Saturday, July 27, 2024
spot_img
spot_img
spot_img
spot_img
spot_img
spot_img

ಭಾರತೀಯ ರೈಲ್ವೆ : SSLC ಆದವರಿಗೆ ಉದ್ಯೋಗವಕಾಶ ; ಇಂದೇ ಅರ್ಜಿ ಸಲ್ಲಿಸಿ.!

spot_img

ಜನಸ್ಪಂದನ ನ್ಯೂಸ್, ನೌಕರಿ :  ಭಾರತೀಯ ರೈಲ್ವೆ ಮಂಡಳಿ (RRB) ವತಿಯಿಂದ ಪ್ರತಿ ವರ್ಷ ಕೂಡ ನೇಮಕಾತಿ ನಡೆಯುತ್ತದೆ. ದೇಶದ ಲಕ್ಷಾಂತರ ಸರ್ಕಾರಿ ಹುದ್ದೆ ಆಕಾಂಕ್ಷಿಗಳು ಈ ನೇಮಕಾತಿ ಅಧಿಸೂಚನೆಗಾಗಿ ಕಾಯುತ್ತಿರುತ್ತಾರೆ. ಈಗ ಇವರೆಲ್ಲರಿಗೂ ಸಿಹಿ ಸುದ್ದಿ ಇದೆ ಅದೇನೆಂದರೆ, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ (Recruitment) ಅರ್ಹರಿದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.

ನೋಟಿಫಿಕೇಷನ್ ಗಳಲ್ಲಿ ಕೇಳಲಾಗಿರುವ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ನಾವು ಸಹ ಈ ಅಂಕಣದಲ್ಲಿ ನೇಮಕಾತಿ ಕುರಿತ ಪ್ರಮುಖ ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ.

ವಿದ್ಯಾರ್ಥಿಗಳಿಗೆ ಸಿಗಲಿದೆ ರೂ.30,000 ಸ್ಕಾಲರ್ಶಿಪ್ ; ಈಗಲೇ ಅರ್ಜಿ ಸಲ್ಲಿಸಿ.!

ನೇಮಕಾತಿ ಇಲಾಖೆ : ಭಾರತೀಯ ರೈಲ್ವೆ ಇಲಾಖೆ.
ಹುದ್ದೆ ಹೆಸರು : ಟೆಕ್ನಿಷಿಯನ್.
ಒಟ್ಟು ಹುದ್ದೆಗಳ ಸಂಖ್ಯೆ : 9144 ಹುದ್ದೆಗಳು.
ಹುದ್ದೆಗಳ ವಿವರ :
* ಟೆಕ್ನಿಷಿಯನ್ (ಗ್ರೇಡ್ 1) ಸಿಗ್ನಲ್ : 1092.
* ಟೆಕ್ನಿಷಿಯನ್ (ಗ್ರೇಡ್ 3) : 8052.

ಉದ್ಯೋಗ ಸ್ಥಳ :
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಭಾರತದಾದ್ಯಂತ ಯಾವುದೇ ಸ್ಥಳದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.

ವೇತನ ಶ್ರೇಣಿ :
* ಟೆಕ್ನಿಷಿಯನ್ (ಗ್ರೇಡ್-1) ಸಿಗ್ನಲ್ : ರೂ.29200 ರಿಂದ ಆರಂಭ.
* ಟೆಕ್ನಿಷಿಯನ್ (ಗ್ರೇಡ್ 3) : ರೂ.19900 ರಿಂದ ಆರಂಭ.
* ಇತರೆ ಸರ್ಕಾರಿ ಸೌಲಭ್ಯಗಳು ಸಿಗುತ್ತವೆ.

ಶೈಕ್ಷಣಿಕ ವಿದ್ಯಾರ್ಹತೆ :
* ಟೆಕ್ನಿಷಿಯನ್ (ಗ್ರೇಡ್-1) ಸಿಗ್ನಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ B.Sc (ಫಿಸಿಕ್ಸ್/ ಇಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮೆಷನ್ ಟೆಕ್ನಾಲಜಿ/ ಇನ್ಟ್ರುಮೆಂಟೆಂಷನ್) ಅಥವಾ ಡಿಪ್ಲೊಮಾ (ಇಂಜಿನಿಯರಿಂಗ್) ಉತ್ತೀರ್ಣರಾಗಿರಬೇಕು.

