Saturday, September 21, 2024
spot_img
spot_img
spot_img
spot_img
spot_img
spot_img
spot_img

ಕರ್ನಾಟಕ ಸೇರಿದಂತೆ 17 ರಾಜ್ಯಗಳ ಬಿಜೆಪಿ ಅಭ್ಯರ್ಥಿಗಳ ಮೊದಲನೇ ಪಟ್ಟಿ ಫೈನಲ್.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮುಂಬರುವ ಲೋಕಸಭೆ ಚುನಾವಣೆಗೆ (Lok Sabha Elections) ಅಭ್ಯರ್ಥಿಗಳ ಮೊದಲ ಪಟ್ಟಿ (BJP Candidate list 2023) ಅಂತಿಮಗೊಳಿಸಲು ಬಿಜೆಪಿ ಕೇಂದ್ರಿಯ ಚುನಾವಣಾ ಸಮಿತಿ ನಿನ್ನೆ ಮಹತ್ವದ ಸಭೆ ನಡೆಸಿದೆ. ಕರ್ನಾಟಕ ಸೇರಿದಂತೆ 17 ರಾಜ್ಯಗಳ 160 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದುವರೆಗೂ ಬಿಜೆಪಿ ಸಂಪೂರ್ಣ ಗೆಲುವು ಸಾಧಿಸಲು ಆಗದ ರಾಜ್ಯಗಳಿಗೆ ಹೆಚ್ಚಿನ ಮೊದಲ ಪ್ರಾಶಸ್ತ್ಯ ನೀಡಲಿದೆ ಎನ್ನಲಾಗ್ತಿದೆ. ಪಶ್ಚಿಮ ಬಂಗಾಳ (West Bengal), ತಮಿಳುನಾಡು (Tamil Nadu), ಕೇರಳ (Kearala) ರಾಜ್ಯಗಳು ಮೊದಲ ಪಟ್ಟಿಯಲ್ಲಿರುವ ನಿರೀಕ್ಷೆ ಇದೆ. ವಾರಣಾಸಿಯಿಂದ ನರೇಂದ್ರ ಮೋದಿ (Narendra Modi), ಗಾಂಧಿನಗರ-ಅಮಿತ್ ಶಾ, ಲಕ್ನೋ-ರಾಜನಾಥ್ ಸಿಂಗ್, ಗುನಾ-ಜ್ಯೋತಿರಾಧಿತ್ಯ ಸಿಂಧಿಯಾ, ವಿಧಿಶಾ-ಶಿವರಾಜ್ ಸಿಂಗ್ ಚೌಹಾಣ್‌ ಸೇರಿದಂತೆ ಘಟಾನುಘಟಿ ನಾಯಕರ ಕ್ಷೇತ್ರಗಳು ಇಂದು ಫೈನಲ್‌ ಆಗಲಿವೆ.

ಇಂಗ್ಲಿಷ್ ಮಾಧ್ಯಮ ವಾಪಸ್ ಪಡೆಯುವ ಬಗ್ಗೆ ಗಂಭೀರ ಪರಿಶೀಲನೆ : CM ಭರವಸೆ,!

ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆಯುವ ಘಟಾನುಘಟಿಗಳ ಸಂಭಾವ್ಯ ಪಟ್ಟಿ ಇಂತಿದೆ :

  • ನರೇಂದ್ರ ಮೋದಿ – ವಾರಾಣಾಸಿ.
  • ಅಮಿತ್ ಶಾ – ಗಾಂಧಿನಗರ.
  • ರಾಜನಾಥ್ ಸಿಂಗ್ – ಲಕ್ನೋ.
  • ಜ್ಯೋತಿರಾಧಿತ್ಯ ಸಿಂಧಿಯಾ – ಗುನಾ.
  • ಶಿವರಾಜ್ ಸಿಂಗ್ ಚೌಹಾಣ್ – ವಿಧಿಶಾ
  • ನಿತಿನ್ ಗಡ್ಕರಿ – ನಾಗಪುರ ಸರ್ಬಾನಂದ
  • ಸೋನವಾಲ್ – ದಿಬ್ರಾಗರ್‌.
  • ರವಿ ಕಿಶನ್ – ಗೋರಖ್ ಪುರ.
  • ಪ್ರವೇಶ್ ವರ್ಮಾ –  ಪಶ್ಚಿಮ ದೆಹಲಿ.
  • ರಾವ್ ಇಂದ್ರಜಿತ್‌ – ಗುರುಗ್ರಾಮ.
  • ಸುನೀತಾ ದುಗ್ಗಲ್ – ಸಿರ್ಸಾ.
  • ಎಸ್‌ಪಿಎಸ್‌ ಬಘೇಲಾ –  ಆಗ್ರಾ.
  •  ಮನೋಜ್ ತಿವಾರಿ –  ಈಶಾನ್ಯ ದೆಹಲಿ.
  • ಪವನ್ ಸಿಂಗ್ – ಅಸನಸೋಲ್.
  • ಸುಬ್ರತಾ ಪಾಠಕ್‌ – ಕನೂಜ್.
  • ಸಂಬೀತ್ ಪಾತ್ರಾ – ಪುರಿ.
  • ದೀಲೀಪ್ ಘೋಷ್ – ಮೇದಿನಪುರ, ಪಶ್ಚಿಮ ಬಂಗಾಳ
  • ಡಾ.ಮುರಳೀಧರ್ – ತಿರುವನಂತಪುರ ಗ್ರಾಮೀಣ .
  • ಶೋಭಾ ಕರಂದ್ಲಾಜೆ – ಚಿಕ್ಕಮಗಳೂರು (ಕರ್ನಾಟಕ).
  • ಪೂನಂ ಮೇಡಂ – ಜಾಮ್ ನಗರ.
  • ಲಾಕೆಟ್ ಚಟರ್ಜಿ – ಹೂಗ್ಲಿ ಮತ್ತು
  • ನಿಶಿತ್ ಪ್ರಾಮಾಣಿಕ್ – ಕೂಚ್‌ ಬಿಹಾರ್.

ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ : ಇಬ್ಬರು ಪೊಲೀಸರು Suspend.!

ಪ್ರತಿ ಕ್ಷೇತ್ರದಲ್ಲೂ ಬಿಜೆಪಿ ಹೈಕಮಾಂಡ್ ಸರ್ವೇ :

ಹಾಲಿ ಎಂಪಿಗಳ ಸಾಧನೆ, ಸರ್ವೇ ಆಧಾರದ ಮೇಲೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಸಾರ್ವಜನಿಕರ ಫೀಡ್ ಬ್ಯಾಕ್, ಪಕ್ಷದ ಅಂತರಿಕ ಮೌಲ್ಯಮಾಪನದ ಮೇಲೆ ಟಿಕೆಟ್ ಫೈನಲ್ ಮಾಡಲಾಗಿದೆ. ನಮೋ ಆಯಪ್ ಮೂಲಕವೂ ಪ್ರತಿ ಕ್ಷೇತ್ರದಲ್ಲೂ ಮೂವರು ಜನಪ್ರಿಯ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಸ್ಥಳೀಯ ಜನರ ಆಸೆ, ಆಕಾಂಕ್ಷೆ ಈಡೇರಿಸುವ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಒತ್ತು ನೀಡಿದ್ದು, ಸಚಿವರಿಂದ ಲೋಕಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಎಂಪಿಗಳ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಿದೆ.

60-70 ಹಾಲಿ ಎಂಪಿಗಳಿಗೆ ಟಿಕೆಟ್​ ಮಿಸ್ :

ಬಿಜೆಪಿಯ ಹಾಲಿ 60-70 ಲೋಕಸಭಾ ಸದಸ್ಯರಿಗೆ ಈ ಭಾರಿ ಟಿಕೆಟ್ ಇಲ್ಲ ಎನ್ನಲಾಗಿದ್ದು, ಕಳಪೆ ಸಾಧನೆ, 75 ವರ್ಷ ದಾಟಿರುವುದು ಹಾಗೂ ಕ್ಷೇತ್ರದ ಅಭಿವೃದ್ದಿ ಕಡೆಗಣನೆ, ಜನರ ಜೊತೆ ಸ್ಪಂದಿಸದಿರುವುದು ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಹಾಲಿ ಸದಸ್ಯರಿಗೆ ಟಿಕೆಟ್ ಮಿಸ್ ಆಗಲಿದೆಯಂತೆ. ಕರ್ನಾಟಕದಲ್ಲೂ 75 ವರ್ಷ ದಾಟಿ ನಿವೃತ್ತಿ ಘೋಷಿಸಿರುವವರಿಗೆ ಟಿಕೆಟ್ ಇಲ್ಲ ಎನ್ನಲಾಗಿದೆ.

