ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಜನರ ಗಲಾಟೆ, ಕಿತ್ತಾಟದ (Uproar, bickering) ವಿಡಿಯೋಗಳು ಸಿಗುತ್ತವೆ. ಅದರಲ್ಲಿಯೂ ಯುವಕ ಯುವತಿಯರ ವಿಡಿಯೋಗಳು ಸಾಕಷ್ಟು ಸದ್ದು ಮಾಡುತ್ತಿರುತ್ತವೆ. ಸದ್ಯ ಇಂತದ್ದೊಂದು ವಿಡಿಯೋ ವೈರಲ್ ಆಗುತ್ತಿದೆ.
ಇಬ್ಬರು ಬಾಲಕಿಯರು ಒಬ್ಬ ಹುಡುಗನಿಗಾಗಿ ಪರಸ್ಪರ ಕೈ ಕೈ ಮಿಲಾಯಿಸುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ (Baghpat in Uttar Pradesh) ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Read it : ಮಗಳ ಮೇಲೆ ಅ*ಚಾ*ಕ್ಕೆ ಯತ್ನ; ಗಂಡನನ್ನು ತುಂಡು ತುಂಡು ಮಾಡಿದ ಪತ್ನಿ.!
ಬಾಗ್‌ಪತ್‌ನಲ್ಲಿರುವ ಪ್ರೌಢಶಾಲೆಯ ಹತ್ತನೇ ತರಗತಿಯ ಇಬ್ಬರು ಬಾಲಕಿಯರು (Two female students of class 10 of high school) ಒಂದೇ ಹುಡುಗನನ್ನು ಲವ್ ಮಾಡುತ್ತಿದ್ದರು. ಈ ವಿಷಯ ಗೊತ್ತಿಲ್ಲದೇ ಆತ ಇಬ್ಬರು ಹುಡುಗಿಯರ ಪೈಕಿ ಪೈಕಿ ಒಬ್ಬಳ ಬಳಿ ಮಾತನಾಡಿದ್ದಾನೆ. ಇದನ್ನು ಕಂಡು ಕೋಪಗೊಂಡ (angry) ಮತ್ತೋರ್ವ ಬಾಲಕಿ ಆಕೆಯೊಂದಿಗೆ ಜಗಳಕ್ಕಿಳಿದಿದ್ದಾಳೆ.
ಇಬ್ಬರ ನಡುವೆ ರಸ್ತೆಯಲ್ಲಿ ಮಾತಿಗೆ ಮಾತು ಬೆಳೆದು, ಇಬ್ಬರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಪರಸ್ಪರ ಗುದ್ದಾಡಿಕೊಂಡು, ರಂಪಾಟ (Fisting, rampage) ಮಾಡಿದ್ದಾರೆ. ಇವರಿಬ್ಬರನ್ನು ಬಿಡಿಸಲು ಇತರ ಗೆಳತಿಯರು ಹರಸಾಹಸ ಪಟ್ಟರು. ಬಳಿಕ ರೋಡಿನಲ್ಲಿ ತೆರಳುತ್ತಿದ್ದವರು ಕೂಡಲೇ ಮದ್ಯ ಪ್ರವೇಶಿಸಿ ಇವರಿಬ್ಬರ ಜಗಳ ಬಿಡಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
Read it : ಬೆಳಗಾವಿ : ಠಾಣೆಯಲ್ಲಿ ಡ್ಯೂಟಿ ಬದಲಾಯಿಸಿದಕ್ಕೆ constable ಆತ್ಮಹತ್ಯೆ ಡ್ರಾಮಾ.!
ಈ ಘಟನೆಗೆ ಸಂಬಂಧಪಟ್ಟಂತೆ ಹುಡುಗಿಯರ ಗುದ್ದಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ವಿಡಿಯೋದ ಕುರಿತು ಸತ್ಯಾಸತ್ಯತೆ ಗೊತ್ತಾಗಿಲ್ಲ.
उत्तर प्रदेश के बागपत में एक हैरान कर देने वाला वीडियो सामने आया है. वीडियो में देख जा सकता है कि लड़कियां व्यस्त रोड के बीच में आपस में झगड़ रही हैं दे रही हैं. बागपत में बॉयफ्रेंड को लेकर छात्राओं के बीच महाभारत देखने को मिला है. कस्बा में नगर सराय में स्कूल से घर वापस लौट रही… pic.twitter.com/YmRSU7xvW5
— News11 Bharat (@news11bharat) January 2, 2025
ಹಿಂದಿನ ಸುದ್ದಿ : Health : ಕಡಿಮೆ ಮಾತ್ರವಲ್ಲ, ನೀರು ಹೆಚ್ಚು ಕುಡಿಯುವುದು ಒಳ್ಳೆಯದಲ್ಲ; ಯಾಕೆ ಗೊತ್ತಾ?
ಜನಸ್ಪಂದನ ನ್ಯೂಸ್, ಡೆಸ್ಕ್ : ನಮ್ಮ ದೇಹಕ್ಕೆ ನೀರು ಅತ್ಯಗತ್ಯವಾಗಿದೆ. ದಿನವೂ ಕನಿಷ್ಠ 2-3 ಲೀಟರ್ ನೀರು ಕುಡಿಯಬೇಕು (Drink at least 2-3 liters of water). ಆದರೆ ಮಳೆಗಾಲ, ಚಳಿಗಾಲದಲ್ಲಿ ಅಷ್ಟು ನೀರು ಕುಡಿಯಲು ಕಷ್ಟಸಾಧ್ಯ. ಇದರಿಂದ ದೇಹದಲ್ಲಿ ನೀರಿನ ಕೊರತೆ ಕಾಡುತ್ತದೆ..
ಇನ್ನೂ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಡೀಹೈಡ್ರೇಷನ್ ಸಮಸ್ಯೆ (Dehydration is a problem) ಉಂಟಾಗುತ್ತದೆ. ಆದರೆ ನಿಮಗ ಗೊತ್ತಾ.? ಹೆಚ್ಚು ನೀರು ಕುಡಿದರೂ ಸಹ ಜೀವಕ್ಕೆ ಕುತ್ತು ತರುತ್ತದೆ ಅಂತ.
ಹೌದು, ನೀರು ಕಡಿಮೆ ಕುಡಿಯುವ ಅಭ್ಯಾಸ ಎಷ್ಟು ಒಳ್ಳೆಯದಲ್ಲವೋ? ನೀರು ಜಾಸ್ತಿ ಕುಡಿಯುವುದು ಸಹ ಅಷ್ಟೇ ಒಳ್ಳೆಯದಲ್ಲ. ಇದರಿಂದ ವಾಟರ್ ಇನ್‌ಟಾಕ್ಸಿಕೇಷನ್ (Water intoxication) ಸಮಸ್ಯೆ ಎದುರಾಗುತ್ತದೆ.
ವಾಟರ್ ಇನ್‌ಟಾಕ್ಸಿಕೇಷನ್ ಅಂದರೆ ನೀರಿನ ವಿಷ ಅಥವಾ Hyper Hydration ಎಂದರ್ಥ. ಕನ್ನಡದಲ್ಲಿ ಹೇಳಬೇಕೆಂದರೆ ನೀರಿನ ಅಮಲು (Water intoxication) ಎಂದರ್ಥ. ನಾವು ಕಡಿಮೆ ಟೈಮ್ ನಲ್ಲಿ ಹೆಚ್ಚಿನ ಪ್ರಮಾಣದ ನೀರು ಕುಡಿದರೆ, ಶರೀರದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ (Electrolyte imbalance) ಕಾರಣವಾಗುತ್ತದೆ.
ಇದರಿಂದಾಗಿ ನಮ್ಮ ಸಾಮಾನ್ಯ ಶಾರೀರಿಕ ಕ್ರಿಯೆಗಳಿಗೆ ಅಡ್ಡಿಯಾಗಿ (Impairment of physiological functions), ಜೀವಕ್ಕೆ ಮಾರಕವಾಗಬಹುದು. ದೇಹಕ್ಕೆ ನೀರು ಅಗತ್ಯವಿದೆ ಎಂದು ಹೆಚ್ಚು ನೀರು ಕುಡಿಯುವುದು ಕೂಡ ಸರಿಯಲ್ಲ ಎಂಬುದನ್ನು ತಿಳಿದಿರಬೇಕು.
ನಾವು ಮೂತ್ರ ಹಾಗೂ ಬೆವರಿನ ಮೂಲಕ ದೇಹದಿಂದ ಹೆಚ್ಚುವರಿ ನೀರನ್ನು (Excess water from the body through urine and sweat) ಹೊರಹಾಕಲಾಗುತ್ತದೆ. ಒಂದು ದಿನಕ್ಕೆ ಇದು ಸುಮಾರು 1-2 ಲೀಟರ್‌ಗಳಿಗೆ ಸಮ. ಆದರೆ, ಕೆಲ ಜನರು ಒಂದು ಅಥವಾ ಎರಡು ಗಂಟೆಯೊಳಗಡೆ 3 ರಿಂದ 4 ಲೀಟರ್ ನೀರು ಸೇವಿಸುತ್ತಾರೆ. ಈ ವೇಳೆ ವಾಟರ್ ಇನ್‌ಟಾಕ್ಸಿಕೇಷನ್ ಸಮಸ್ಯೆ ಕಾಡಿಸುತ್ತದೆ
ಹೈಪರ್ ಹೈಡ್ರೇಷನ್ ಲಕ್ಷಣಗಳು :
* ತಲೆನೋವು
* ವಾಂತಿ
* ಹೊಟ್ಟೆಯುಬ್ಬರ
* ತೂಕಡಿಕೆ
* ಕೈಗಳು, ಪಾದಗಳು ಮತ್ತು ಹೊಟ್ಟೆಯಲ್ಲಿ ತೀವ್ರವಾದ ಊತ
* ಸ್ನಾಯುವಿನ ನೋವು, ದೌರ್ಬಲ್ಯ (Muscle weakness) ಮತ್ತು ಸೆಳೆತ
* ಗೊಂದಲ ಮತ್ತು ತಲೆತಿರುಗುವಿಕೆ
ಮುನ್ನೆಚ್ಚರಿಕೆ ಕ್ರಮಗಳು :
ಬಾಯಾರಿಕೆ ನೀಗಿದ ನಂತರ ನೀರು ಕುಡಿಯುವುದನ್ನು ನಿಲ್ಲಿಸುವುದು ಉತ್ತಮ.
ವಾಕರಿಕೆ, ವಾಂತಿ, ಹೊಟ್ಟೆಯುಬ್ಬರವಿದ್ದರೆ (Stomach bloating) ನೀರು ಕುಡಿಯುವುದನ್ನು ನಿಲ್ಲಿಸಬೇಕು.
ಬಾಯಾರಿಕೆಯಾದ್ರೆ ಮಾತ್ರ ನೀರು ಕುಡಿಯಬೇಕು.
ನಿಮ್ಮನ್ನು ನೀವು ನೀರು ಕುಡಿಯುವಂತೆ ಒತ್ತಾಯಿಸುವುದನ್ನು ತಡೆಯುವುದು.