Tuesday, September 16, 2025

Janaspandhan News

HomeGeneral Newsವರ್ಷಕ್ಕೆ ಕೇವಲ ರೂ.520 ಕಟ್ಟಿದರೆ 10 ಲಕ್ಷ Insurance cover ; ಪೋಸ್ಟ್ ಆಫೀಸ್‌ನ ವಿಶೇಷ...
spot_img
spot_img
spot_img

ವರ್ಷಕ್ಕೆ ಕೇವಲ ರೂ.520 ಕಟ್ಟಿದರೆ 10 ಲಕ್ಷ Insurance cover ; ಪೋಸ್ಟ್ ಆಫೀಸ್‌ನ ವಿಶೇಷ ಯೋಜನೆ.!

- Advertisement -

ಜನಸ್ಪಂದನ ನ್ಯೂಸ್‌, ವಿಶೇಷ : ಮಾನವನ ಆಯಸ್ಸು ಎಷ್ಟರವರೆಗೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅಕಾಲಿಕ ಸಾವು ಅಥವಾ ಅಪಘಾತದಂತಹ ಅನಾಹುತಗಳ ಸಂದರ್ಭದಲ್ಲಿ ಕುಟುಂಬದ ಭವಿಷ್ಯವನ್ನು ಭದ್ರಗೊಳಿಸಲು ವಿಮೆ (Insurance) ಯ ಅಗತ್ಯತೆ ಹೆಚ್ಚಾಗಿದೆ. ಆದರೆ ಬಹುತೇಕ ವಿಮಾ ಪಾಲಿಸಿಗಳಿಗೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಪೇಮೆಂಟ್ಸ್ ಬ್ಯಾಂಕ್ (IPPB) ಮೂಲಕ ಲಭ್ಯವಿರುವ ಒಂದು ಆಕರ್ಷಕ ಯೋಜನೆ ವರ್ಷಕ್ಕೆ ಕೇವಲ ರೂ.520 ಪಾವತಿಸಿದರೆ ರೂ.10 ಲಕ್ಷದವರೆಗೆ ವಿಮಾ (Insurance) ರಕ್ಷಣೆ ಒದಗಿಸುತ್ತದೆ.

ಮದುವೆ ಭರವಸೆ ನೀಡಿ ವಕೀಲೆ ಮೇಲೆ ದುರುಳತನ : ‌Police ಕಾನ್ಸ್‌ಟೇಬಲ್ ಅರೆಸ್ಟ್.!
🔹 ರೂ.520 ಪಾವತಿಸಿದರೆ ಸಿಗುವ ಸೌಲಭ್ಯಗಳು :
  • ಅಪಘಾತದಿಂದ ಸಾವನ್ನಪ್ಪಿದಲ್ಲಿ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ ರೂ.10 ಲಕ್ಷ ಪರಿಹಾರ.
  • ಇಬ್ಬರು ಮಕ್ಕಳಿಗೆ ತಲಾ ರೂ.1 ಲಕ್ಷದವರೆಗೆ ಶಿಕ್ಷಣ ಸಹಾಯಧನ.
  • ಆಸ್ಪತ್ರೆ ಪ್ರವೇಶಕ್ಕೆ ದಿನಕ್ಕೆ ರೂ.1,000 (ಗರಿಷ್ಠ 10 ದಿನಗಳವರೆಗೆ).
  • ಕುಟುಂಬ ಬೇರೆ ನಗರದಲ್ಲಿ ವಾಸಿಸುತ್ತಿದ್ದರೆ ಸಾರಿಗೆ ವೆಚ್ಚಕ್ಕೆ ರೂ.25,000.
  • ಅಂತ್ಯಕ್ರಿಯೆಗೆ ರೂ.5,000 ನೆರವು.
Blood cancer : ರಕ್ತ ಕ್ಯಾನ್ಸರ್‌ನ 7 ಎಚ್ಚರಿಕೆ ಲಕ್ಷಣಗಳಿವು ; ಇವುಗಳನ್ನು ನಿರ್ಲಕ್ಷಿಸಬೇಡಿ.!
🔹 ರೂ.755 ಪಾವತಿಸಿದರೆ ಸಿಗುವ ಹೆಚ್ಚುವರಿ ಪ್ರಯೋಜನಗಳು :
  • ರೂ.15 ಲಕ್ಷದವರೆಗೆ ವಿಮಾ ಸುರಕ್ಷತೆ.
  • ಭಾಗಶಃ ಅಥವಾ ಸಂಪೂರ್ಣ ಅಂಗವೈಕಲ್ಯಕ್ಕೆ ಪರಿಹಾರ.
  • ವೈದ್ಯಕೀಯ ವೆಚ್ಚಗಳಿಗೆ ರೂ.1 ಲಕ್ಷದವರೆಗೆ ಕವರ್.
  • ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಗೆ ರೂ.1 ಲಕ್ಷ ಸಹಾಯ.
🔹 ಯಾವ ಅಪಘಾತಗಳಿಗೆ ಕವರ್ (Insurance cover) ಸಿಗುತ್ತದೆ?