* ಟೆಕ್ನಿಷಿಯನ್ (ಗ್ರೇಡ್-3) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿಯಿಂದ SSLC ಜೊತೆಗೆ ಆಯಾ ಟ್ರೇಡ್‌ಗಳಲ್ಲಿ ITI ಕೂಡ ಉತ್ತೀರ್ಣರಾಗಿರಬೇಕು.

PUC ಆದವರು KEA ಮ್ಯಾನೇಜರ್ ಗ್ರೇಡ್-III ಮೇಲ್ವಿಚಾರಕೇತರ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿ.

ವಯೋಮಿತಿ :

* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು.
* ಟೆಕ್ನಿಷಿಯನ್ (ಗ್ರೇಡ್-1) ಸಿಗ್ನಲ್ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 36 ವರ್ಷಗಳು.
* ಟೆಕ್ನಿಷಿಯನ್ (ಗ್ರೇಡ್ 3) ಹುದ್ದೆಗಳಿಗೆ ಗರಿಷ್ಠ ವಯೋಮಿತಿ 33 ವರ್ಷಗ‌ಳು.

ವಯೋಮಿತಿ ಸಡಿಲಿಕೆ :
* SC/ST ಅಭ್ಯರ್ಥಿಗಳಿಗೆ 05 ವರ್ಷಗಳು.
* OBC ಅಭ್ಯರ್ಥಿಗಳಿಗೆ 03 ವರ್ಷಗಳು.
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು.

ಅರ್ಜಿ ಸಲ್ಲಿಸುವ ವಿಧಾನ :
* RRB ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ, ನೋಟಿಫಿಕೇಶನ್ ಓದಿಕೊಂಡು ಅರ್ಥೈಸಿಕೊಳ್ಳಿ.
* ಅರ್ಜಿ ಸಲ್ಲಿಸಲು ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಸ್ವ ವಿವಗಳನ್ನು ಭರ್ತಿ ಮಾಡಿ ಕೇಳಲಾಗುವ ಪೂರಕ  ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅಥವಾ ಅವುಗಳ ಸಂಖ್ಯೆ ನಮೂದಿಸಿ.
* ಅರ್ಜಿ ಸಲ್ಲಿಕೆ ಒಮ್ಮೆಲೆ ಯಶಸ್ವಿಯಾದ ಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ.

ಅರ್ಜಿ ಶುಲ್ಕ :
* ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್/UPI ಆಧಾರಿತವಾಗಿ ಶುಲ್ಕ ಪಾವತಿಸಬಹುದು.
* SC/ST, ಮಾಜಿ ಸೈನಿಕ, ಮಹಿಳಾ, ತೃತೀಯ ಲಿಂಗಿಗಳು, ಅಲ್ಪಸಂಖ್ಯಾತ, EBC ಅಭ್ಯರ್ಥಿಗಳಿಗೆ – ರೂ.250
* ಉಳಿದ ಅಭ್ಯರ್ಥಿಗಳಿಗೆ – ರೂ.500.
* ಅರ್ಜಿ ಸಲ್ಲಿಕೆ ಯಶಸ್ವಿಯಾದ ಮೇಲೆ ತಪ್ಪದೆ ಇ-ರಶೀದಿ ಪಡೆದುಕೊಳ್ಳಬೇಕು.

Video : ಎಲ್ಲಿದ್ರೂ ಬಿಡಲ್ಲ ನಮ್ ಜನ ; ಕೊನೆಗೂ ಪತ್ತೇಯಾಗಿಯೇ ಬಿಡ್ತು ಕರಿಮಣಿ ಮಾಲೀಕನ ಊರು.

ಆಯ್ಕೆ ವಿಧಾನ :
* ಕಂಪ್ಯೂಟರ್ ಆಧಾರಿತ ಪರೀಕ್ಷೆ.
* ದಾಖಲೆಗಳ ಪರಿಶೀಲನೆ.
* ವೈದ್ಯಕೀಯ ಪರೀಕ್ಷೆ.
* ಸಂದರ್ಶನ.

ಕಂಪ್ಯೂಟರ್ ಆಧಾರಿತ ಪರೀಕ್ಷೆ :
* ದಾಖಲೆಗಳ ಪರಿಶೀಲನೆ.
* ವೈದ್ಯಕೀಯ ಪರೀಕ್ಷೆ.
* ಸಂದರ್ಶನ.

ಪ್ರಮುಖ ದಿನಾಂಕಗಳು :
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 09 ಮಾರ್ಚ್, 2024.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08 ಏಪ್ರಿಲ್, 2024.

spot_img
spot_img
- Advertisment -spot_img