Monday, October 7, 2024
spot_img
spot_img
spot_img
spot_img
spot_img
spot_img
spot_img

ರಾತ್ರಿ ಊಟದ ಬಳಿಕ ವೀಳ್ಯದೆಲೆ ತಿನ್ನುವ ಅಭ್ಯಾಸವಿದೆಯೇ.? ಹಾಗಿದ್ರೆ ಈ ಸುದ್ದಿ ಓದಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಊಟದ ನಂತರ ಕೆಲವರು ವೀಳ್ಯದೆಲೆ ತಿನ್ನುತ್ತಾರೆ. ಇನ್ನು ಕೆಲವರು ಸೋಂಪು ತಿನ್ನುತ್ತಾರೆ. ಇನ್ನೂ ಸ್ವಲ್ಪ ಜನರು ಊಟದ ನಂತರ ಸಿಹಿ ಪದಾರ್ಥ ತಿನ್ನಲು ತುಂಬಾ ಇಷ್ಟ ಪಡ್ತಾರೆ.

ಹಾಗಾದ್ರೆ ಬನ್ನಿ ವೀಳ್ಯದೆಲೆ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.? ಅಂತ ತಿಳಿಯೋಣ.

* ವೀಳ್ಯದೆಲೆಯ ಎಣ್ಣೆಯು ದಂತಕ್ಷ ಯವನ್ನು ತಡೆಯುತ್ತದೆ. ಬಾಯಿಯೊಳಗೆ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆದು ವಸಡು ಮತ್ತು ಹಲ್ಲನ್ನು ಸದೃಢಗೊಳಿಸುತ್ತದೆ.

ಇದನ್ನು ಓದಿ : Video : ಯೂನಿಫಾರ್ಮ್ ಬಿಚ್ಚಿಸ್ತೀನಿ ಎಂದು BJP ಮುಖಂಡನಿಂದ ಬೆದರಿಕೆ; ಸಮವಸ್ತ್ರವನ್ನೇ ಹರಿದು ಹಾಕಿದ ASI.!

ಕೆಲವು ಹನಿ ವೀಳ್ಯದೆಲೆಯ ಎಣ್ಣೆ ಬೆರೆಸಿದ ಒಂದು ಕಪ್‌ ಉಗುರು ಬೆಚ್ಚನೆಯ ನೀರಿನಲ್ಲಿ ಬೆಳಗ್ಗೆ ಮತ್ತು ರಾತ್ರಿ ಬಾಯಿ ಮುಕ್ಕಳಿಸಿದರೆ ಬಾಯಿಯ ದುರ್ವಾಸನೆ ಹೋಗುತ್ತದೆ.

* ವೀಳ್ಯದೆಲೆಯನ್ನು ಜಜ್ಜಿ ಹಣೆಗೆ ಲೇಪಿಸಿದರೆ ನೋವು ಕ್ರಮೇಣ ಕಡಿಮೆಯಾಗುತ್ತದೆ.

* ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಿ ಕಂಡು ಬರುವ ಹೊಟ್ಟೆ ನೋವಿಗೆ ವೀಳ್ಯದೆಲೆ ಸೇವನೆ ಬೆಸ್ಟ್‌.

* ಕರ್ಮಿನೇಟಿವ್‌ ಮತ್ತು ಗ್ಯಾಸ್ಟ್ರೊಪ್ರೊಟೆಕ್ಟಿವ್‌ ಅಂಶಗಳು ಹೆಚ್ಚಿರುವ ವೀಳ್ಯದೆಲೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು..

ಇದನ್ನು ಓದಿ : ಅಶ್ಲೀಲ ಕಮೆಂಟ್ ಮಾಡಿದಾತನ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಯುವತಿ; ವಿಡಿಯೋ Viral.! 

* ವೀಳ್ಯದೆಲೆಯಲ್ಲಿ ನೋವನ್ನು ನಿವಾರಿಸುವ ಔಷಧೀಯ ಗುಣಗಳಿದ್ದು, ಈ ಎಲೆಯ ಜಜ್ಜಿ ಗಾಯಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ವೀಳ್ಯದೆಲೆಯನ್ನು ಜಗಿದರೂ ಹೊಟ್ಟೆ ನೋವು ಇತ್ಯಾದಿಗಳು ಕಡಿಮೆಯಾಗುತ್ತದೆ.

* ಆ್ಯಂಟಿಬಯೋಟಿಕ್ಸ್‌ನ ಆಗರವಾಗಿರುವ ವೀಳ್ಯದೆಲೆ ಸತತ ಕೆಮ್ಮು ಮತ್ತು ಅದರಿಂದ ಉಂಟಾಗುವ ಉರಿಯನ್ನು ಕಡಿಮೆಗೊಳಿಸುತ್ತದೆ.

* ಪಾನ್‌ನಲ್ಲಿ ಆ್ಯಂಟಿಮೈಕ್ರೊಬಲ್‌ ಅಂಶಗಳಿದ್ದು ಇದು ಮೊಡವೆ ನಿವಾರಿಸಿ ಚರ್ಮಕ್ಕೆ ಕಾಂತಿ ನೀಡುತ್ತದೆ. ಅಲರ್ಜಿ, ಸನ್‌ಬರ್ನ್‌, ಕಜ್ಜಿ, ಕೆರೆತ, ದುರ್ಗಂಧ ಮುಂತಾದ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ವೀಳ್ಯದೆಲೆಯ ರಸಕ್ಕೆ ಸ್ವಲ್ಪ ಅರಶಿನ ಪುಡಿ ಹಾಕಿ ಮುಖಕ್ಕೆ ಲೇಪಿಸಿದರೆ ಉತ್ತಮ ಪರಿಣಾಮ ಬೀರುತ್ತದೆ.

* ವೀಳ್ಯದೆಲೆಯಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಪಾನ್‌ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

ಇದನ್ನು ಓದಿ : ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ Upload ಮಾಡ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.

* ಯಾವುದರಲ್ಲೂ ಆಸಕ್ತಿಯಿರದೆ ಒಂದು ರೀತಿಯ ಮಂಕುತನ ಕಾಡುತ್ತಿದ್ದರೆ ವೀಳ್ಯದೆಲೆ ತಿನ್ನಿ. ಇದು ಬುದ್ಧಿಯನ್ನು ಚುರುಕುಗೊಳಿಸುತ್ತದೆ.

ಒಂದು ಟೀ ಸ್ಪೂನ್‌ ವೀಳ್ಯದೆಲೆಯ ರಸಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಪ್ರತಿದಿನ ಎರಡು ಬಾರಿ ಸೇವಿಸಿದರೆ ಉತ್ತಮ ಪರಿಣಾಮ ಬೀರುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img