ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ (Chikkodi Taluk of Belagavi District) ಉಮರಾಣಿ ಗ್ರಾಮದಲ್ಲಿ ಪತ್ನಿಯು ಮಲಗಿದ್ದ ವೇಳೆ ಗಂಡನನ್ನು ಬರ್ಬರವಾಗಿ ಹತ್ಯೆಗೈದ (barbaric killing) ಘಟನೆ ನಡೆದಿದೆ.
ಲೈಂಗಿಕ ಕ್ರಿಯೆ ನಡೆಸಲು ಪತ್ನಿಯನ್ನು ಕರೆದಿದ್ದು, ಆಕೆ ಒಪ್ಪದಿದ್ದಾಗ ಮಗಳ ಮೇಲೆ ಅತ್ಯಾಚಾರಕ್ಕೆ (Daughter raped) ಯತ್ನಿಸಿದ ನೀಚ ಗಂಡನನ್ನು ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : Health : ಕಡಿಮೆ ಮಾತ್ರವಲ್ಲ, ನೀರು ಹೆಚ್ಚು ಕುಡಿಯುವುದು ಒಳ್ಳೆಯದಲ್ಲ; ಯಾಕೆ ಗೊತ್ತಾ?
ಕೊಲೆಗೈದ ಬಳಿಕ ಮಹಿಳೆಗೆ ಶವ ಸಾಗಿಸಲು ಆಗದ ಕಾರಣ ಗಂಡನ ದೇಹವನ್ನು 2 ತುಂಡು ಬಾಡಿ (Cut the husband’s body into 2 pieces) ಬ್ಯಾರೆಲ್ ನಲ್ಲಿ ಸಾಗಿಸಿದ್ದಾಳೆ. ಬಳಿಕ ಹೊಲದಲ್ಲಿ ಶವವನ್ನು ಹಾಗೆಯೇ ಜೋಡಿಸಿಟ್ಟು ಹೂತು ಹಾಕಿದ್ದಾಳೆ. ಅಲ್ಲದೇ ಆತನ ಬಟ್ಟೆ ಸೇರಿದಂತೆ ಹಲವು ವಸ್ತುಗಳನ್ನು ಸುಟ್ಟು ಹಾಕಿದ್ದಾಳೆ ಎಂದು ತಿಳಿದು ಬಂದಿದೆ.
ಪೊಲೀಸರು ತೀವ್ರ ವಿಚಾರಣೆ ನಡೆಸಿದ ಬಳಿಕ ಆರೋಪಿ ಮಹಿಳೆ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾಳೆ.
ಸದ್ಯ ಚಿಕ್ಕೋಡಿ ಪೊಲೀಸರು ಸಾವಿತ್ರಿಯನ್ನು ಅರೆಸ್ಟ್ ಮಾಡಿದ್ದಾರೆ.