ಜನಸ್ಪಂದನ ನ್ಯೂಸ್, ಬಳ್ಳಾರಿ : ಎಳ್ಳ ಅಮವಾಸ್ಯೆ ದಿನವಾದ ಇಂದು (ದಿ.30) ಬಳ್ಳಾರಿ ನಗರದ ಜನತೆಯನ್ನೇ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.
ಬಳ್ಳಾರಿಯ ತುಂಬಿದ ಓಣಿಯಲ್ಲಿ ಜನರನ್ನು ಭಯ ಬೀಳುವ ರೀತಿಯಲ್ಲಿ ತುಂಬಿದ ವಾಮಾಚಾರ ಮಾಡಲಾಗಿದ್ದು, ಸ್ಥಳದಲ್ಲಿ ನಾಲ್ಕು ತಲೆಬುರುಡೆ, ಹತ್ತಾರು ಎಲುಬುಗಳನ್ನು ಮುಂದಿಟ್ಟು, ಕೂದಲು ಸುಟ್ಟು ಮುಂದೆ ದೀಪ ಹಚ್ಚಿಟ್ಟು ಪೂಜೆ ಮಾಡಲಾಗಿದೆ.
Read it : ಲೇಡಿ ಕಾನ್ಸ್‌ಟೇಬಲ್ ಜೊತೆ ಚಕ್ಕಂದ; ಪತ್ನಿ ಕೈಗೆ ಸಿಕ್ಕಿ ಬಿದ್ದ PSI.!
ಈ ಎಳ್ಳಮವಾಸ್ಯೆ ದಿನದಂದು ವಾಮಾಚಾರ ಮಾಡಿದ್ದು, ಇಡೀ ಏರಿಯಾ ಜನರು ವಾಮಾಚಾರದ ದೃಶ್ಯ ಕಂಡು ಭಯ ಬಿದ್ದಿದ್ದಾರೆ. ಅಷ್ಟೆ ಅಲ್ಲಾ ತಮ್ಮ ಮನೆಯನ್ನು ಒಂದಷ್ಟು ದಿನಗಳ ಕಾಲ ಇಲ್ಲಿಂದ ಜಾಗ ಖಾಲಿ ಮಾಡಲು ಮುಂದಾಗಿದ್ದಾರೆ.
ವಾಟರ್ ಟ್ಯಾಂಕ್ ಇರೋ ಜಾಗದಲ್ಲಿಯೇ ವಾಮಾಚಾರ ಮಾಡಿದ ಹಿನ್ನೆಲೆಯಲ್ಲಿ ಇಲ್ಲಿಂದ ಯಾರು ನೀರು ತೆಗೆದುಕೊಂಡು ಹೋಗುತ್ತಿಲ್ಲ. ಈ ಸ್ಥಳದ ಪಕ್ಕದಲ್ಲಿಯೇ ಅಂಗನವಾಡಿ ಶಾಲೆಯೂ ಇದ್ದು, ಇಲ್ಲಿಗೆ ಮಕ್ಕಳನ್ನು ಕೂಡ ಕಳುಹಿಸುತ್ತಿಲ್ಲ.
ಈಗ ವಾಮಾಚಾರ ಮಾಡಿರುವ area ದಲ್ಲಿ ಹೀಗೆ ಪದೇ ಪದೇ ಕೆಲವು ದುಷ್ಕರ್ಮಿಗಳು ವಾಮಾಚಾರ ಮಾಡುತ್ತಿರುವ ಪರಿಣಾಮದದಂದ ಮಹಿಳೆಯರು, ಮಕ್ಕಳು ಸೇರಿದಂತೆ ಇಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ.
Read it : ಹಣ ಪಡೆದ ಆರೋಪ ; ರೈಲ್ವೆ ಟಿಕೆಟ್ ಮುಖ್ಯ ಇನ್ಸ್‌ಪೆಕ್ಟರ್ Arrest.!
ವಾಮಾಚಾರ ಮಾಡಿರುವ ಏರಿಯಾದಲ್ಲಿ ಕೂಡಲೇ ಸಿಸಿಟಿವಿ ಕ್ಯಾಮರಾ ಅಳವಡಿಸಿ ಪೊಲೀಸ್ ಗಸ್ತು ಹೆಚ್ಚಿಸಬೇಕು. ಆಗ ಮಾತ್ರ ವಾಮಾಚಾರದಂತಹ ಕೆಲಸಗಳನ್ನು ತಪ್ಪಿಸಬಹುದೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಬ್ರೂಸ್ ಪೇಟೆ ಪೊಲೀಸರು ವಾಮಾಚಾರದ ವಸ್ತುಗಳನ್ನು ತೆರವುಗೊಳಿಸಿದ್ದಾರೆ.