ರಸ್ತೆ ಅಪಘಾತ ಮಾತ್ರವಲ್ಲದೆ, ರೈಲು ಅಥವಾ ಬಸ್ ಪ್ರಯಾಣದ ವೇಳೆ, ಎಲೆಕ್ಟ್ರಿಕ್ ಶಾಕ್, ಹಾವು ಕಡಿತ ಸೇರಿದಂತೆ ಹಲವಾರು ಅಪಘಾತಗಳಿಗೆ ಈ ವಿಮೆ (Insurance) ಅನ್ವಯಿಸುತ್ತದೆ.

Blood cancer : ರಕ್ತ ಕ್ಯಾನ್ಸರ್‌ನ 7 ಎಚ್ಚರಿಕೆ ಲಕ್ಷಣಗಳಿವು ; ಇವುಗಳನ್ನು ನಿರ್ಲಕ್ಷಿಸಬೇಡಿ.!
🔹 ಯಾರು ಪಾಲಿಸಿಗೆ ಅರ್ಹರು?
  • ವಯಸ್ಸು 18 ರಿಂದ 65 ವರ್ಷದೊಳಗಿನವರು.
  • ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾತೆ ಹೊಂದಿರಬೇಕು.
  • ಖಾತೆ ತೆರೆಯಲು ಕೇವಲ ರೂ.100 ಸಾಕು.

ಈ ಯೋಜನೆ ಪಡೆಯಲು ಸಮೀಪದ ಪೋಸ್ಟ್ ಆಫೀಸ್ ಪೇಮೆಂಟ್ಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ಪ್ರತಿವರ್ಷ ಪಾವತಿ ನೇರವಾಗಿ ಬ್ಯಾಂಕ್ ಖಾತೆಯಿಂದ ಕಟ್ ಮಾಡಿಸಿಕೊಳ್ಳುವ ವ್ಯವಸ್ಥೆಯೂ ಇದೆ.

ಹಗಲು ರಾತ್ರಿ Phone ಬಳಕೆ ಮಾಡುತ್ತಿದ್ದೀರಾ? ಹಾಗಾದ್ರೆ ನಿಮ್ಮ ದೇಹಕ್ಕೆ ಅಪಾಯ ಕಾದಿದೆ.!

👉 ಇದು ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ವಿಮಾ (Insurance) ಕವರ್ ನೀಡುವ ಅಂಚೆ ಇಲಾಖೆಯ ವಿಶೇಷ ಯೋಜನೆ. ಕುಟುಂಬದ ಭವಿಷ್ಯವನ್ನು ಭದ್ರಗೊಳಿಸಲು ಇಂತಹ ಯೋಜನೆಗಳ ಪ್ರಯೋಜನ ಪಡೆಯುವುದು ಒಳಿತು.


Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”

uric-acid

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದಿನ ಅಸಮತೋಲಿತ ಆಹಾರ ಪದ್ಧತಿ ಮತ್ತು ಆಧುನಿಕ ಜೀವನ ಶೈಲಿಯಿಂದಾಗಿ ಯೂರಿಕ್ ಆಮ್ಲ (Uric-Acid) ಹೆಚ್ಚಾಗುವ ಸಮಸ್ಯೆಯನ್ನು ಹಲವರು ಎದುರಿಸುತ್ತಿದ್ದಾರೆ. ದೇಹದಲ್ಲಿ ಯೂರಿಕ್ ಆಮ್ಲ ಪ್ರಮಾಣ ಹೆಚ್ಚಾದಾಗ ಕೀಲುಗಳಲ್ಲಿ ಊತ, ತೀವ್ರವಾದ ನೋವು ಉಂಟಾಗುತ್ತದೆ. ವೈದ್ಯಕೀಯವಾಗಿ ಇದನ್ನು ಗೌಟ್ (Gout) ಎಂದು ಕರೆಯಲಾಗುತ್ತದೆ.

ಈ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಹಲವು ಔಷಧಿಗಳು ದೊರೆಯುತ್ತವೆ. ಆದರೆ, ಅತಿ ಕಡಿಮೆ ಬೆಲೆಗೆ ದೊರೆಯುವ ವೀಳ್ಯದೆಲೆ ಸಹ ನೈಸರ್ಗಿಕ ಪರಿಹಾರ ನೀಡಬಲ್ಲದು.

Belagavi ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ : 2 ಜನರ ದುರ್ಮರಣ.!
ವೀಳ್ಯದೆಲೆಯ ಔಷಧೀಯ ಗುಣಗಳು :

ವೀಳ್ಯದೆಲೆಗಳಲ್ಲಿ ಉರಿಯೂತ ನಿವಾರಕ (Anti-inflammatory) ಹಾಗೂ ಉತ್ಕರ್ಷಣ ನಿರೋಧಕ (Antioxidant) ಗುಣಗಳು ಸಮೃದ್ಧವಾಗಿವೆ. ಇವು ದೇಹದಲ್ಲಿ ಶೇಖರಣೆ ಆಗಿರುವ ಯೂರಿಕ್ ಆಮ್ಲ (Uric-Acid) ವನ್ನು ಕರಗಿಸಲು ಸಹಕಾರಿಯಾಗುತ್ತವೆ.

ಜೊತೆಗೆ, ಕಿಡ್ನಿ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸಿ, ದೇಹದಿಂದ ತ್ಯಾಜ್ಯಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತವೆ.

ಒಂದೇ ಮನೆಯ ಇಬ್ಬರು sisters-in-law ನೆರೆಮನೆಯ ವಿವಾಹಿತನೊಂದಿಗೆ ಪರಾರಿ.!

ಆಯುರ್ವೇದದಲ್ಲೂ ಶತಮಾನಗಳಿಂದ ವೀಳ್ಯದೆಲೆಗಳನ್ನು ಹಲವು ರೋಗಗಳಿಗೆ ಬಳಸಲಾಗುತ್ತಿದೆ. ನಿಯಮಿತ ಸೇವನೆಯಿಂದ ದೇಹ ಡಿಟಾಕ್ಸ್ ಆಗಿ, ರಕ್ತದಲ್ಲಿನ ಯೂರಿಕ್ ಆಮ್ಲ (Uric-Acid) ದ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಕೀಲು ನೋವು ಕೂಡ ತಗ್ಗುತ್ತದೆ.

 Uric-Acid ನಿಯಂತ್ರಿಸಲು ವೀಳ್ಯದೆಲೆಯನ್ನು ಬಳಸುವ ವಿಧಾನ :

ಯೂರಿಕ್ ಆಮ್ಲ (Uric-Acid) ವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಪ್ರತಿದಿನ ಊಟದ ನಂತರ ಒಂದು ವೀಳ್ಯದೆಲೆಯನ್ನು ಸ್ವಚ್ಛವಾಗಿ ತೊಳೆದು ಜಗಿದು ತಿನ್ನುವುದು ಉತ್ತಮ. ಗಮನದಲ್ಲಿರಿಸಿಕೊಳ್ಳಬೇಕಾದ ಸಂಗತಿ ಏನೆಂದರೆ, ಉತ್ತಮ ಫಲಿತಾಂಶಕ್ಕಾಗಿ ವೀಳ್ಯದೆಲೆಯಲ್ಲಿ ಸುಣ್ಣ, ಬೆಲ್ಲ, ಕೊಬ್ಬರಿ ಅಥವಾ ಕಲ್ಲುಸಕ್ಕರೆ ಹಾಕದೇ ಸೇವಿಸುವುದು ಉತ್ತಮ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments