Thursday, April 25, 2024
spot_img
spot_img
spot_img
spot_img
spot_img
spot_img

Lokayukta : ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಇಬ್ಬರು ಲೋಕಾಯುಕ್ತ ಬಲೆಗೆ.!

spot_img

ಜನಸ್ಪಂದನ ನ್ಯೂಸ್, ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು (Hanur) ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಇಬ್ಬರು ಲೋಕಾಯುಕ್ತರು (Lokayukta) ಬೀಸಿದ ಬಲೆಗೆ ಬಿದ್ದಿದ್ದಾರೆ.

ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ (Block Education Officer) ಶಿವರಾಜು ಹಾಗೂ ಸಿಆರ್‌ಪಿ ಮುನಿರಾಜು ಎಂಬುವವರು ಲೋಕಾಯುಕ್ತ ಬಿದ್ದಿದ್ದಾರೆ.

ಇದನ್ನು ಓದಿ : ಬಿಜೆಪಿ 2ನೇ ಪಟ್ಟಿ ಪ್ರಕಟ : ಕರ್ನಾಟಕದಲ್ಲಿ 20 ಕ್ಷೇತ್ರಗಳಿಗೆ ಟಿಕೆಟ್ ಪ್ರಕಟ.!

ಹನೂರು ತಾಲ್ಲೂಕಿನ ತೋಮಿಯರ್‌ ಪಾಳ್ಯದ ಅನುದಾನಿತ ಪ್ರೌಢಶಾಲೆಯಲ್ಲಿ (aided highschool) ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಿಕ್ಷಕರೊಬ್ಬರಿಗೆ 139 ದಿನಗಳ ಗಳಿಕೆ ರಜೆಯ ಹಣ ₹3 ಲಕ್ಷ ಬರಬೇಕಾಗಿತ್ತು.

ಶಿಕ್ಷಣಾಧಿಕಾರಿ ಶಿವರಾಜು ಮತ್ತು ಸಿಆರ್‌ಪಿ ಮುನಿರಾಜು ಗಳಿಕೆ ರಜೆ ಮಂಜೂರು ಮಾಡಲು ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಹೀಗಾಗಿ ನಿವೃತ್ತ ಶಿಕ್ಷಕರು ಲೋಕಾಯುಕ್ತ ಪೊಲೀಸರಿಗೆ ದೂರು (complaint) ನೀಡಿದ್ದರು.

ಇದನ್ನು ಓದಿ : Lokayukta : ವಾಣಿಜ್ಯ ತೆರಿಗೆ ಅಧಿಕಾರಿ ಲೋಕಾಯುಕ್ತ ಬಲೆಗೆ.!

ಇಂದು ಲಂಚದ ಹಣ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು, ಇಬ್ಬರನ್ನೂ ಬಂಧಿಸಿ (arrested), ₹15 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.

spot_img
spot_img
spot_img
- Advertisment -spot_img