Tuesday, October 14, 2025

Janaspandhan News

HomeGeneral News3ನೇ ಮಹಡಿಯಿಂದ ಬಿದ್ದು ಪವಾಡ ಸದೃಶವಾಗಿ ಪಾರಾದ Person.!
spot_img
spot_img
spot_img

3ನೇ ಮಹಡಿಯಿಂದ ಬಿದ್ದು ಪವಾಡ ಸದೃಶವಾಗಿ ಪಾರಾದ Person.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಾಜಸ್ಥಾನದ ಜೋಧ್‌ಪುರದಲ್ಲಿ ಸಂಭವಿಸಿದ ಒಂದು ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂರನೇ ಮಹಡಿಯಿಂದ ಬಿದ್ದ ವ್ಯಕ್ತಿ (Person) ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಬಿದ್ದ ರಭಸಕ್ಕೆ ಅವನ ಪಾದದ ಮೂಳೆ ಮುರಿದಿದೆ.

ಹೇಗೆ ನಡೆದಿದೆ ಘಟನೆ?

ಸಂಜೆ 5:50ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ದಾಖಲಾಗಿದೆ. 25 ವರ್ಷದ ನಜೀರ್ ಎಂಬ ವ್ಯಕ್ತಿ (Person) ವೃತ್ತಿಯಿಂದ ಬಟ್ಟೆ ವ್ಯಾಪಾರಿ. ಘಟನೆ ನಡೆದ ಸಮಯದಲ್ಲಿ ಆತ ತನ್ನ ಅಂಗಡಿಯ ಗೋಡೌನ್‌ನಂತೆ ಬಳಸುತ್ತಿದ್ದ ಬಾಲ್ಕನಿಯಲ್ಲಿ ಬಟ್ಟೆಗಳ ಬಂಡಲ್ ಪರಿಶೀಲಿಸುತ್ತಿದ್ದ.

Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!

ಅಚಾನಕ್ ಸಮತೋಲನ ತಪ್ಪಿದ ನಜೀರ್ ನೇರವಾಗಿ ಮೂರನೇ ಮಹಡಿಯಿಂದ ಕೆಳಗೆ ಬಿದ್ದ. ಆದರೆ ಸುದೈವಶಾತ್ ನೆಲಕ್ಕೆ ಬದಲಾಗಿ, ಅಲ್ಲಿ ನಿಲ್ಲಿಸಲಾಗಿದ್ದ ಸ್ಕೂಟಿಯ ಮೇಲೆ ಬಿದ್ದ ಕಾರಣ ವ್ಯಕ್ತಿ (Person) ಪವಾಡ‌ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಿದ್ದು ಗಾಯಗೊಂಡ ಕೂಡಲೇ ಸ್ಥಳೀಯರು ವ್ಯಕ್ತಿ (Person) ಗೆ ಸಹಾಯಕ್ಕೆ ಧಾವಿಸಿದರು.

ಸಿಸಿಟಿವಿಯಲ್ಲಿ ಸೆರೆಹಿಡಿದ ದೃಶ್ಯ‌ :

ವೈರಲ್ ಆಗಿರುವ 10 ಸೆಕೆಂಡುಗಳ ಸಿಸಿಟಿವಿ ದೃಶ್ಯದಲ್ಲಿ, ನಜೀರ್ ಕೈಯಲ್ಲಿ ನೀರಿನ ಬಾಟಲಿಯೊಂದಿಗೆ ಹಿಂದಕ್ಕೆ ನಡೆದುಕೊಂಡು ಹೋಗುತ್ತಿರುವುದು ಕಾಣುತ್ತದೆ. ಕೆಲವೇ ಕ್ಷಣಗಳಲ್ಲಿ ಆತ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದ್ದಾನೆ. ಬಿದ್ದಾಗ ಭಾರೀ ಶಬ್ದ ಉಂಟಾಗಿ ಅಲ್ಲಿ ಇದ್ದವರು ಬೆಚ್ಚಿಬಿದ್ದರು.

Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”
ನೆಟ್ಟಿಗರ ಪ್ರತಿಕ್ರಿಯೆ :

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆ, ನೆಟ್ಟಿಗರು ಹಳೆಯ ಕಟ್ಟಡಗಳ ಸುರಕ್ಷತೆ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದಾರೆ. ಸುರಕ್ಷತಾ ಗ್ರಿಲ್ ಇಲ್ಲದ ಅಪಾಯಕಾರಿ ಬಾಲ್ಕನಿಯನ್ನು ನಿರ್ಮಿಸಿರುವ ಬಿಲ್ಡರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

