Saturday, January 18, 2025
HomeNewsಕೋಣದ DNA ಪರೀಕ್ಷೆಗೆ ಮುಂದಾದ ಕರ್ನಾಟಕ-ಆಂಧ್ರಪ್ರದೇಶ ಗ್ರಾಮಸ್ಥರು ; ಅಂತದ್ದೇನಾಯ್ತು ಗೊತ್ತಾ.?
spot_img

ಕೋಣದ DNA ಪರೀಕ್ಷೆಗೆ ಮುಂದಾದ ಕರ್ನಾಟಕ-ಆಂಧ್ರಪ್ರದೇಶ ಗ್ರಾಮಸ್ಥರು ; ಅಂತದ್ದೇನಾಯ್ತು ಗೊತ್ತಾ.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಬೊಮ್ಮನಹಾಳ್ ಗ್ರಾಮ ಮತ್ತು ನೆರೆಯ ಆಂಧ್ರಪ್ರದೇಶದ (Andrapradesh) ಮೆದಹಾಳ್ ಗ್ರಾಮಸ್ಥರ ನಡುವೆ ಗೂಳಿಯ ಕಾರಣದಿಂದಾಗಿ ಘರ್ಷಣೆ ಏರ್ಪಟ್ಟು, 2 ಗ್ರಾಮದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಬೊಮ್ಮನಹಾಳ್ ಮತ್ತು ಮೆದಹಾಳ್ ಗ್ರಾಮಸ್ಥರು ಗೂಳಿಯ ಡಿಎನ್‌ಎ ಪರೀಕ್ಷೆ ನಡೆಸಿ ಮಾಲೀಕತ್ವ ಪತ್ತೆ ಮಾಡಬೇಕು (DNA test should be done to find the ownership) ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಬೊಮ್ಮನಹಾಳ್ ಗ್ರಾಮಸ್ಥರು ತಮ್ಮೂರಿನ ಜಾತ್ರೆಯ ಸಂದರ್ಭದಲ್ಲಿ ಬಲಿ ನೀಡಲು ನಿರ್ಧರಿಸಿ 5 ವರ್ಷಗಳವರೆಗೆ ಐದು ವರ್ಷದ ಕೋಣವನ್ನು ಇತ್ತೀಚೆಗೆ ಬಿಟ್ಟಿದ್ದರು. ಆದರೆ ಕೆಲ ದಿನಗಳ ಹಿಂದೆ ಕೋಣವು ಬೊಮ್ಮನಹಾಳ್ ನಿಂದ ನಾಪತ್ತೆಯಾಗಿ (missing), ಮೆದಹಾಳ್ ನಲ್ಲಿ ಪತ್ತೆಯಾಗಿತ್ತು (detection) ಎಂದು ತಿಳಿದು ಬಂದಿದೆ.

ಇದನ್ನು ಓದಿ : ಖಾಲಿ ಇರುವ Anganwadi ಕಾರ್ಯಕರ್ತೆ/ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಈ ವಿಷಯ ತಿಳಿದ ಬೊಮ್ಮನಹಾಳ್‌ ಊರಿನ ಗುಂಪೊಂದು ಮೆದಹಾಳ್‌ಗೆ ಹೋಗಿ ಕೋಣವನ್ನು ತಮ್ಮೂರಿಗೆ ಒಯ್ಯಲು ಮುಂದಾದಾಗ ಗ್ರಾಮಸ್ಥರ ನಡುವೆ ಗಲಾಟೆ ನಡೆದು ಹಲವರು ಗಾಯಗೊಂಡಿದ್ದಾರೆ.

ಮೆದಹಾಳ್ ಬೊಮ್ಮನಹಾಳ್ ನಿಂದ 20 ಕಿ. ಮೀ ದೂರದಲ್ಲಿದ್ದು, ಇದೇ ಊರಲ್ಲಿ ಈಗ ಕೋಣವಿದೆ. ಕೋಣದ ತಾಯಿ ನಮ್ಮೂರಲ್ಲಿ ಇದೆ, ಹಾಗಾಗಿ ಆ ಕೋಣ ತಮಗೆ ಸೇರಿದ್ದು ಎಂಬುದು ಬೊಮ್ಮನಹಾಳ್ ಗ್ರಾಮಸ್ಥರ ವಾದ (Villagers argument). ಆದರೆ ಅದನ್ನು ಕಟ್ಟಿ ಹಾಕಿದ ಮೆದಹಾಳ್ ಜನರು ಈ ವಾದವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ.

ಕೊನೆಗೆ ಈ ಸಮಸ್ಯೆಗೆ ಪರಿಹಾರ ದೊರೆಯದೇ ಬೊಮ್ಮನಹಾಳ್ ಮತ್ತು ಮೆದಹಾಳ್ ಗ್ರಾಮಸ್ಥರು (Bommanahal and Medahal villagers) ಡಿಎನ್‌ಎ ಪರೀಕ್ಷೆ ನಡೆಸಿ ಗೂಳಿಯ ಪೋಷಕರನ್ನು ನಿರ್ಧರಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದಿನ ಸುದ್ದಿ : ಕುಡಿದ ಮತ್ತಲ್ಲಿ ಕಂಬವೇರಿ ವಿದ್ಯುತ್ ತಂತಿಗಳ ಮೇಲೆ ಮಲಗಿದ ಐನಾತಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಈತ ಕುಡುಕರಲ್ಲೇ ಮಹಾ ಕುಡುಕ ಇದ್ದಿರಬಹುದು. ಹೀಗಾಗಿ ಕುಡಿದ ನಶೆಯಲ್ಲಿ ಈ ವ್ಯಕ್ತಿ ಕಂಬ ಏರಿ ವಿದ್ಯುತ್ ತಂತಿಗಳ ಮೇಲೆ (On the power lines) ಮಲಗಿದ ಶಾಕ್ ತರಿಸುವ ವಿಡಿಯೋವೊಂದು ವೈರಲ್ ಆಗಿದೆ.

ಇದನ್ನು ಓದಿ : Special news : ಚಳಿಗಾಲದಲ್ಲಿ ನಿಮ್ಮ ಮುಖಕ್ಕೆ ಅಪ್ಪಿತಪ್ಪಿಯೂ ಇವುಗಳನ್ನು ಹಚ್ಚಿಕೊಳ್ಳಬೇಡಿ.!

ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ (Drunkenness) ವಿದ್ಯುತ್ ಕಂಬ ಏರುತ್ತಿರುವುದನ್ನು ಅಲ್ಲಿದ್ದ ಕೆಲ ಜನರು ದೂರದಿಂದಲೇ ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನೂ ಆಂಧ್ರಪ್ರದೇಶದ ಮಾನ್ಯಂ ಜಿಲ್ಲೆಯ (Manyam District of Andhra Pradesh) ಪಾಲಕೊಂಡ ಮಂಡಲದ ಎಂ. ಸಿಂಗಿಪುರಂನಲ್ಲಿ ಇಂತದ್ದೊಂದು ವಿಚಿತ್ರ ಘಟನೆ ನಡೆದಿದೆ. ಆದರೆ ವಿಡಿಯೋ ಎಷ್ಟು ಸತ್ಯ? ಎಂಬುದರ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.

ಕಂಬದ ಬಳಿಗೆ ಓಡಿದ ಆತ, ಮೇಲಕ್ಕೇರಿ ಹೋಗಿದ್ದಾನೆ.‌ ಅಲ್ಲಿದ್ದವರು ಎಷ್ಟು ಕೂಗಿದರೂ ಲೆಕ್ಕಿಸಲಿಲ್ಲ. ಮೇಲೆ ಹೋಗಿ ವಿದ್ಯುತ್ ತಂತಿಗಳ ಮೇಲೆ ಆರಾಮವಾಗಿ ಮಲಗಿಕೊಂಡಿದ್ದಾನೆ.

ಸ್ವಲ್ಪ ಹೊತ್ತು ಆತನಿಗೆ ಮೋಡಗಳಲ್ಲಿ ತೇಲಾಡುತ್ತಿರುವಂತೆ ಭಾಸವಾಗಿದೆ (Feeling of floating). ಎಲ್ಲರೂ ಅಲ್ಲಿಂದ ಕೆಳಗೆ ಬೀಳುತ್ತಾನೆ ಎಂದು ಟೆನ್ಷನ್ ಆಗಿರಬಹುದು.

ಇದನ್ನು ಓದಿ : ತೊಡೆ ಮೇಲೆ Girlfriend ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಕಾರು ಚಲಾಯಿಸಿದ ಯುವಕ.!

ಅವರು ಅವನನ್ನು ಕೆಳಗೆ ಇಳಿಯುವಂತೆ ಎಷ್ಟೇ ಕಿರುಚಿದರೂ (scream) ಆತ ಮಾತ್ರ ಯಾರೇ ಕೂಗಾಡಲಿ ಊರೇ ಹೋರಾಡಲಿ ಎಂದು ಪ್ರತಿಕ್ರಿಯಿಸದೇ ಹಾಗೆಯೇ ಮಲಗಿಕೊಂಡಿದ್ದ ಎಂದು ವರದಿಯಿಂದ ತಿಳಿದು ಬಂದಿದೆ.

ಸ್ವಲ್ಪ ಸಮಯದ ಬಳಿಕ ಜನರು ಆ ವ್ಯಕ್ತಿಯನ್ನು ಸಾವಧಾನವಾಗಿ (careful) ಕೆಳಗೆ ಇಳಿಸಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!