ಜನಸ್ಪಂದನ ನ್ಯೂಸ್, ಹಾಸನ : ಹಾಸನ (Hassan) ನಗರದ ಬಿ. ಎಂ. ರಸ್ತೆಯಲ್ಲಿರುವ ಹೋಟೆಲ್‌ವೊಂದರ ಗೇಟ್‌ನಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ (lover) ಚಾಕು ಇರಿದ ಆತಂಕಕಾರಿ ಘಟನೆ ನಡೆದಿದೆ.
ಹಾಸನ ತಾಲ್ಲೂಕಿನ ಎ. ಗುಡುಗನಹಳ್ಳಿ ಗ್ರಾಮದ ನಿವಾಸಿಯಾದ ಮನುಕುಮಾರ್ (25) ಎಂಬಾತ ತನ್ನ ಪ್ರೇಯಸಿಯಿಂದ ಚಾಕು ಇರಿತಕ್ಕೊಳಗಾಗಿದ್ದಾನೆ (He was stabbed with a knife) ಎಂದು ತಿಳಿದು ಬಂದಿದೆ.
ಮನುಕುಮಾರ್ ಹಾಸನದಲ್ಲಿ ಹಾರ್ಡ್‌ವೇರ್ ಮತ್ತು ಪ್ಲೈವುಡ್ ಅಂಗಡಿ ಇಟ್ಟುಕೊಂಡಿದ್ದನು. ಈತ ಹಾಗೂ ಭವಾನಿ ಜೊತೆಯಲ್ಲಿಯೇ ವಿದ್ಯಾಭ್ಯಾಸ ನಡೆಸುತ್ತಿದ್ದರು. ಇಬ್ಬರು ಪರಸ್ಪರ ಲವ್ ಮಾಡುತ್ತಿದ್ದರು. ಆದರೆ ಕೆಲ ದಿನಗಳಿಂದ ಇಬ್ಬರು ದೂರವಾಗಿದ್ದರು ಎನ್ನಲಾಗಿದೆ.
ಇದನ್ನು ಓದಿ : ಕೋಣದ DNA ಪರೀಕ್ಷೆಗೆ ಮುಂದಾದ ಕರ್ನಾಟಕ- ಆಂಧ್ರಪ್ರದೇಶ ಗ್ರಾಮಸ್ಥರು ; ಅಂತದ್ದೇನಾಯ್ತು ಗೊತ್ತಾ.?
ನ್ಯೂ ಇಯರ್ ಸೆಲೆಬ್ರೇಶನ್ ಅಂತ ಮನುಕುಮಾರ್ ಸ್ನೇಹಿತರ ಜೊತೆ ಖಾಸಗಿ ಹೋಟೆಲ್‌ಗೆ ಹೋಗಿದ್ದರು. ಈ ವೇಳೆ ಆತನಿಗೆ ಭವಾನಿ ಪದೇಪದೇ (repeat) ಫೋನ್ ಮಾಡುತ್ತಿದ್ದಳು. ಅಲ್ಲದೇ ಹೋಟೆಲ್ ಬಳಿ ಬಂದು, ಅಲ್ಲಿಯೇ ಬಿದ್ದಿದ್ದ ಪಾಸ್ ಅನ್ನು ಕೊರಳಿಗೆ ಹಾಕಿಕೊಂಡು ಭವಾನಿ ಗೇಟ್ ಒಳಗೆ ಹೋದಳು (She went inside the gate). ಅಷ್ಟರಲ್ಲಿ ಗೇಟ್ ಬಳಿ ಬಂದ ಮನುಕುಮಾರ್ ಹಾಗೂ ಭವಾನಿ ನಡುವೆ ಗಲಾಟೆಯಾಗಿದೆ.
ಸ್ಥಳದಲ್ಲೇ ಇದ್ದ ಸ್ನೇಹಿತರು ಇಬ್ಬರ ಜಗಳವನ್ನು ಬಿಡಿಸಲು ಪ್ರಯತ್ನಿಸಿದರು. ಈ ವೇಳೆ ಭವಾನಿ ಏಕಾಏಕಿ ಚಾಕುವಿನಿಂದ ಮನುಕುಮಾರ್‌ಗೆ ಇರಿದಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಮನುಕುಮಾರ್ನನ್ನು ಜಿಲ್ಲಾಸ್ಪತ್ರೆಗೆ (district hospital) ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : Video : ಕುಡಿದ ಮತ್ತಲ್ಲಿ ಕಂಬವೇರಿ ವಿದ್ಯುತ್ ತಂತಿಗಳ ಮೇಲೆ ಮಲಗಿದ ಐನಾತಿ.!
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಕೆ. ಆರ್. ಪುರಂ ಪೊಲೀಸ್ ಠಾಣೆ (K. R. Puram police station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಿಂದಿನ ಸುದ್ದಿ : ಕುಡಿದ ಮತ್ತಲ್ಲಿ ಕಂಬವೇರಿ ಮಲಗಿದ ಐನಾತಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಈತ ಕುಡುಕರಲ್ಲೇ ಮಹಾ ಕುಡುಕ ಇದ್ದಿರಬಹುದು. ಹೀಗಾಗಿ ಕುಡಿದ ನಶೆಯಲ್ಲಿ ಈ ವ್ಯಕ್ತಿ ಕಂಬ ಏರಿ ವಿದ್ಯುತ್ ತಂತಿಗಳ ಮೇಲೆ (On the power lines) ಮಲಗಿದ ಶಾಕ್ ತರಿಸುವ ವಿಡಿಯೋವೊಂದು ವೈರಲ್ ಆಗಿದೆ.
ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ (Drunkenness) ವಿದ್ಯುತ್ ಕಂಬ ಏರುತ್ತಿರುವುದನ್ನು ಅಲ್ಲಿದ್ದ ಕೆಲ ಜನರು ದೂರದಿಂದಲೇ ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನೂ ಆಂಧ್ರಪ್ರದೇಶದ ಮಾನ್ಯಂ ಜಿಲ್ಲೆಯ (Manyam District of Andhra Pradesh) ಪಾಲಕೊಂಡ ಮಂಡಲದ ಎಂ. ಸಿಂಗಿಪುರಂನಲ್ಲಿ ಇಂತದ್ದೊಂದು ವಿಚಿತ್ರ ಘಟನೆ ನಡೆದಿದೆ. ಆದರೆ ವಿಡಿಯೋ ಎಷ್ಟು ಸತ್ಯ? ಎಂಬುದರ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.
ಇದನ್ನು ಓದಿ : ಸಂಚಲನ ಸೃಷ್ಟಿಸಿದ ಒಂದೇ ಕೆರೆಯಲ್ಲಿ PSI, ಲೇಡಿ ಕಾನ್ಸ್‌ಟೇಬಲ್ ಮತ್ತು ಓರ್ವ ಯುವಕನ ಶವ ಪತ್ತೆ ಪ್ರಕರಣ.!
ಕಂಬದ ಬಳಿಗೆ ಓಡಿದ ಆತ, ಮೇಲಕ್ಕೇರಿ ಹೋಗಿದ್ದಾನೆ. ಅಲ್ಲಿದ್ದವರು ಎಷ್ಟು ಕೂಗಿದರೂ ಲೆಕ್ಕಿಸಲಿಲ್ಲ. ಮೇಲೆ ಹೋಗಿ ವಿದ್ಯುತ್ ತಂತಿಗಳ ಮೇಲೆ ಆರಾಮವಾಗಿ ಮಲಗಿಕೊಂಡಿದ್ದಾನೆ.
ಸ್ವಲ್ಪ ಹೊತ್ತು ಆತನಿಗೆ ಮೋಡಗಳಲ್ಲಿ ತೇಲಾಡುತ್ತಿರುವಂತೆ ಭಾಸವಾಗಿದೆ (Feeling of floating). ಎಲ್ಲರೂ ಅಲ್ಲಿಂದ ಕೆಳಗೆ ಬೀಳುತ್ತಾನೆ ಎಂದು ಆತಂಕಗೊಳಗಾಗಿರಬಹುದು.
ಅವರು ಅವನನ್ನು ಕೆಳಗೆ ಇಳಿಯುವಂತೆ ಎಷ್ಟೇ ಕಿರುಚಿದರೂ (scream) ಆತ ಮಾತ್ರ ಯಾರೇ ಕೂಗಾಡಲಿ ಊರೇ ಹೋರಾಡಲಿ ಎಂದು ಪ್ರತಿಕ್ರಿಯಿಸದೇ ಹಾಗೆಯೇ ಮಲಗಿಕೊಂಡಿದ್ದ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : Special news : ಗುಡ್ಡದಂತ ಸಮಸ್ಯೆ ಬಂದರೂ ಎಳ್ಳಷ್ಟು ಹೆದರಿಕೊಳ್ಳದವರಿಗೆ ಧೈರ್ಯ, ವಿಶ್ವಾಸ ಬರೋದೆಲ್ಲಿಂದ.?
ಸ್ವಲ್ಪ ಸಮಯದ ಬಳಿಕ ಜನರು ಆ ವ್ಯಕ್ತಿಯನ್ನು ಸಾವಧಾನವಾಗಿ (careful) ಕೆಳಗೆ ಇಳಿಸಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.