Saturday, January 18, 2025
HomeState Newsಹಣ ಪಡೆದ ಆರೋಪ ; ರೈಲ್ವೆ ಟಿಕೆಟ್ ಮುಖ್ಯ ಇನ್ಸ್‌ಪೆಕ್ಟರ್ Arrest.!
spot_img

ಹಣ ಪಡೆದ ಆರೋಪ ; ರೈಲ್ವೆ ಟಿಕೆಟ್ ಮುಖ್ಯ ಇನ್ಸ್‌ಪೆಕ್ಟರ್ Arrest.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ‌ಬೆಂಗಳೂರು : ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು‌ (To clear competitive exams) ಸಹಾಯ ಮಾಡುತ್ತೇನೆ ಎಂದು ಹೇಳಿ ಅಭ್ಯರ್ಥಿಗಳಿಂದ 50 ಲಕ್ಷ ರೂ. ವಸೂಲಿ ಮಾಡಿದ ಆರೋಪದ ಮೇಲೆ ಪೊಲೀಸರು ರೈಲ್ವೆ ಟಿಕೆಟ್ ಮುಖ್ಯ ಇನ್‌ಸ್ಪೆಕ್ಟರ್‌ನನ್ನು (Chief Inspector of Railway Tickets) ಅರೆಸ್ಟ್ ಮಾಡಿದ ಘಟನೆ ನಡೆದಿದೆ.

ರೈಲ್ವೆ ಟಿಕೆಟ್ ಮುಖ್ಯ ಇನ್‌ಸ್ಪೆಕ್ಟರ್‌ ಗೋವಿಂದರಾಜು (49) ಬಂಧಿತ ಆರೋಪಿ ಎಂದು ತಿಳಿದು ಬಂದಿದ್ದು, ಈತ ನೈಋತ್ಯ ರೈಲ್ವೆಯಲ್ಲಿ ರೈಲ್ವೆ ಟಿಕೆಟ್ ಮುಖ್ಯ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

Read it : ಲೇಡಿ ಕಾನ್ಸ್‌ಟೇಬಲ್ ಜೊತೆ ಚಕ್ಕಂದ; ಪತ್ನಿ ಕೈಗೆ ಸಿಕ್ಕಿ ಬಿದ್ದ PSI.!

ಘಟನೆಯ ಹಿನ್ನೆಲೆ :
ಸ್ಪರ್ಧಾತ್ಮಕ ಪರೀಕ್ಷೆಗಳಾದ ಗ್ರಾಮ ಲೆಕ್ಕಾಧಿಕಾರಿ (Village Accountant), ಕೆಎಎಸ್ ಮತ್ತು ಪಿಡಿಒ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳನ್ನು ಮಧ್ಯವರ್ತಿಗಳ (the mediator) ಮೂಲಕ ಈ ಗೋವಿಂದರಾಜು ಸಂಪರ್ಕಿಸುತ್ತಿದ್ದರು.

ಬಳಿಕ ಹಣ ನೀಡಿದರೆ ಪರೀಕ್ಷೆಯಲ್ಲಿ ಪಾಸ್ ಆಗಲು ಸಹಾಯ ಮಾಡುವುದಾಗಿ ಭರವಸೆ ನೀಡುತ್ತಿದ್ದರು. ಪಿಡಿಒ ಹುದ್ದೆಗಳಿಗೆ 25 ಲಕ್ಷ ಮತ್ತು ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ (Preliminary examination) 50 ಲಕ್ಷ ರೂ. ನಿಗದಿ ಮಾಡಿದ್ದಾಗಿ ತಿಳಿದು ಬಂದಿದೆ.

ಈ ಬಗ್ಗೆ ಸುಳಿವು (clue) ದೊರೆತ ಮೇಲೆ ಹಿರಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಈ ಮಾಹಿತಿ ದೃಢೀಕರಿಸಿ (Confirm) ಆರೋಪಿಗಳನ್ನು ಪತ್ತೆ ಹಚ್ಚಿ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿತ್ತು.

Read it : ಹೆಲ್ಮೆಟ್ ಹಾಕುವ ಮುನ್ನ ಎಚ್ಚರ; ಯಾಕೆ ಗೊತ್ತಾ? ಈ Video ನೋಡಿ.!

ಅಂತೆಯೇ ಡಿಸೆಂಬರ್ 28ರಂದು ರಾತ್ರಿ ವೇಳೆ ರಮೇಶ್ ಎಂಬುವವರ ಮನೆಯಲ್ಲಿ ಆರೋಪಿ ಗೋವಿಂದರಾಜು ಇರುವುದು ಗೊತ್ತಾಗಿದೆ. ಈ ರಮೇಶ್ ಅವರ ಮಗಳು ಕೆಎಎಸ್ ಪರೀಕ್ಷೆಗೆ ಹಾಜರಾಗಬೇಕಿತ್ತು. ಪರೀಕ್ಷೆಯಲ್ಲಿ ತೇರ್ಗಡೆಯಾಗಲು (to pass) ಸಹಾಯ ಮಾಡುವ ಕುರಿತು ಚರ್ಚಿಸಲು ಗೋವಿಂದರಾಜು ಅಲ್ಲಿಗೆ ಭೇಟಿ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.

ರಮೇಶ್ ಅವರ ಮನೆಗೆ ಬಂದ ಪಿಎಸ್‌ಐ ಭೀಮಾಶಂಕರ್ ಮತ್ತು ಹೆಡ್ ಕಾನ್ಸ್‌ಟೇಬಲ್ ಗಿರೀಶ್ ಕುಮಾರ್, ಗೋವಿಂದರಾಜುನನ್ನು ಫಾಲೋ ಮಾಡಿ ಬಳಿಕ ಬಂಧಿಸಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯ ಬಳಿ ನಾಲ್ಕು ಮೊಬೈಲ್ ಫೋನ್‌ಗಳು ಇರುವುದು ಕಂಡುಬಂದಿದೆ. ಆತನ ಫೋನ್‌ಗಳಲ್ಲಿ ಒಂದನ್ನು ಪರಿಶೀಲಿಸಿದಾಗ, ಅದರಲ್ಲಿ 46 ಹೆಸರುಗಳು ಮತ್ತು ಇತರ ದಾಖಲೆಗಳು ಪತ್ತೆಯಾಗಿವೆ ಎಂದು ಡಿಸಿಪಿ ತಿಳಿಸಿದ್ದಾರೆ.

Read it : Accused of conversion : ಮರಕ್ಕೆ ಕಟ್ಟಿ ಹಾಕಿ ಮಹಿಳೆಯರಿಗೆ ಥಳಿತ.!

ಹೆಚ್ಚಿನ ತನಿಖೆಗಾಗಿ ಅವರನ್ನು ಠಾಣೆಗೆ ಕರೆದೊಯ್ಯಲಾಗಿದೆ ಮತ್ತು ವಿಚಾರಣೆ ವೇಳೆ 2018ರಲ್ಲಿ ಸಿಸಿಬಿ ಕಚೇರಿಯಲ್ಲಿ ದಾಖಲಾಗಿರುವ ಪರೀಕ್ಷಾ ವಂಚನೆ (Exam cheating) ಪ್ರಕರಣದಲ್ಲಿ ಈತ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಒಎಂಆರ್ ಶೀಟ್‌ನಲ್ಲಿ ನಿಮಗೆ ಗೊತ್ತಿರುವ ಉತ್ತರಗಳನ್ನು ಭರ್ತಿ ಮಾಡಿ, ಉಳಿದವುಗಳನ್ನು ಹಾಗೆ ಬಿಟ್ಟು ಬಿಡಿ. ನಂತರ ನಾವು ಕರೆಕ್ಟ್ ಉತ್ತರಗಳನ್ನು ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಆರೋಪಿಯು ಅಭ್ಯರ್ಥಿಗಳ ಪ್ರಮಾಣಪತ್ರಗಳು, ಪ್ರವೇಶ ಕಾರ್ಡ್‌ಗಳು ಮತ್ತು ಚೆಕ್‌ಗಳನ್ನು ಸಂಗ್ರಹಿಸುತ್ತಿದ್ದ ಎಂದು ತಿಳಿದು ಬಂದಿದೆ.

ಹಿಂದಿನ ಸುದ್ದಿ : ಲೇಡಿ ಕಾನ್ಸ್‌ಟೇಬಲ್ ಜೊತೆ ಚಕ್ಕಂದ ; ಪತ್ನಿ ಕೈಗೆ ಸಿಕ್ಕಿಬಿದ್ದ PSI.!

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿನ ವರ್ಷಗಳಲ್ಲಿ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿವೆ. ಕೆಲ ಜನರು ಮದುವೆ ಫಿಕ್ಸ್ ಆಗಿದ್ದರೂ ಅಥವಾ ಮದುವೆಯಾಗಿದ್ದರೂ ಬೇರೊಬ್ಬರ ಜೊತೆ ಅನೈತಿಕ ಸಂಬಂಧವನ್ನು (An immoral relationship) ಹೊಂದಿರುತ್ತಾರೆ. ಈ ಅಕ್ರಮ ಸಂಬಂಧದ ಕಾರಣದಿಂದಾಗಿ ಸುಂದರ ಸಂಸಾರಗಳು (Beautiful families) ಮುರಿದು ಬೀಳುತ್ತವೆ.

ಕೆಲವರಂತೂ ತಮ್ಮ ಪತ್ನಿ ಅಥವಾ ಪತಿಯ ರೆಡ್ ಹ್ಯಾಂಡ್ಆಗಿ ಸಿಕ್ಕಿಬಿದ್ದು ಪಡಬಾರದ ಪಜೀತಿ ಪಡುತ್ತಾರೆ. ಸದ್ಯ ಲೇಡಿ ಕಾನ್ಸ್​ಟೆಬಲ್​ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಸಬ್​ ಇನ್ಸ್​ಪೆಕ್ಟರ್​, ಪತ್ನಿಯ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವ ಘಟನೆ ತೆಲಂಗಾಣದ ನಲ್ಗೊಂಡದಲ್ಲಿ (Nalgonda, Telangana) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಎಸ್​​ಐ- ಕಾನ್ಸ್​ಟೆಬಲ್​ ನಡುವಿನ ಲವ್ವಿಡವ್ವಿ​ ಆಡಿಯೋ ವೈರಲ್ (Lovidovvy audio between SI- Constable goes viral​) ಆಗಿದ್ದು, ಪೊಲೀಸ್ ಇಲಾಖೆಯಲ್ಲಿ ಕೋಲಾಹಲ ಸೃಷ್ಟಿಸಿದೆ.

ಸಬ್​ ಇನ್ಸ್​ಪೆಕ್ಟರ್ ಮಹೇಂದರ್ ನಲ್ಗೊಂಡ ಜಿಲ್ಲೆಯ ಟಾಸ್ಕ್ ಫೋರ್ಸ್‌ನಲ್ಲಿ (task force) ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಹಲವು ವರ್ಷಗಳಿಂದ ಅಬಕಾರಿ ಕಾನ್ಸ್​ಟೆಬಲ್ ​(Lady Excise Constable) ವಸಂತ ಎಂಬುವವರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಈ ವಿಷಯ ಸಬ್​ ಇನ್ಸ್​ಪೆಕ್ಟರ್ ಮಹೇಂದರ್ ಪತ್ನಿ, ಜ್ಯೋತಿ ಮಹೇಂದರ್‌ ಗೆ ಗೊತ್ತಾಗಿದ್ದು, ಇಬ್ಬರನ್ನು ರೆಡ್​ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಈ ವೇಳೆ ನನ್ನ ಗಂಡನ ತಂಟೆಗೆ ಬರಬೇಡ ಎಂದು ಕಾನ್ಸ್​ಟೆಬಲ್​ ವಸಂತಳಿಗೆ ಜ್ಯೋತಿ ವಾರ್ನಿಂಗ್ ಮಾಡಿದ್ದರು. ಆದರೆ, ಈ ಮಾತುಗಳಿಗೆ ತಲೆ ಕೆಡಿಸಿಕೊಳ್ಳದೇ ಇಬ್ಬರು ತಮ್ಮ ಸಂಬಂಧವನ್ನು ಮುಂದುವರಿಸಿದ್ದರು.

ಈ ನಡುವೆ ಇಬ್ಬರ ಕಾಲ್ ರೆಕಾರ್ಡಿಂಗ್ ಕೂಡ ವೈರಲ್ ಆಗಿದೆ. ಇನ್ನು ನಾನು ಸುಮ್ಮನಿದ್ದರೆ ಪ್ರಯೋಜನವಿಲ್ಲ ಎಂದು ಅರಿತ ಜ್ಯೋತಿ ತನ್ನ ಪತಿಯ ವಿರುದ್ಧ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ (Complained to higher officials) ಎಂದು ವರದಿಗಳು ತಿಳಿಸಿವೆ.

ನನ್ನ ಗಂಡ ಮಹೇಂದರ್​, ವಸಂತ ಎಂಬುವವರೊಂದಿಗೆ ಐದಾರು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದು, ಅಂದಿನಿಂದ ನನ್ನನ್ನು ಕೊಲ್ಲುವ ಪ್ರಯತ್ನ ನಡೆಯುತ್ತಿದೆ. ನನ್ನ ಗಂಡ ಸರ್ವೀಸ್ ರಿವಾಲ್ವರ್‌ನಿಂದ ಕೊಲೆ ಬೆದರಿಕೆ ಹಾಕುತ್ತಿದ್ದಾನೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದು, ಮಹೇಂದರ್ ಅವರನ್ನು ಸೇವೆಯಿಂದ ಶಾಶ್ವತವಾಗಿ ತೆಗೆದು ಹಾಕಿ, ಇಲ್ಲವಾದರೆ ನನಗೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ಅಳಲು ತೋಡಿಕೊಂಡರು ಎಂದು ವರದಿಯಿಂದ ತಿಳಿದು ಬಂದಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!