Thursday, April 25, 2024
spot_img
spot_img
spot_img
spot_img
spot_img
spot_img

ಮದುವೆ ಆದ ಕೆಲ ತಿಂಗಳಲ್ಲಿಯೇ ನಟಿಯ ಕಳ್ಳಾಟ ; ಗಂಡನಿಗೆ ಬಿಗ್ Shock.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಪತ್ನಿಯ ಬೆಡ್‌ರೂಮ್ ಕಬೋರ್ಡ್‌ (Cupboard) ನಲ್ಲಿ ಕಾಂಡೋಮ್ಸ್ ಪ್ಯಾಕೆಟ್ ನೋಡಿದ ಗಂಡ ಶಾಕ್‌ಗೆ ಒಳಗಾಗಿದ್ದು, ಈ ಬಗ್ಗೆ ಪತಿ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿದ್ದಾರೆ.

ಅನೇಕ ಸಿನಿಮಾ ಹಾಗೂ ಧಾರಾವಾಹಿ ಕಲಾವಿದರು ಪ್ರೀತಿ, ಮದುವೆ, ವಿವಾಹ ವಿಚ್ಛೇದನ ಹಾಗೂ ಅನೈತಿಕ ಸಂಬಂಧ (Immoral relationship) ಹೀಗೆ ಹತ್ತು ಹಲವು ಕಾರಣಗಳಿಂದ ಜೀವನದಲ್ಲಿ ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ಈ ಸಾಲಿಗೆ ಇದೀಗ ತೆಲುಗು ಧಾರಾವಾಹಿಯ ಖ್ಯಾತ ನಟಿಯೂ ಕೂಡ ಇಂತಹದೇ ಕೌಟುಂಬಿಕ ಸಮಸ್ಯೆಗೆ ಸಿಲುಕಿದ್ದಾಳೆ.

ಭಾರತೀಯ ರೈಲ್ವೆ : SSLC ಆದವರಿಗೆ ಉದ್ಯೋಗವಕಾಶ ; ಇಂದೇ ಅರ್ಜಿ ಸಲ್ಲಿಸಿ.!

ಆ ನಟಿಯೇ ತೆಲುಗು ಜನಪ್ರಿಯ ಕಿರುತೆರೆ ಧಾರಾವಾಹಿ ನಟಿ ಐಶ್ವರ್ಯ ಅಡ್ಡಾಳ (Actress Aishwarya Addala). ಈ ನಟಿ ತನ್ನನ್ನು ಮದುವೆಯಾಗಿ ಮೋಸ ಮಾಡಿದ್ದಾರೆ ಎಂದು ನಟಿಯ ಪತಿ  ಶ್ಯಾಮ್ ಕುಮಾರ್ ಮಾಧ್ಯಮದ ಮುಂದೆ ಹೇಳಿದ್ದು, ನನ್ನ ಬಳಿ 25 ಲಕ್ಷ ರೂ. ಪಡೆದುಕೊಂಡು ಈಗ ನಿನ್ನಿಂದ ಡಿವೋರ್ಸ್‌ ಬೇಕು ಎಂದು ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪ ಮಾಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ಆರನೇ ತಾರೀಖಿ (06/09/2023) ನಂದು ಐಶ್ವರ್ಯಾಳನ್ನು ವಿವಾಹವಾದೆ ಎಂದು ಶ್ಯಾಮ್ ಕುಮಾರ್ ಹೇಳುತ್ತಾರೆ. ಮದುವೆ ನಂತರ ಇಬ್ಬರೂ ಒಟ್ಟಿಗೆ ಹೈದರಾಬಾದ್‌ಗೆ ಹೋದಾಗ ಆಕೆಯ ನಿಜ ಸ್ವರೂಪವನ್ನು ತಿಳಿಯಿತೆಂದು ಪತಿ ಹೇಳಿದ್ದಾರೆ. ಐಶ್ವರ್ಯಾ ಅಕ್ರಮ ಸಂಬಂಧದ ಕುರಿತ ವಿಡಿಯೋ ಮತ್ತು ಆಡಿಯೋ ದಾಖಲೆಗಳಿವೆ.

ಬೆಳಿಗ್ಗೆ ರಾಗಿ ಅಂಬಲಿ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?

ಅವರ ದಾಂಪತ್ಯ 3 ತಿಂಗಳು ಸರಿಯಾಗಿ ನಡೆಯಲಿಲ್ಲ. ತನ್ನ ಪತ್ನಿಯೇ ತನಗೆ ಕಿರುಕುಳ ನೀಡುತ್ತಿದ್ದಾಳೆ, ನನ್ನಿಂದ ಹಣ ಪಡೆದು ವಿಚ್ಛೇದನ ಕೇಳುತ್ತಿದ್ದಾಳೆ ಎಂದು ಶ್ಯಾಮ್ ಕುಮಾರ್ ಮಾಧ್ಯಮಗಳ ಮುಂದೆ ಬಂದಿದ್ದಾರೆ.  ಈ ಕ್ರಮದಲ್ಲಿ ರಿಯಲ್ ಎಸ್ಟೇಟ್ (Real estate) ಉದ್ಯಮಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ. ಅವರಿಬ್ಬರಿಗೂ ಸಂಬಂಧಿಸಿದ ಫೋಟೋಗಳು ಮತ್ತು ಸಂದೇಶಗಳು ಕೂಡ ಪತ್ತೆಯಾಗಿವೆ ಎಂದು ಶ್ಯಾಮ್ ಕುಮಾರ್ ಹೇಳುತ್ತಾರೆ.

ಅಲ್ಲದೇ ಅವರಿಬ್ಬರೂ ಬೆಡ್‌ರೂಮಿನಲ್ಲಿ ಒಟ್ಟಿಗೆ ಇರುವುದನ್ನು ನೋಡಿದ್ದೇನೆ. ಅವಳಿಂದ ನನಗೆ ತುಂಬಾ ಅನ್ಯಾಯವಾಗಿದ್ದು,  ನ್ಯಾಯ ದೊರಕಿಸಿ ಕೊಡಿ ಎಂದು ಶ್ಯಾಮ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಜನಪ್ರಿಯ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಟಿವಿ ಧಾರಾವಾಹಿಯಲ್ಲಿ ಐಶ್ವರ್ಯಾ ನಟಿಸುತ್ತಿದ್ದಾರೆ. ಧಾರಾವಾಹಿಗಳ ಜೊತೆಗೆ ಹಲವು ಸಿನಿಮಾಗಳಲ್ಲಿ ಕೆಲವು ಪಾತ್ರಗಳನ್ನೂ ಮಾಡಿದ್ದಾರೆ. ತೇತಿಯ ಗಾರು, ಪಲುಕೆ ಬಂಗಾರಮಾಯೆನಾ, ಅಲ ವೈಕುಂಠಪುರಂ, ಅತ್ತಾರಿಂಟಿಕಿ ದಾರೇದಿ ಮುಂದಾದವುಗಳಿಂದ ನಟಿ ಐಶ್ವರ್ಯಾ ಅಡ್ಡಾಳ ಖ್ಯಾತಿ ಪಡೆದಿದ್ದಾರೆ. (ಎಜೇನ್ಸಿಸ್)

spot_img
spot_img
spot_img
- Advertisment -spot_img