ಜನಸ್ಪಂದನ ನ್ಯೂಸ್, ಡೆಸ್ಕ್ : ಶಾಲಾ ಬಸ್ಸೊಂದು ಪಲ್ಟಿಯಾದ ಪರಿಣಾಮ (As a result of the bus overturning) ವಿದ್ಯಾರ್ಥಿನಿ ಮೃತಪಟ್ಟಿದ್ದು, ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಕೇರಳದ ಕಣ್ಣೂರಿನ (Kannur in Kerala) ವಳಕ್ಕೈನಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಲೋಕಾಯುಕ್ತ ದಾಳಿ : ಕಾನ್ಸ್‌ಟೇಬಲ್ ಮನೆಯಲ್ಲಿ ಕಂತೆ ಕಂತೆ ಹಣ; ಬೆಳ್ಳಿ ಪತ್ತೆ, ವಿಡಿಯೋ Viral.!
ಬುಧವಾರ ಸಂಜೆ ಕಣ್ಣೂರಿನ ವಳಕೈ ಎಂಬಲ್ಲಿ ಶಾಲಾ ಬಸ್ ಪಲ್ಟಿಯಾಗಿದ್ದು, 5ನೇ ತರಗತಿ ವಿದ್ಯಾರ್ಥಿನಿ ನೇದ್ಯ ಎಸ್. ರಾಜೇಶ್ ಸಾವಿಗೀಡಾಗಿದ್ದು, ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಚಾಲಕ ವಾಹನ ಚಲಾಯಿಸುವಾಗ (While the driver is driving) ಫೋನ್ ಬಳಸಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಯಾಕೆಂದರೆ ಅಪಘಾತದ ವೇಳೆ ಆತ ಫೋನ್‌ನಿಂದ ವಾಟ್ಸಾಪ್ ಸ್ಟೇಟಸ್ ಅಪ್‌ಲೋಡ್ ಆಗಿರುವುದು ಪತ್ತೆಯಾಗಿದೆ (WhatsApp status uploaded detected).
ಇದನ್ನು ಓದಿ : Health : ಕಡಿಮೆ ಮಾತ್ರವಲ್ಲ, ನೀರು ಹೆಚ್ಚು ಕುಡಿಯುವುದು ಒಳ್ಳೆಯದಲ್ಲ; ಯಾಕೆ ಗೊತ್ತಾ?
ಬುಧವಾರ ಸಂಜೆ 4.03ಕ್ಕೆ ಅಪಘಾತ ನಡೆದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ನೋಡಬಹುದು. ಇದೇ ವೇಳೆ ಚಾಲಕನ WhatsApp ಸ್ಟೇಟಸ್ ಅಪ್ ಲೋಡ್ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಅಪಘಾತ ನಡೆದ ಸಮಯ (Time of accident) ಮತ್ತು ಸ್ಟೇಟಸ್ ಅಪ್ಲೋಡ್ ಮಾಡಿದ ಟೈಮ್ ಒಂದೇ ಆಗಿದ್ದರೆ, ಈ ವೇಳೆ ಚಾಲಕ ನಿಜಾಮ್ ವಾಟ್ಸಾಪ್ ಬಳಸುತ್ತಿರಬಹುದು ಎಂಬುದು ತಿಳಿಯುತ್ತದೆ.
ವೈರಲ್ ಆಗಿರುವ ವಿಡಿಯೋ ನೋಡಿ :
STORY | Student killed, 18 injured as school bus overturns in Kerala's Kannur
READ: https://t.co/Nywqm53hQ6
VIDEO:
(Full video available on PTI Videos – https://t.co/n147TvrpG7) pic.twitter.com/haVqljIAR6
— Press Trust of India (@PTI_News) January 1, 2025
ಹಿಂದಿನ ಸುದ್ದಿ : ಬೆಳಗಾವಿ : ಡ್ಯೂಟಿ ಬದಲಾಯಿಸಿದಕ್ಕೆ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆತ್ಮಹತ್ಯೆ ಡ್ರಾಮಾ.!
ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿಯ ಉದ್ಯಮಬಾಗ ಠಾಣೆಯಲ್ಲಿ ಡ್ಯೂಟಿ ಬದಲಿಸಿದ್ದಕ್ಕೆ ಪೊಲೀಸ್ ಕಾನ್ಸ್‌ಟೇಬಲ್ ಓರ್ವ ಆತ್ಮಹತ್ಯೆಯ (attempt to suicide) ನಾಟಕವಾಡಿದ ವಿಚಿತ್ರ ಘಟನೆ ಬುಧವಾರ ರಾತ್ರಿ ನಡೆದಿದೆ.
ಪೊಲೀಸ್ ಕಾನ್ಸ್‌ಟೇಬಲ್ ಮುದಕಪ್ಪ ಉದಗಟ್ಟಿ ಎಂಬವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : Special news : ಚಳಿಗಾಲದಲ್ಲಿ ನಿಮ್ಮ ಮುಖಕ್ಕೆ ಅಪ್ಪಿತಪ್ಪಿಯೂ ಇವುಗಳನ್ನು ಹಚ್ಚಿಕೊಳ್ಳಬೇಡಿ.!
ಮುದಕಪ್ಪ ಎರಡು ದಿನಗಳ ಕಾಲ ರಜೆ ಮೇಲೆ ಹೋಗಿ ಬಂದಿದ್ದರು. ಹೀಗಾಗಿ ಅವರಿಗೆ ಪಿಐ ಡ್ಯೂಟಿ ಬದಲಿಸಿದ್ದರು. ಅಲ್ಲದೇ ಕರ್ತವ್ಯ ನಿಯೋಜಿಸಿದ ಜಾಗಕ್ಕೆ (to the place of duty assigned) ಹೋಗಬೇಕೆಂದು ಸೂಚಿಸಿದ್ದರು. ಆದರೆ ಇದಕ್ಕೊಪ್ಪದ ಮುದಕಪ್ಪ, ವಿಷ ಸೇವಿಸುತ್ತೇನೆ (I will consume poison) ಎಂದು ಹೇಳಿದ್ದಾರೆ. ಅಲ್ಲದೇ ದಾಳಿಯಲ್ಲಿ ಬಿದ್ದು ಹೊರಳಾಡಿದ್ದಾರೆ ಎನ್ನಲಾಗಿದೆ.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ತಪಾಸಣೆ (Health Checkup) ನಡೆಸಲಾಗಿದೆ. ಇನ್ನೂ ವೈದ್ಯರು ಪರೀಕ್ಷೆ ನಡೆಸಿ, ಮುದಕಪ್ಪ ವಿಷ ಕುಡಿದಿಲ್ಲ ಎಂದು ದೃಢಪಡಿಸಿದ್ದಾರೆ. ಬಳಿಕ ಮೇಲಾಧಿಕಾರಿಗಳು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.
ಇದನ್ನು ಓದಿ : ಸಂಚಲನ ಸೃಷ್ಟಿಸಿದ ಒಂದೇ ಕೆರೆಯಲ್ಲಿ PSI, ಲೇಡಿ ಕಾನ್ಸ್‌ಟೇಬಲ್ ಮತ್ತು ಓರ್ವ ಯುವಕನ ಶವ ಪತ್ತೆ ಪ್ರಕರಣ.!
ಈ ಬೆಳವಣಿಗೆ ಮಧ್ಯೆ ಪಿಐ ಡಿಕೆ ಪಾಟೀಲ್ ಅವರು ಅಸ್ವಸ್ಥಗೊಂಡಿದ್ದಾರೆ (ill). ಅವರಿಗೆ ಲೋ ಬಿಪಿ ಆಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ವಿಚಾರ ತಿಳಿದು ಎಸಿಪಿ ಶೇಖರಪ್ಪ ಉದ್ಯಮಬಾಗ ಠಾಣೆಗೆ ಆಗಮಿಸಿ, ಘಟನೆಯ ಸಂಪೂರ್ಣ ಮಾಹಿತಿ (Complete information) ಪಡೆದರು. ಬಳಿಕ ಬೆಳಗಾವಿ ಪೊಲೀಸ್ ಕಮಿಷನರ್ ಅವರಿಗೂ ವಿವರಗಳನ್ನು ತಿಳಿಸಿದರು ಎಂದು ತಿಳಿದು ಬಂದಿದೆ.