ಓಬಿಸಿಗಳಿಗೆ ಅತೀ ಹೆಚ್ಚು ಟಿಕೆಟ್ :

ಕಳೆದ ಭಾರಿ ಬಿಜೆಪಿಯಿಂದ 85 ಮಂದಿ ಓಬಿಸಿ ಅಭ್ಯರ್ಥಿಗಳಿಗೆ ಗೆಲುವು ಸಿಕ್ಕಿತ್ತು. ಹೀಗಾಗಿ ಈ ಭಾರಿ ಓಬಿಸಿ ಅಭ್ಯರ್ಥಿಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಿ ಮತ್ತೆ ಟಿಕೆಟ್ ನೀಡಲು ನಿರ್ಧಾರ ಮಾಡಲಾಗಿದೆಯಂತೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್, ಧರ್ಮೇಂದ್ರ ಪ್ರಧಾನ್, ಮನಸುಖ್ ಮಾಂಡವಿಯಾಗೆ ಟಿಕೆಟ್ ನೀಡಿ ಕಣಕ್ಕೆ ಇಳಿಸಲು ಹೈಕಮಾಂಡ್ ನಿರ್ಧಾರ ಮಾಡಿದೆಯಂತೆ.

4ನೇ ಬಾರಿಯ ಪರೀಕ್ಷಾರ್ಥಿಗೆ ಶುಭಾಶಯ ಕೋರಿ ಪ್ಲೆಕ್ಸ್ : ಕನ್ನಡ ಪರೀಕ್ಷೆಯಲ್ಲಿ ಜಯಶಾಲಿಯಾಗಿ ಬಾ.!

ಉತ್ತರ ಪ್ರದೇಶ ಸೇರಿದಂತೆ ದೇಶದಾದ್ಯಂತ ಯುವ ಮುಖಗಳಿಗೆ ಮಣೆ :

ವಿಶೇಷ ಎಂದರೇ ಈ ಬಾರಿ ಹೊಸ ಮುಖಗಳನ್ನು ಬಿಜೆಪಿ ಲೋಕಸಭಾ ಚುನಾವಣಾ ಅಖಾಡಕ್ಕಿಳಿಸಲಿದೆಯಂತೆ. ಉತ್ತರ ಪ್ರದೇಶದ 60 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆಸಿದ್ದು, ಇದರಂತೆ ಉತ್ತರ ಪ್ರದೇಶದಲ್ಲಿ 6 ಕ್ಷೇತ್ರಗಳನ್ನ ಮಿತ್ರಪಕ್ಷಗಳಿಗೆ ನೀಡಲು ನಿರ್ಧಾರ ಮಾಡಿದೆಯಂತೆ. ಆರ್‌.ಎಲ್‌.ಡಿ ಪಕ್ಷಕ್ಕೆ 2 ಸೀಟು, ಅಪ್ನಾ ದಳ ಪಕ್ಷಕ್ಕೆ 2 ಹಾಗೂ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷ ಹಾಗೂ ನಿಶಾದ್ ಪಕ್ಷಕ್ಕೆ ತಲಾ ಒಂದು ಕ್ಷೇತ್ರ ನೀಡಲಿದೆಯಂತೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಬಿಜೆಪಿ-ಆರ್‌.ಎಲ್.ಡಿ ಮೈತ್ರಿಕೂಟದ ಬಗ್ಗೆ ಅಂದು ಅಧಿಕೃತ ಘೋಷಣೆ ಮಾಡಿದೆ. (ಎಜೇನ್ಸಿಸ್)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img