“ಇದು ಭ್ರಷ್ಟಾಚಾರದ ಪರಿಣಾಮ. ಕಟ್ಟಡದಲ್ಲಿ ಸುರಕ್ಷತೆ ಕಡೆಗಣಿಸಿದ ಕಾರಣ ಈ ಘಟನೆ ನಡೆದಿದೆ” ಎಂದು ಒಬ್ಬ ಬಳಕೆದಾರರು ಕೋಪ ವ್ಯಕ್ತಪಡಿಸಿದರೆ, “ಬಟ್ಟೆ ಬಂಡಲ್‌ಗಳನ್ನು ಲೋಡ್ ಮಾಡಲು ಉದ್ದೇಶಪೂರ್ವಕವಾಗಿ ಬಾಲ್ಕನಿಯನ್ನು ತೆರೆದಿಟ್ಟಿರಬಹುದು” ಎಂದು ಇನ್ನೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ.

knife : ಡಿವೋರ್ಸ್‌ ಪ್ರಕರಣ ; ಕೋರ್ಟ್‌ನಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿ.!
ಸುರಕ್ಷತಾ ಕ್ರಮಗಳ ಅಗತ್ಯ :

ಈ ಘಟನೆ ಹಳೆಯ ಕಟ್ಟಡಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಜನರ ಜೀವ ಭದ್ರತೆಗೆ ಕಟ್ಟಡ ನಿರ್ಮಾಣದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಮೂರನೇ ಮಹಡಿಯಿಂದ ಬಿದ್ದ ವ್ಯಕ್ತಿ (Person) ಯ ವಿಡಿಯೋ :


Panipuri ಕಡಿಮೆ ಕೊಟ್ಟ ಕೋಪದಲ್ಲಿ ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ ; ಪೊಲೀಸರ ಸಂಧಾನ.!

Panipuri

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ಜನರು ಬೇಡಿಕೆ ಈಡೇರಿಸಲು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಗುಜರಾತ್‌ನ ವಡೋದರ ನಗರದಲ್ಲಿ ನಡೆದ ಘಟನೆಯೊಂದು ಅಚ್ಚರಿ ಮೂಡಿಸಿದೆ.

ಬೀದಿ ಆಹಾರ ಮಾರಾಟಗಾರ ಗೋಲ್ಗಪ್ಪ/ಪಾನಿಪುರಿ (Panipuri) ಯಲ್ಲಿ ಕಡಿಮೆ ಪೂರಿ ನೀಡಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆ ತಡೆ ನಡೆಸಿದ್ದಾರೆ!

ಸುರ್‌ಸಾಗರ್ ಸರೋವರ ಪ್ರದೇಶದಲ್ಲಿ ನಡೆದ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಪಾನಿಪುರಿ (Panipuri) ಮಾರಾಟಗಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಾಣಿಸಿದೆ.

Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”

ಆಕೆಯ ಆರೋಪದ ಪ್ರಕಾರ, 20 ರೂ.ಗೆ ಆರು ಪೂರಿ ಸಿಗಬೇಕಿದ್ದಲ್ಲಿ ಕೇವಲ ನಾಲ್ಕು ಪೂರಿ ಮಾತ್ರ ನೀಡಿದ್ದಾರೆ ಎಂದು ಆಕ್ರೋಶಗೊಂಡಿದ್ದಾಳೆ.

ಕೋಪಗೊಂಡ ಮಹಿಳೆ ನೇರವಾಗಿ ರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದು, ತನ್ನ ಬೇಡಿಕೆ ಈಡೇರಿಸುವವರೆಗೆ ಎದ್ದು ನಿಲ್ಲುವುದಿಲ್ಲ ಎಂದು ಹಠ ಹಿಡಿದಿದ್ದಾಳೆ.

ಪರಿಣಾಮವಾಗಿ, ಆ ಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಸ್ಥಳೀಯರು ಸಮಾಧಾನಪಡಿಸಲು ಪ್ರಯತ್ನಿಸಿದರೂ ಮಹಿಳೆ ಒಪ್ಪದೇ ಹಠ ಹಿಡಿದಿದ್ದಾಳೆ.

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಕೆಯನ್ನು ರಸ್ತೆ ಬದಿಗೆ ಕರೆದುಕೊಂಡು ಹೋದರು. ಈ ವೇಳೆ ಮಹಿಳೆ ಕಣ್ಣೀರು ಸುರಿಸುತ್ತಾ “ವ್ಯಾಪಾರದಲ್ಲಿ ನ್ಯಾಯ ಇರಬೇಕು” ಎಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾಳೆ.

“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!

ಅಂತಿಮವಾಗಿ, ಪೊಲೀಸರು ಮಹಿಳೆಗೆ ಮತ್ತೊಮ್ಮೆ ಗೋಲ್ಗಪ್ಪ (Panipuri) ತಂದುಕೊಟ್ಟ ನಂತರ ಘಟನೆಗೆ ತೆರೆ ಬಿದ್ದಿತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಗೋಲ್ಗಪ್ಪ (Panipuri) ಗಾಗಿ ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆಯ ವಿಡಿಯೋ :

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments