ಮಂಗಳವಾರ, ನವೆಂಬರ್ 18, 2025

Janaspandhan News

HomeHealth & FitnessDhatura : “ಶಿವನಿಗೆ ಪ್ರಿಯವಾದ ಧಾತೂರ ಹೂವಿನಲ್ಲಿದೆ ಆಯುರ್ವೇದ ಅದ್ಭುತ ಶಕ್ತಿ.!”
spot_img
spot_img
spot_img

Dhatura : “ಶಿವನಿಗೆ ಪ್ರಿಯವಾದ ಧಾತೂರ ಹೂವಿನಲ್ಲಿದೆ ಆಯುರ್ವೇದ ಅದ್ಭುತ ಶಕ್ತಿ.!”

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ಭಾರತೀಯ ಸಂಪ್ರದಾಯದಲ್ಲಿ ಶಿವನ ಆರಾಧನೆಗೆ ವಿಶಿಷ್ಟ ಸ್ಥಾನವಿದೆ. ಶಿವನಿಗೆ ಪ್ರಿಯವಾದ ಹೂಗಳಲ್ಲಿ ಧಾತೂರ/ದತ್ತೂರಿ (Dhatura) ಹೂ ಅತ್ಯಂತ ಮುಖ್ಯವಾದುದು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ರುದ್ರ ಸಂಹಿತೆಯಲ್ಲಿಯೂ ಈ ಹೂವಿನ ಪಾವಿತ್ರ್ಯ ಮತ್ತು ಶಕ್ತಿಯನ್ನು ಕುರಿತು ವಿವರಿಸಲಾಗಿದೆ. ಪುರಾಣ ಪ್ರಕಾರ, ಶಿವನ ತಪಸ್ಸಿನ ವೇಳೆ ಬಂದ ಬೆವರಿನಿಂದ ಧಾತೂರ ಸಸ್ಯವು ಉತ್ಭವವಾಯಿತು ಎಂಬ ನಂಬಿಕೆಯಿದೆ.

Mother : ಪ್ರಿಯಕರನ ಜೊತೆ ಸೇರಿ ಹೆತ್ತ ತಾಯಿಯ ಹತ್ಯೆ ಮಾಡಿದ ಅಪ್ರಾಪ್ತ ಮಗಳು.!

ಆದರೆ ಧಾರ್ಮಿಕ ಅರ್ಥಕ್ಕಿಂತಲೂ ಮುಂದೆ ಹೋಗಿ ನೋಡಿದರೆ, ಧಾತೂರ (Dhatura) ಸಸ್ಯವು ಆಯುರ್ವೇದದಲ್ಲಿ ಮಹತ್ವದ ಔಷಧೀಯ ಸಸ್ಯವೆಂದು ಪರಿಗಣಿಸಲಾಗಿದೆ. ಪ್ರಕೃತಿಯಲ್ಲೇ ದೊರೆಯುವ ಈ ಸಸ್ಯದ ಎಲೆ, ಹೂ ಮತ್ತು ಬೇರುಗಳಲ್ಲಿ ಅನೇಕರಿಗೆ ಪರಿಚಿತವಲ್ಲದ ಚಿಕಿತ್ಸೆ ಶಕ್ತಿ ಅಡಗಿದೆ.

ದತ್ತೂರಿ ಎಲೆಗಳಿಂದ ತಯಾರಿಸಿದ ಕಷಾಯವನ್ನು ಶೀತ, ಕೆಮ್ಮು ಹಾಗೂ ಉಸಿರಾಟದ ತೊಂದರೆಯ ಸಮಯದಲ್ಲಿ ಸೇವಿಸಿದರೆ ತಕ್ಷಣದ ಪರಿಹಾರ ದೊರೆಯುತ್ತದೆ. ಕೆಲವು ಆಯುರ್ವೇದ ವೈದ್ಯರ ಪ್ರಕಾರ, ದತ್ತೂರಿ (Dhatura) ಎಲೆಗಳ ಹೊಗೆಯನ್ನು ತೆಗೆದುಕೊಳ್ಳುವುದರಿಂದ ಅಸ್ತಮಾ ರೋಗಿಗಳಿಗೆ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ.

School ಗೆ ಹೋಗಲ್ಲ ಎಂದ ಬಾಲಕನ ಹಠ ; ಮಂಚದ ಸಹಿತ ಶಾಲೆಗೆ ಕರೆತಂದ ಮನೆಯವರು ; ವಿಡಿಯೋ ವೈರಲ್.!

ಅದೇ ರೀತಿಯಲ್ಲಿ, ಬಿಸಿಮಾಡಿದ ದತ್ತೂರಿ (Dhatura) ಎಲೆಗಳನ್ನು ನೋವು ಇರುವ ಭಾಗಕ್ಕೆ ಹಚ್ಚಿದರೆ ಕೀಲು ನೋವು ಮತ್ತು ಊತದಿಂದ ಬಿಡುಗಡೆ ಸಿಗುತ್ತದೆ. ಈ ಎಲೆಗಳಿಂದ ತಯಾರಿಸಿದ ಎಣ್ಣೆಯನ್ನು ದೇಹಕ್ಕೆ ಮಸಾಜ್ ಮಾಡುವುದರಿಂದ ದೈಹಿಕ ಶ್ರಮದಿಂದ ಉಂಟಾಗುವ ನೋವುಗಳಿಗೂ ಸಹಾಯವಾಗುತ್ತದೆ.

ದತ್ತೂರಿ ಎಲೆಗಳಿಂದ ತಯಾರಿಸಿದ ಪೇಸ್ಟ್‌ ಚರ್ಮದ ಹುಣ್ಣು, ಮೊಡವೆ ಮತ್ತು ಸೋಂಕುಗಳ ಚಿಕಿತ್ಸೆಯಲ್ಲಿ ಸಹಾಯಕವಾಗಿದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಕೆಲವರು ದತ್ತೂರಿ (Dhatura) ಕಷಾಯವನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡ, ಶುಗರ್ ಮತ್ತು ಕ್ಯಾನ್ಸರ್ ಕೋಶಗಳ ವೃದ್ಧಿ ನಿಯಂತ್ರಣವಾಗುತ್ತದೆ ಎಂದು ನಂಬುತ್ತಾರೆ.

Digital trend : ಮದುವೆಯಲ್ಲಿ ಶರ್ಟ್ ಮೇಲೆ ಕ್ಯುಆರ್ ಕೋಡ್ ಧರಿಸಿ ಉಡುಗೊರೆ ವಸೂಲಿ ; ವಿಡಿಯೋ ವೈರಲ್.!

ಹಲ್ಲು ನೋವಿಗೆ ದತ್ತೂರಿ ಗಿಡದ ಬೇರುಗಳಿಂದ ತಯಾರಿಸಿದ ಕಷಾಯ ಅಥವಾ ಎಣ್ಣೆ ಬಳಸಲಾಗುತ್ತದೆ. ಪಾದಗಳಿಗೆ ದತ್ತೂರಿ ಎಣ್ಣೆ ಹಚ್ಚಿ ಮಲಗುವುದರಿಂದ ದೇಹದ ಒತ್ತಡ ಮತ್ತು ಕೈ-ಕಾಲು ನೋವುಗಳಿಂದ ವಿಶ್ರಾಂತಿ ಸಿಗುತ್ತದೆ.

ಆದರೆ ಆಯುರ್ವೇದದ ಪ್ರಕಾರ, ಧಾತೂರ (Dhatura) ಸಸ್ಯವು ಔಷಧೀಯ ಗುಣಗಳ ಜೊತೆಗೆ ವಿಷಕಾರಿ ಗುಣವನ್ನೂ ಹೊಂದಿರುವುದರಿಂದ, ಇದರ ಯಾವುದೇ ಭಾಗವನ್ನು ವೈದ್ಯಕೀಯ ಸಲಹೆಯಿಲ್ಲದೆ ಬಳಸಬಾರದು.

ಸೂಚನೆ : ಈ ಲೇಖನವು ಪ್ರಾಚೀನ ಆಯುರ್ವೇದ ಗ್ರಂಥಗಳು ಹಾಗೂ ಸಾಮಾನ್ಯ ಮಾಹಿತಿ ಆಧಾರಿತವಾಗಿದೆ. ಯಾವುದೇ ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯುವುದು ಅತ್ಯವಶ್ಯಕ.


Digital trend : ಮದುವೆಯಲ್ಲಿ ಶರ್ಟ್ ಮೇಲೆ ಕ್ಯುಆರ್ ಕೋಡ್ ಧರಿಸಿ ಉಡುಗೊರೆ ವಸೂಲಿ ; ವಿಡಿಯೋ ವೈರಲ್.!

Digital

ಜನಸ್ಪಂದನ ನ್ಯೂಸ್‌, ತಿರುವನಂತಪುರಂ : ಭಾರತದಲ್ಲಿ ಮದುವೆ ಎಂದರೆ ಸಂಪ್ರದಾಯ, ಸಂಸ್ಕೃತಿ ಮತ್ತು ವೈಭವದ ಸಂಕಲನ. ಮಂಗಳ ಸಪ್ತಪದಿ, ಶಾಸ್ತ್ರಪೂರ್ವಕ ವಿಧಿಗಳು, ಅತಿಥಿಗಳ ಹರ್ಷ ಎಲ್ಲವೂ ಅದ್ಭುತ ಅನುಭವ. ಈ ಆಚರಣೆಯ ಒಂದು ಭಾಗವಾಗಿ ಅತಿಥಿಗಳು ವಧು-ವರರಿಗೆ ಉಡುಗೊರೆ ನೀಡುವುದು ಸಹ ಒಂದು ಸಂಪ್ರದಾಯವಾಗಿದೆ.

ಕೆಲವರು ಬೆಲೆಬಾಳುವ ಉಡುಗೊರೆ ಕೊಡುತ್ತಾರೆ, ಹಲವರು ಲಕೋಟೆ ಮೂಲಕ ಹಣ ನೀಡುತ್ತಾರೆ. ಆದರೆ, ಕೇರಳದಲ್ಲಿ ನಡೆದ ಮದುವೆಯೊಂದರಲ್ಲಿ ಈ ಉಡುಗೊರೆ ಸಂಪ್ರದಾಯ ಈಗ ಸಂಪೂರ್ಣವಾಗಿ “ಡಿಜಿಟಲ್ (Digital) ರೂಪ ಪಡೆದಿದೆ.

ವಧುವಿನ ತಂದೆಯೊಬ್ಬರು ತಮ್ಮ ಶರ್ಟ್ ಮೇಲೆ ಪೇಟಿಎಂ (Paytm) ಕ್ಯುಆರ್ ಕೋಡ್ ಬ್ಯಾಡ್ಜ್ ಅಂಟಿಸಿಕೊಂಡು ಬಂದಿದ್ದು, ಅತಿಥಿಗಳು ಆನ್‌ಲೈನ್ ಮೂಲಕ ನಗದು ರೂಪದಲ್ಲಿ ಉಡುಗೊರೆ ಕಳುಹಿಸಲು ಆಹ್ವಾನಿಸಿದ್ದಾರೆ. ಈ ವಿಶಿಷ್ಟ ಕ್ರಮದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

Rules ಉಲ್ಲಂಘನೆ ಮಾಡಿದ ವಿದ್ಯಾರ್ಥಿಗೆ ದಂಡ ವಿಧಿಸಿ, ತಾವೇ ನಿಯಮ ಮುರಿದ ಟ್ರಾಫಿಕ್ ಪೊಲೀಸ್ ; ವಿಡಿಯೋ ವೈರಲ್.!
ಡಿಜಿಟಲ್ (Digital) ಪಾವತಿ ಮತ್ತು ಪರಿಸರ ಸ್ನೇಹಿ ಆಯ್ಕೆ :

ಈ ವಿಡಿಯೋದಲ್ಲಿ ಮದುವೆಯ ವೈಭವದ ಮಧ್ಯೆ, ವಧುವಿನ ತಂದೆ ನಗುಮುಖದಿಂದ ಕ್ಯುಆರ್ ಕೋಡ್ ಧರಿಸಿರುವುದು ಕಾಣಿಸುತ್ತದೆ. ಅತಿಥಿಗಳು ಲಕೋಟೆ ನೀಡುವ ಬದಲು ಮೊಬೈಲ್ ಫೋನ್‌ನಿಂದ ಸ್ಕ್ಯಾನ್ ಮಾಡಿ ಹಣ ವರ್ಗಾಯಿಸುತ್ತಾರೆ. ಇದು ಕೇವಲ ಸ್ಮಾರ್ಟ್ ಕಲ್ಪನೆಯಷ್ಟೇ ಅಲ್ಲ, ಕಾಗದದ ಬಳಕೆ ಕಡಿಮೆ ಮಾಡುವ ಪರಿಸರ ಸ್ನೇಹಿ ಕ್ರಮವೂ ಹೌದು.

