Saturday, July 27, 2024
spot_img
spot_img
spot_img
spot_img
spot_img
spot_img

ಬೆಳಿಗ್ಗೆ ರಾಗಿ ಅಂಬಲಿ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ರಾಗಿ (Ragi) ತಿಂದವ ಯೋಗಿ ಎನ್ನುವ ಮಾತಿನಂತೆ ರಾಗಿ ನಮ್ಮ ಪುರಾತನ ಆಹಾರ ಧಾನ್ಯಗಳಲ್ಲಿ ಒಂದಾಗಿದೆ ಅತಿ ಹೆಚ್ಚು ಪೋಷಕಾಂಶಗಳನ್ನು (nutrients) ಒಳಗೊಂಡಿರುವ ಇದನ್ನು ಸೇವಿಸಿದರೆ ನಮ್ಮ ದೇಹವು ಸದಾಕಾಲ ಸಮೃದ್ಧತೆಯಿಂದ ಕೂಡಿರುತ್ತದೆ.

ರಾಗಿ ಮಾಲ್ಟ್‌ನಲ್ಲಿ ಬಿ ಕಾಂಪ್ಲೆಕ್ಸ್ ವಿಟಮಿನ್‌ಗಳಾದ ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್ ಮತ್ತು ಫೋಲಿಕ್ ಆಮ್ಲಗಳು ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ರಂಜಕವು ಅಧಿಕವಾಗಿದೆ. ಒಂದು ಕಪ್ ರಾಗಿ ಮಾಲ್ಟ್ (malt) (144 ಗ್ರಾಂ) ಹಿಟ್ಟು 472 ಕ್ಯಾಲೋರಿಗಳು, 10.5 ಗ್ರಾಂ ಪ್ರೋಟೀನ್, 103 ಗ್ರಾಂ ಕಾರ್ಬ್ಸ್ ಮತ್ತು 1.87% ಕೊಬ್ಬನ್ನು ಹೊಂದಿರುತ್ತದೆ.

ಇನ್ನೂ ರಾಗಿ ಅಂಬಲಿಯನ್ನು ಬೆಳಿಗ್ಗೆ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು (benefits) ಅಂತ ತಿಳಿಯೋಣ ಬನ್ನಿ.

ಇದನ್ನು ಓದಿ : ಬೆಳಿಗ್ಗೆ ಎಷ್ಟು ನಿಮಿಷ ವಾಕಿಂಗ್ ಮಾಡುವುದು ಒಳ್ಳೆಯದು.?

ಬೆಳಗ್ಗೆ ತಿಂಡಿಯ ಬದಲು ರಾಗಿ ಅಂಬಲಿ ಕುಡಿಯುವುದರಿಂದ ನಿಮ್ಮ ದೈಹಿಕ ಸಾಮರ್ಥ್ಯ (Physical fitness) ಹೆಚ್ಚುತ್ತದೆ. ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಜಾಸ್ತಿಯಾಗಿದೆ. ರಾಗಿಯಲ್ಲಿರುವ ಫೈಬರ್ ಅಂಶವು 30%ರಷ್ಟು ಸ್ತನ ಕ್ಯಾನ್ಸರ್ (Breast cancer) ತಡೆಗಟ್ಟುವಲ್ಲಿ ಸಹಕಾರಿಯಾಗಿದೆ ಎಂದು ಹೇಳಲಾಗುತ್ತದೆ.

ಇದರಲ್ಲಿರುವ ಮೆಗ್ನೀಷಿಯಂ ಅಂಶವು ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲ ಹೃದಯಾಘಾತದಿಂದ ಉಂಟಾಗುವ ಪಾರ್ಶ್ವವಾಯುಗಳ (Paralysis) ಅಪಾಯವನ್ನು ತಗ್ಗಿಸುತ್ತದೆ.

ರಾಗಿಯಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳು ಆಕ್ಸಿಡೀಕರಣವನ್ನು (Oxidation) ತಡೆಯುತ್ತದೆ.

ರಾಗಿಯಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಬೇಕಾದ ಹಿಮೋಗ್ಲೋಬಿನ್ ಅಂಶವು ಜಾಸ್ತಿ ಇರುವುದರಿಂದ ರಕ್ತಹೀನತೆಯನ್ನು (anemia) ತಡೆಯುವಲ್ಲಿ ಸಹಕಾರಿಯಾಗಿದೆ.

ರಾಗಿಯಲ್ಲಿ ಕ್ವೆರ್ಸೆಟಿನ್, ಸೆಲೆನಿಯಮ್ ಮತ್ತು ಪ್ಯಾಂಟೋಥೆನಿಕ್ ಆಮ್ಲದ ಅಂಶಗಳಿರುವುದರಿಂದ ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸುವುದನ್ನು ತಡೆಗಟ್ಟುತ್ತದೆ.

ಕಡಿಮೆ ಫೈಬರ್‌ಯುಕ್ತ ಆಹಾರದ ಸೇವನೆಯಿಂದಾಗಿ ಅತಿಸಾರ, ಮಲಬದ್ಧತೆ, ಗ್ಯಾಸ್ ಮುಂತಾದ ಜೀರ್ಣಕಾರಿ ಸಮಸ್ಯೆಯಾಗುತ್ತದೆ. ರಾಗಿಯಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು (Digestive process) ನಿಯಂತ್ರಿಸುತ್ತದೆ.

ರಾಗಿ ಅಂಬಲಿಯನ್ನ ನಿಯಮಿತವಾಗಿ ಸೇವಿಸಿದಾಗ ಆತಂಕ, ಖಿನ್ನತೆ ಮತ್ತು ನಿದ್ರಾಹೀನತೆ ಸಮಸ್ಯೆಗಳಿಗೆ ಅತ್ಯಂತ ಉಪಯುಕ್ತವಾಗಿದೆ.

ರಾಗಿಯಲ್ಲಿ ಕ್ಯಾಲ್ಸಿಯಂ (calcium) ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಮೂಳೆಗಳಿಗೆ ಹೆಚ್ಚು ಬಲವನ್ನು ತಂದುಕೊಡುತ್ತದೆ. ಮುಖ್ಯವಾಗಿ ಬೆಳೆಯುವ ಮಕ್ಕಳಿಗೆ, ವೃದ್ಧರಿಗೆ ರಾಗಿ ತುಂಬಾ ಉಪಯೋಗ.

ಇದನ್ನು ಓದಿ : Health : ಬೇಸಿಗೆಯಲ್ಲಿ ಕಬ್ಬಿನ ರಸ ಕುಡಿಯುವುದರಿಂದ ಆಗುವ ಪ್ರಯೋಜನಗಳು.!

ಇದರಲ್ಲಿರುವ ಕ್ವೆರ್ಸೆಟಿನ್ (Quercetin) ಎಂಬ ಅಂಶವು ವಿಷ ಆಮ್ಲದ ವಿರುದ್ಧ ಹೋರಾಡಿ ಅದು ನಮ್ಮ ದೇಹದಲ್ಲಿ ಉತ್ಪತ್ತಿ ಆಗದಂತೆ ತಡೆಯುತ್ತದೆ.

ರಾಗಿ ಮಾಲ್ಟ್‌ನಲ್ಲಿ ವಿಟಮಿನ್ ಇ ಕೂಡ ಇದೆ, ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img