ನು ಉತ್ತಮವಾಗಿ ನಿಭಾಯಿಸುವ ಗುಣವಿರುತ್ತದೆ. ಈ ರಾಶಿಗೆ ಸೇರಿದವರು ತಮ್ಮ ಸ್ನೇಹಿತರ ಎಲ್ಲಾ ರಹಸ್ಯವನ್ನು ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ ಮತ್ತು ಬೇರೆ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ.
ಇದನ್ನು ಓದಿ : ಶಿಕ್ಷಕನ Mobileನಲ್ಲಿ ವಿದ್ಯಾರ್ಥಿನಿಯರ 5000ಕ್ಕೂ ಹೆಚ್ಚು ನಗ್ನ ದೃಶ್ಯಗಳು.!
ಮಿಥುನ ರಾಶಿ :
ಮಿಥುನ ರಾಶಿಯವರು ತಮ್ಮ ಬೆಸ್ಟ್ ಫ್ರೆಂಡ್ ಗಳೊಂದಿಗೆ ಬಹಳಷ್ಟು ಸಂತೋಷವಾಗಿರುತ್ತಾರೆ. ಈ ರಾಶಿಗೆ ಸೇರಿದವರು ಪ್ರತಿಯೊಂದು ಹಂತದಲ್ಲಿಯೂ ಬೆಂಬಲಕ್ಕೆ ನಿಲ್ಲುತ್ತಾರೆ ಮತ್ತು ಯಾವುದೇ ಪರಿಸ್ಥಿತಿಯಲ್ಲಿಯೂ ತಮ್ಮ ಸ್ನೇಹಿತರನ್ನು ಒಬ್ಬಂಟಿಯಾಗಿ ಇರಲು ಬಿಡುವುದಿಲ್ಲ.
ಇವರು ತಮ್ಮ ಬೆಸ್ಟ್ ಫ್ರೆಂಡ್ ಗಳೊಂದಿಗೆ ಹೆಚ್ಚಿನ ವಿಶ್ವಾಸವನ್ನು ಹೊಂದಿರುತ್ತಾರೆ. ಯಾರನ್ನೇ ಆಗಲಿ ತಮ್ಮ ಬೆಸ್ಟ್ ಫ್ರೆಂಡ್ ಎಂದು ಅಂದುಕೊಂಡರೆ ಅವರೊಂದಿಗೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಇವರು ತಯಾರಿರುತ್ತಾರೆ.
ಇದನ್ನು ಓದಿ : Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವವರೇ ಈ ಸುದ್ದಿಯನ್ನೊಮ್ಮೆ ಓದಿ.
ಮೇಷ ರಾಶಿ :
ಇವರು ಯಾರನ್ನಾದರೂ ತಮ್ಮ ಮನಸ್ಸಿನಿಂದ ಸ್ನೇಹಿತರೆಂದು ಭಾವಿಸಿದರೆ, ಜೀವನದಲ್ಲಿ ಯಾವುದೇ ಕಾರಣಕ್ಕೂ ಅವರ ಕೈ ಬಿಡುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಇವರು ತಮ್ಮ ಸ್ನೇಹಿತರ ಬೆಂಬಲಕ್ಕೆ ನಿಲ್ಲುತ್ತಾರೆ.
ಮೇಷ ರಾಶಿಗೆ ಸೇರಿದವರು ಸ್ನೇಹಿತರನ್ನು ಯಾವುದೇ ಕಾರಣಕ್ಕೂ ಒಬ್ಬಂಟಿಯಾಗಿರಲು ಬಿಡುವುದಿಲ್ಲ. ನೀವೇ ಇವರ ಸ್ನೇಹವನ್ನು ಬಿಟ್ಟರೂ ಇವರು ನಿಮ್ಮ ಸ್ನೇಹವನ್ನು ಬಿಡುವುದಿಲ್ಲ. ಉಸಿರಿರುವರೆಗೂ ಇವರು ಸ್ನೇಹವನ್ನು ಕಾಪಾಡಿಕೊಳ್ಳುತ್ತಾರೆ.
ಇದನ್ನು ಓದಿ : ದ್ವಿತೀಯ PUC ಪಾಸಾಗಿದ್ದೀರಾ.? ಗ್ರಾ. ಪಂ.ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಮಕರ ರಾಶಿ :
ಈ ರಾಶಿಯವರು ಮಾತನಾಡುವುದಕ್ಕಿಂತ ಕೆಲಸದಲ್ಲಿ ಮಾಡುವುದರಲ್ಲಿ ವಿಶ್ವಾಸವನ್ನು ಹೊಂದಿರುತ್ತಾರೆ. ಇವರ ಉತ್ತಮ ಮನಸ್ಸಿನವರು ಮತ್ತು ತಮ್ಮ ಸ್ನೇಹಿತರನ್ನು ಅತ್ಯಂತ ಹೆಚ್ಚಿನ ಕಾಳಜಿಯಿಂದ ನೋಡಿಕೊಳ್ಳುತ್ತಾರೆ.
ಮಕರ ರಾಶಿಗೆ ಸೇರಿದ ಜನರು ನಿಮ್ಮನ್ನು ಸ್ನೇಹಿತರನ್ನಾಗಿ ಮಾಡಿಕೊಂಡರೆ, ನಿಮಗೆ ಯಾವುದೇ ರೀತಿಯ ಚಿಂತೆ ಇಲ್ಲದಂತೆ ನೋಡಿಕೊಳ್ಳುತ್ತಾರೆ. ಮಕರ ರಾಶಿಗೆ ಸೇರಿದ ಜನರಿಗೆ ಹೆಚ್ಚು ಸ್ನೇಹಿತರಿರುವುದಿಲ್ಲ. ಇವರಿಗೆ ಒಬ್ಬರು ಅಥವಾ ಇಬ್ಬರು ಸ್ನೇಹಿತರು ಮಾತ್ರ ಆಗುತ್ತಾರೆ. ಆದರೆ ಇವರು ಸ್ನೇಹಿತರಾದರೆ, ಅವರಿಗೆ ಅತ್ಯುತ್ತಮವಾದ ಸ್ನೇಹಿತರಾಗಿರುತ್ತಾರೆ.
ಇದನ್ನು ಓದಿ : Special news : ಯಾವ ರಾಶಿಯವರು ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು ಗೊತ್ತಾ.?
ಸಿಂಹ ರಾಶಿ :
ಸಿಂಹ ರಾಶಿಗೆ ಸೇರಿದ ಜನರು ತುಂಬಾ ಮೃದು ಸ್ವಭಾವದವರು, ಶಕ್ತಿಶಾಲಿಗಳಾಗಿರುತ್ತಾರೆ ಮತ್ತು ಉತ್ಸಾಹದಿಂದ ತುಂಬಿರುತ್ತಾರೆ. ಸಿಂಹ ರಾಶಿಗೆ ಸೇರಿದ ಜನರು ಯಾವುದೇ ಕಾರಣಕ್ಕೂ ಯಾವುದೇ ವಿಷಯಕ್ಕೂ ಬೇಜಾರಾಗುವುದಿಲ್ಲ. ಈ ರಾಶಿಗೆ ಸೇರಿದವರು ಪ್ರತಿಯೊಂದು ವಿಷಯದಲ್ಲಿಯೂ ಸಂತೋಷವನ್ನು ಹೊಂದುತ್ತಾರೆ.
ಯಾರೂ ನಿಮ್ಮ ಬೆಂಬಲಕ್ಕೆ ನಿಲ್ಲದಿದ್ದಾಗ, ಈ ರಾಶಿಯವರು ನಿಮ್ಮ ಬೆಂಬಲಕ್ಕೆ ಪ್ರತಿಯೊಂದು ಕ್ಷಣದಲ್ಲಿಯೂ ನಿಲ್ಲುತ್ತಾರೆ. ಸಿಂಹ ರಾಶಿಗೆ ಸೇರಿದ ಜನರು ನಿಮ್ಮ ಬೆಸ್ಟ್ ಫ್ರೆಂಡ್ ಗಳಾದರೇ, ನಿಮಗೆ ಜೀವನದುದ್ದಕ್ಕೂ ಬಹಳ ಅತ್ಯುತ್ತಮವಾದ ಸ್ನೇಹಿತರಾಗಿರುತ್ತಾರೆ.