ನೆಟ್ಟಿಗರು ಈ ಹೊಸ ಆಲೋಚನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಡಿಜಿಟಲ್ (Digital) ಇಂಡಿಯಾದ ನಿಜವಾದ ರಾಯಭಾರಿ” ಎಂದು ಹಲವರು ಕರೆದರೆ, ಕೆಲವರು ಇದನ್ನು ನವಯುಗದ ಪ್ರಯೋಗಾತ್ಮಕ ಪ್ರಯತ್ನವೆಂದು ಶ್ಲಾಘಿಸಿದ್ದಾರೆ.

Mother : ಪ್ರಿಯಕರನ ಜೊತೆ ಸೇರಿ ಹೆತ್ತ ತಾಯಿಯ ಹತ್ಯೆ ಮಾಡಿದ ಅಪ್ರಾಪ್ತ ಮಗಳು.!
ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳ ಮಳೆ :

ವಿಡಿಯೋ ವೈರಲ್ ಆದ ನಂತರ ಅನೇಕ ಹಾಸ್ಯಾಸ್ಪದ ಮತ್ತು ವಿಶ್ಲೇಷಣಾತ್ಮಕ ಪ್ರತಿಕ್ರಿಯೆಗಳು ಬಂದಿವೆ.

  • ಒಬ್ಬ ಬಳಕೆದಾರ “ಇನ್ನು 100 ರೂಪಾಯಿ ಕೊಡೋಕೆ ಮುಜುಗರ!” ಎಂದು ಕಾಮೆಂಟ್ ಮಾಡಿದರೆ,
  • ಮತ್ತೊಬ್ಬ “ಸ್ಕ್ಯಾನ್ ಮಾಡಿ ಊಟ ಮಾಡಿ!” ಎಂದು ತಮಾಷೆ ಮಾಡಿದರು.
  • ಕೆಲವರು ಈ ಕ್ರಮವನ್ನು ಮೋಜಿನ ದೃಷ್ಟಿಯಿಂದ ತೆಗೆದುಕೊಂಡರೆ, ಇತರರು “ಮದುವೆ ಅಲ್ಲ, ವ್ಯವಹಾರ” ಎಂದು ಟೀಕಿಸಿದರು.
  • ಕೆಲವರು ಇದನ್ನು ಅತಿರೇಕವೆಂದು ಕರೆದರೆ, ಕೆಲವರು “ಇದು ಕಾಲದ ಬದಲಾವಣೆ, ಡಿಜಿಟಲ್ (Digital) ಯುಗದ ನಿಜವಾದ ಚಿತ್ರ” ಎಂದಿದ್ದಾರೆ.
School ಗೆ ಹೋಗಲ್ಲ ಎಂದ ಬಾಲಕನ ಹಠ ; ಮಂಚದ ಸಹಿತ ಶಾಲೆಗೆ ಕರೆತಂದ ಮನೆಯವರು ; ವಿಡಿಯೋ ವೈರಲ್.!
ಡಿಜಿಟಲ್ ಇಂಡಿಯಾದ ಹೊಸ ಮುಖ :

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ (Digital) ಪಾವತಿಗಳ ಬಳಕೆ ದ್ರುತಗತಿಯಲ್ಲಿದೆ. ಕಾಫಿ ಶಾಪ್‌ನಿಂದ ಮಾರುಕಟ್ಟೆವರೆಗೂ, ನಗದಿನ ಬದಲು ಸ್ಕ್ಯಾನ್ ಪೇ ಪದ್ದತಿ ಸಾಮಾನ್ಯವಾಗಿದೆ. ಈಗ ಮದುವೆಗಳಲ್ಲೂ ಈ ಟ್ರೆಂಡ್ ಕಾಣಿಸುತ್ತಿರುವುದು ಭಾರತದ ಪಾವತಿ ವ್ಯವಸ್ಥೆ ಎಷ್ಟು ವೇಗವಾಗಿ ಬದಲಾಗುತ್ತಿದೆ ಎಂಬುದಕ್ಕೆ ಸಾಕ್ಷಿ.

ಈ ಘಟನೆ “ಡಿಜಿಟಲ್ ಇಂಡಿಯಾ (Digital India)” ಅಭಿಯಾನದ ನಿಜವಾದ ಸ್ಪೂರ್ತಿಯೆಂದು ಹೇಳಬಹುದು. ಮುಂದಿನ ದಿನಗಳಲ್ಲಿ ಇಂತಹ ನಗದು ರಹಿತ ಉಡುಗೊರೆಗಳ ಟ್ರೆಂಡ್ ಇನ್ನಷ್ಟು ಜನಪ್ರಿಯವಾಗುವ ಸಾಧ್ಯತೆಯಿದೆ.

ವಿಡಿಯೋ :

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments